ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಕೈವಾರದಲ್ಲಿ ಅಪರೂಪದ ಮದುವೆ

Last Updated 29 ನವೆಂಬರ್ 2021, 7:51 IST
ಅಕ್ಷರ ಗಾತ್ರ

ಚಿಂತಾಮಣಿ: ಮದುವೆಗಳು ಸ್ವರ್ಗದಲ್ಲಿನಿಶ್ಚಯವಾಗುತ್ತದೆ ಎನ್ನುವಂತೆ ಭಾನುವಾರ ಕೈವಾರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. ಇದು ಮಕ್ಕಳ ಮದುವೆ ಎಂದುಕೊಳ್ಳಬೇಡಿ. ಗಂಡಿಗೆ 28 ವರ್ಷ, ಹೆಣ್ಣಿಗೆ 25 ವರ್ಷ.

ಹಸೆಮಣೆಯೇರಿದ ಗಂಡು ವಿಷ್ಣು ಬೆಂಗಳೂರಿನವರು, ಹೆಣ್ಣು ಜ್ಯೋತಿ ಕೋಲಾರ ಮೂಲದವರು. ಇಬ್ಬರೂ ಪದವೀಧರರಾಗಿದ್ದು, ಬೆಂಗಳೂರಿನ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಗಂಡು ಸುಮಾರು 3 ಅಡಿ, ಹೆಣ್ಣು 2.8 ಅಡಿ ಎತ್ತರದವರಾಗಿದ್ದಾರೆ.
ಎರಡು ಕುಟುಂಬದವರ ಸಮ್ಮುಖದಲ್ಲಿ ವಿಧಿವಿಧಾನಗಳಂತೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಎಲ್ಲ ಶಾಸ್ತ್ರಗಳನ್ನು ನೆರವೇರಿಸಲಾಯಿತು.

ಯೋಗಿನಾರೇಯಣ ತಾತಯ್ಯನವರ ಸಮ್ಮುಖದಲ್ಲಿ ವಿವಾಹವಾಗಿದ್ದು ಜೀವನದ ಕೊನೆಯವರೆಗೂ ಅನ್ಯೋನ್ಯವಾಗಿ, ಪರಸ್ಪರ ಸಹಕಾರದಿಂದ ನಡೆದುಕೊಳ್ಳುವುದಾಗಿ ಪ್ರತಿಜ್ಞೆ ಕೈಗೊಂಡರು. ವಿಶೇಷವಾಗಿ ಕಂಡ ಈ ಅಪರೂಪದ ಜೋಡಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳನ್ನು ಆಕರ್ಷಿಸಿದರು. ಇವರ ದಾಂಪತ್ಯ ಜೀವನ ಅನ್ಯೋನ್ಯವಾಗಿ, ಸಂತೋಷವಾಗಿರಲಿ ಎಂದು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT