ಚೇಳೂರು: ತಾಲ್ಲೂಕಿನ ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಿವಾರಪಲ್ಲಿ ಭಾನುವಾರ ಇತಿಹಾಸ ಮರುಕಳಿಸಿತು. ಸುಮಾರು ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಗ್ರಾಮದ ಜಾತ್ರಾ ಮಹೋತ್ಸವ ಈ ಬಾರಿ ಅತ್ಯಂತ ವೈಭವೋಪೇತವಾಗಿ ನೆರವೇರಿತು.

ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು, ಮಕ್ಕಳು ಎಂಬ ಭೇದವಿಲ್ಲದೆ ಇಡೀ ಗ್ರಾಮವೇ ಒಂದಾಗಿ ಈ ಭಕ್ತಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅನೇಕ ವರ್ಷಗಳಿಂದ ನಿಂತು ಹೋಗಿದ್ದ ಈ ಜಾತ್ರೆಯನ್ನು ಪುನಃ ಆರಂಭಿಸಲು ಗ್ರಾಮದ ಹಿರಿಯರು ಡಿ.ವಿ ವೆಂಕಟಪ್ಪ, ಯುವ ಮುಖಂಡರಾದ ಮಹೀಂದ್ರ ರೆಡ್ಡಿ ಹಾಗೂ ವೆಂಕಟಶಿವರೆಡ್ಡಿ ಪ್ರಮುಖ ಪಾತ್ರ ವಹಿಸಿದರು.

ಗ್ರಾಮದ ಐಕ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಇವರ ಶ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಭಾನುವಾರ ಬೆಳಗ್ಗೆಯಿಂದಲೇ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮದ ಹಿರಿಯರಾದ ಡಿ.ವಿ.ವೆಂಕಟಪ್ಪ ಸಾಂಪ್ರದಾಯಿಕವಾಗಿ ತಮಟೆ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ನೂರಾರು ಮಹಿಳೆಯರು ಭಕ್ತಿಯಿಂದ ಕಲಶ ಹೊತ್ತು ಗ್ರಾಮದ ಏಳು ದೇವತೆಗಳ ದರ್ಶನ ಪಡೆದು ಪುನೀತರಾದರು. 30 ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಸಿಕ್ಕ ಈ ಸಂಭ್ರಮವು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ಮೂಡಿಸಿತ್ತು. ಈ ಬಾರಿಯ ಜಾತ್ರೆ ವಿಶೇಷವೆಂದರೆ ಗ್ರಾಮದ ಪ್ರತಿಯೊಬ್ಬರ ಮನೆಯ ಮುಂದೆಯೂ ಸುಂದರವಾದ ಪೆಂಡಾಲ್ ಹಾಕಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಾಮೂಹಿಕ ಅನ್ನಸಂತರ್ಪಣೆ ಬದಲು, ಪ್ರತಿ ಮನೆಯವರು ತಮ್ಮ ಶಕ್ತ್ಯಾನುಸಾರ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಆಮಂತ್ರಿಸಿ, ಹಬ್ಬದೂಟದ ವ್ಯವಸ್ಥೆ ಮಾಡುವ ಮೂಲಕ ಅತಿಥಿ ಸತ್ಕಾರ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-16-171482429

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.