ಬಾಗೇಪಲ್ಲಿ: ಇಲ್ಲಿನ ತಾಲ್ಲೂಕು ಕಚೇರಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ. ಪ್ರಭು ಅವರು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹಲವು ವಿಚಾರಗಳ ಕುರಿತು ಚರ್ಚೆ ಮಾಡಿದರು.

ರೆಕಾರ್ಡ್ ಕೊಠಡಿಗೆ ತೆರಳಿ, ಜನರ ಅರ್ಜಿಗಳನ್ನು ಪರಿಶೀಲಿಸಿದರು. ತಹಶೀಲ್ದಾರ್ ಕಚೇರಿ ಜಮಾಯಿಸಿದ್ದ ಜನರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು, ‘ಜನರಿಗೆ ಅಗತ್ಯವಿರುವ ದಾಖಲೆಗಳು ಮತ್ತು ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು. ಜನರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬಾರದು’ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.

ನಂತರ ರೆಕಾರ್ಡ್ ಕೊಠಡಿಗೆ ಭೇಟಿ ನೀಡಿ, ವಿವಿಧ ಕಡತಗಳನ್ನು ಪರಿಶೀಲಿಸಿದರು. ಪೋಡಿ, ಜನರ ಭೂಮಿಗಳ ದಾಖಲೆಗಳ ವಿಲೇವಾರಿ ಕಡತಗಳನ್ನು ಪರಿಶೀಲನೆ ಮಾಡಿದರು. ಅವಧಿ ಒಳಗೆ ಜನರಿಗೆ ಭೂಮಿಯ ದಾಖಲೆಗಳನ್ನು ತಲುಪಿಸಬೇಕು ಎಂದು ರೆಕಾರ್ಡ್ ಕೊಠಡಿ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.

ತಾಲ್ಲೂಕು ಕಚೇರಿಗೆ ಆಗಮಿಸಿದ ಜನರು ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ನೀಡಿದರು. ‘ನಮ್ಮ ಭೂಮಿಯನ್ನು ಪೋಡಿ ಮಾಡಿಸಲು ಸರ್ಕಾರಿ ಭೂದಾಖಲೆಗಳನ್ನು ವಿತರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಾರ್ವಜನಿಕರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಜನಸಾಮಾನ್ಯರು ಕೋರುವ ಜಮೀನಿನ ದಾಖಲೆಗಳು ಇದ್ದರೆ, ಅವುಗಳನ್ನು ವಿತರಿಸಬೇಕು. ಇಲ್ಲವಾದಲ್ಲಿ, ದಾಖಲೆಗಳು ಇಲ್ಲ ಎಂಬುದಾಗಿ ಹಿಂಬರಹ ನೀಡುವಂತೆ’ ತಹಶೀಲ್ದಾರ್ ಮನೀಷಾ ಎನ್ ಪತ್ರಿ ಅವರಿಗೆ ಸಲಹೆ ನೀಡಿದರು.

ಭೂ ದಾಖಲೆಗಳನ್ನು ಅವಧಿಯೊಳಗೆ ಪೂರೈಸುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸ್ಕ್ಯಾನಿಂಗ್ ಕಾರ್ಯ ನಡೆಯುತ್ತಿರುವುದರಿಂದ ದಾಖಲೆಗಳನ್ನು ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ಜನರು ತಾಳ್ಮೆ ವಹಿಸಬೇಕು. ಮುಂದಿನ ದಿನಗಳಲ್ಲಿ ಭೂ ದಾಖಲೆಗಳನ್ನು ಆನ್ಲೈನ್ನಲ್ಲಿ ಪಡೆಯಲು ಅಗತ್ಯ ಕ್ರಮ ತಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿನ ಆರೋಗ್ಯ ಚಿಕಿತ್ಸೆ, ಶಿಕ್ಷಣ, ಪಟ್ಟಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ನಿವೇಶನ, ಮನೆಗಳ ಹಂಚಿಕೆ, ಇ–ಖಾತೆಗಳ ಬಗ್ಗೆ ಕಾಲ ಕಾಲಕ್ಕೆ ಸಭೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ವಹಿಸಬಾರದು ಎಂದು ಸೂಚನೆ ನೀಡಲಾಗಿದೆ ಎಂದರು.

ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಕಟ್ಟಡದ ಮೊದಲ ಮಹಡಿಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಇರುವುದರಿಂದ ಮಹಿಳೆಯರು, ವೃದ್ಧರಿಗೆ ಹತ್ತಿ, ಇಳಿಯಲು ತೊಂದರೆಯಾಗಿದೆ. ಕಚೇರಿಯಲ್ಲಿ ಕಾಲಿಡಲು ಜಾಗವೂ ಇರುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ತಾಲ್ಲೂಕು ಕಚೇರಿ ಕಟ್ಟಡವನ್ನು ನವೀಕರಿಸಲಾಗುತ್ತಿದೆ. ನವೀಕರಣ ಕಾಮಗಾರಿ ಮುಕ್ತಾಯವಾದ ಕೂಡಲೇ ಕಚೇರಿಯನ್ನು ಸ್ಥಳಾಂತರಿಸಲಾಗುವುದು’ ಎಂದರು.

ಉಪ ವಿಭಾಗಾಧಿಕಾರಿ ಜಿ.ಅಶ್ವಿನ್, ತಹಶೀಲ್ದಾರ್ ಮನೀಷಾ ಎನ್. ಪತ್ರಿ, ಚೇಳೂರು ತಹಶೀಲ್ದಾರ್ ಬಿ.ಕೆ. ಶ್ವೇತಾ, ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಕಂದಾಯ ಅಧಿಕಾರಿಗಳು ಹಾಜರಿದ್ದರು.

ಜನರಿಗೆ ದಾಖಲೆ ನೀಡುವುದೇ ಜಿಲ್ಲೆ, ತಾಲ್ಲೂಕು ಆಡಳಿತ ಗುರಿ

ಜಿಲ್ಲೆಯಲ್ಲಿ 8 ತಾಲ್ಲೂಕುಗಳಿವೆ. ವಾರದಲ್ಲಿ ಒಂದು ದಿನ ಒಂದು ತಾಲ್ಲೂಕಿಗೆ ಭೇಟಿ ನೀಡಿ ಕಡತಗಳ ವಿಲೇವಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವೈಖರಿ ಸಾರ್ವಜನಿಕರ ಅಹಲವಾಲುಗಳನ್ನು ಸ್ವೀಕರಿಸುತ್ತೇನೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ ಹಲವರು ಪೋಡಿ ಮತ್ತು ಭೂ ದಾಖಲೆಗಲನ್ನು ನೀಡುವಂತೆ ಅರ್ಜಿ ಹಾಕಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು. ಸಾರ್ವಜನಿಕರಿಗೆ ಆನ್ಲೈನ್ ಭೂದಾಖಲೆಗಳನ್ನು ನೀಡುವಂತೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಸಂಸದ ಡಾ.ಕೆ.ಸುಧಾಕರ್ ಅವರು ಸೂಚನೆ ನೀಡಿದ್ದಾರೆ. ಬಾಗೇಪಲ್ಲಿ ಚೇಳೂರು ತಾಲ್ಲೂಕುಗಳ ಭೂ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಜನರಿಗೆ ದಾಖಲೆಗಳನ್ನು ನೀಡುವುದೇ ಜಿಲ್ಲಾಡಳಿತ ತಾಲ್ಲೂಕು ಆಡಳಿತದ ಗುರಿ ಆಗಿದೆ ಎಂದರು.

ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಸಿಲಿಂಡರ್ ಬಳಸಿದರೆ ಕ್ರಮ

ಜಿಲ್ಲೆಯಲ್ಲಿ ಪ್ರಸ್ತುತ 12 ಸಾವಿರ ಅಡುಗೆ ಅನಿಲ ಸಿಲಿಂಡರ್ಗಳ ದಾಸ್ತಾನು ಇದ್ದು ಅಡುಗೆ ಅನಿಲದ ಕೊರತೆ ಉದ್ಭವಿಸಿಲ್ಲ. ಸಾರ್ವಜನಿಕರು ಸಿಲಿಂಡರ್ಗಳನ್ನು ವೃಥಾ ವ್ಯರ್ಥ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಸಲಹೆ ನೀಡಿದರು. ಹೋಟೆಲ್ ತಿಂಡಿ ತಿನಿಸು ಮಳಿಗೆಗಳು ಮನೆಗಳು ವಿದ್ಯಾರ್ಥಿ ನಿಲಯಗಳು ಮತ್ತು ಶಾಲೆಗಳಿಗೆ ಅಗತ್ಯವಾಗಿ ಅಡುಗೆ ಅನಿಲವನ್ನು ಪೂರೈಸಲಾಗುತ್ತಿದೆ. ಹೋಟೆಲ್ ತಿಂಡಿ ತಿನಿಸಿನ ಅಂಗಡಿಗಳು ಬೀದಿಬದಿ ವ್ಯಾಪಾರಿಗಳು ಗೃಹಬಳಕೆಯ ಅಡುಗೆ ಅನಿಲವನ್ನು ಬಳಸಬಾರದು. ವಾಣಿಜ್ಯ ಉದ್ದೇಶದ ಅಡುಗೆ ಅನಿಲವನ್ನು ಮಾತ್ರವೇ ಬಳಸಬೇಕು ಎಂದು ಹೇಳಿದರು. ಒಂದು ವೇಳೆ ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆ ಅಡುಗೆ ಅನಿಲ ಬಳಸಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.