ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಅಸಹಾಯಕರಿಗೆ ವಾತ್ಸಲ್ಯ ಕಿಟ್ ವಿತರಣೆ

Last Updated 29 ನವೆಂಬರ್ 2020, 2:13 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಬಡಕುಟುಂಬಗಳನ್ನು ಬಡತನದಿಂದ ಮುಕ್ತಗೊಳಿಸುವುದೇ ಮಾನವೀಯ ಧರ್ಮ. ಕಠಿಣ ಆರೋಗ್ಯ ಸಮಸ್ಯೆಗೆ ಒಳಪಟ್ಟವರ, ಒಂಟಿಯಾಗಿರುವವರ, ವಯೋವೃದ್ಧರ, ಅಂಗವಿಕಲರ ಸಹಾಯಕ್ಕೆ ನಿಲ್ಲುವ ಕಾರ್ಯಕ್ರಮವೇ ವಾತ್ಸಲ್ಯ ಯೋಜನೆ’ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ. ತ್ಯಾಗರಾಜ್ ತಿಳಿಸಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಹಾಗೂ ಕಂಬದಹಳ್ಳಿಯಲ್ಲಿ ಬಡವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.

ಹಿರಿಯರು ಮಾತಿನಲ್ಲಿ ಶಾಪ ಕೊಡಬೇಕಾಗಿಲ್ಲ. ಮನದಲ್ಲಿ ನೊಂದು ಕಣ್ಣೀರು ಹಾಕಿದರೂ, ಅವರ ಕಣ್ಣೀರೇ ಶಾಪವಾಗಿ ಪರಿಣಮಿಸುತ್ತದೆ. ಆಧುನಿಕ ಸಮಾಜದಲ್ಲಿ ನಿರ್ಗತಿಕರನ್ನು, ರೋಗಿಗಳನ್ನು, ವೃದ್ಧರನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಇಳಿ ವಯಸ್ಸಿನಲ್ಲಿ ಅವರಿಗೆ ಅಭಯ ನೀಡಿ ಪ್ರೀತಿ-ವಿಶ್ವಾಸದಿಂದ ಆರೈಕೆ ಮಾಡಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಪ್ರೇರಣೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 151 ಮಂದಿಗೆ ಮಾಸಾಶನ ನೀಡಲಾಗುತ್ತಿದೆ. ಅವರಲ್ಲಿ ಕಡುಬಡವರಾದ 75 ಮಂದಿಗೆ ಅವರಿಗೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದರು.

ಮೇಲ್ವಿಚಾರಕಿ ಜ್ಯೋತಿ, ಒಕ್ಕೂಟದ ಪದಾಧಿಕಾರಿ ಗೀತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT