ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊಕಾನ್‌ ಸಾಲ ಪ್ರಕರಣ ದೀಪಕ್‌ ಕೊಚ್ಚರ್‌ಗೆ ನೋಟಿಸ್‌

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಡಿಯೊಕಾನ್‌ಗೆ ಸಾಲ ಮಂಜೂರಾತಿ  ಮಾಡಿರುವ ಪ್ರಕರಣದಲ್ಲಿ ತೆರಿಗೆ ತಪ್ಪಿಸಿರುವುದಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌ ಅವರ ಪತಿ ದೀಪಕ್ ಕೊಚ್ಚರ್‌ ಅವರಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ಜಾರಿ ಮಾಡಿದೆ.

ದೀಪಕ್‌ ಅವರು ಎನ್‌ಯುಪವರ್‌ ರಿನ್ಯೂವಬಲ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ನೆಲೆಯಲ್ಲಿ ಈ ನೋಟಿಸ್‌ ನೀಡಲಾಗಿದೆ. ವೈಯಕ್ತಿಕ ಹಣಕಾಸು, ಹಿಂದಿನ ಕೆಲ ವರ್ಷಗಳ ಐ.ಟಿ ರಿಟರ್ನ್ಸ್‌, ಇತರ ಸಂಸ್ಥೆಗಳ ಜತೆಗಿನ ವಹಿವಾಟು ಮತ್ತು   ಹಣಕಾಸು ವಿವರಗಳನ್ನು ಒದಗಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವರವಾದ ಪ್ರಶ್ನಾವಳಿಯನ್ನೂ ಕಳಿಸಲಾಗಿದ್ದು, ಸಂಸ್ಥೆಯ ವಹಿವಾಟಿನ ಸ್ವರೂಪದ ಬಗ್ಗೆ ಉತ್ತರ ನೀಡಲು ಸೂಚಿಸಲಾಗಿದೆ. ಹಣಕಾಸಿನ ವಹಿವಾಟು ಮತ್ತು ಇತರ ಸಂಸ್ಥೆಗಳ ಜತೆಗಿನ ಸಂಬಂಧ ಕುರಿತು ಇಲಾಖೆಯು ತನಿಖೆ ಆರಂಭಿಸಿದೆ. ಸಂಸ್ಥೆಯ ಜತೆ ಸಂಪರ್ಕ ಇರಿಸಿಕೊಂಡಿರುವ ಹಲವರಿಗೆ ನೋಟಿಸ್‌ ನೀಡಲಾಗಿದೆ. ಉತ್ತರ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ಸಿಬಿಐ ತನಿಖೆ: ಪ್ರಕರಣ ಸಂಬಂಧ ನಡೆಸುತ್ತಿರುವ ಪ್ರಾಥಮಿಕ ವಿಚಾರಣೆಯಲ್ಲಿ ಹೆಸರಿಸಲಾಗಿರುವ ದೀಪಕ್‌ ಅವರನ್ನು ಶೀಘ್ರದಲ್ಲಿಯೇ ಕರೆಯಿಸಿ ಮಾಹಿತಿ ಪಡೆಯಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

2012ರಲ್ಲಿ ವಿಡಿಯೊಕಾನ್‌ಗೆ ₹ 3,250 ಕೋಟಿ ಸಾಲ ಮಂಜೂರಾತಿ ಕುರಿತು ಸಿಬಿಐ, ಐಸಿಐಸಿಐ ಬ್ಯಾಂಕ್‌ನ ಕೆಲ ಅಧಿಕಾರಿಗಳನ್ನು ಪ್ರಶ್ನಿಸಿದೆ. 

ದೀಪಕ್‌ ಕೊಚ್ಚರ್‌ ಅವರು ಸ್ಥಾಪಿಸಿರುವ ಎನ್‌ಯುಪವರ್‌ ರಿನ್ಯೂವಬಲ್ಸ್‌ ಮತ್ತು ವಿಡಿಯೊಕಾನ್‌ ಸಮೂಹದ ಪ್ರವರ್ತಕ ವೇಣುಗೋಪಾಲ್‌ ಧೂತ್‌ ಅವರ ಮಧ್ಯೆ ಪರಸ್ಪರ ನೆರವಾಗುವ ಒಳಒಪ್ಪಂದ ನಡೆದಿರುವುದರಿಂದಲೇ ಸಾಲ ಮಂಜೂರು ಮಾಡಲಾಗಿದೆ ಎಂದು ಪತ್ರಿಕಾ ವರದಿಗಳಲ್ಲಿ ಆರೋಪಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳನ್ನು ಆಧರಿಸಿ ಕ್ರಿಮಿನಲ್‌ ಅಪರಾಧ ಕುರಿತು ತನಿಖೆ ನಡೆಸಲು ಎಫ್‌ಐಆರ್‌ ದಾಖಲಿಸಲಾಗುವುದು.

ಎನ್‌ಯುಪವರ್‌ ರಿನ್ಯೂವಬಲ್ಸ್‌ನ ಹೂಡಿಕೆದಾರರು ಐಸಿಐಸಿಐ ಬ್ಯಾಂಕ್‌ನ ಸಾಲಗಾರರಾಗಿಲ್ಲ. ಐಸಿಐಸಿಐ ಬ್ಯಾಂಕ್‌, ವಿಡಿಯೊಕಾನ್‌ಗೆ ಸಾಲ ಮಂಜೂರು ಮಾಡಿದ ಬ್ಯಾಂಕ್‌ ಒಕ್ಕೂಟದ ಭಾಗವಾಗಿದೆ. ಸಾಲ ಮಂಜೂರಾತಿಯಲ್ಲಿ ಅಕ್ರಮಗಳನ್ನು ಎಸಗಲಾಗಿಲ್ಲ. ಸಿಇಒ ಚಂದಾ ಕೊಚ್ಚರ್‌ ಅವರಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT