ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಬಲಾವಣೆಯಿಂದ ಹೊಸ ಹುಮ್ಮಸ್ಸು

ಕಾರ್ಯಾಗಾರದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ
Last Updated 22 ಏಪ್ರಿಲ್ 2022, 3:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:ಉತ್ತಮ ಶಿಕ್ಷಕರಿಂದ ಮಾತ್ರವೇ ಗುಣಮಟ್ಟದ ಶಿಕ್ಷಣದ ನಿರೀಕ್ಷೆ ಸಾಧ್ಯ. ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕು. 50, 60ವರ್ಷದಷ್ಟು ಹಳೆಯ ವೈದ್ಯಕೀಯ ಶಿಕ್ಷಣವನ್ನೇ ಈಗಲೂ ಪಡೆಯಬೇಕು ಎನ್ನುವುದಾದರೆ ಯಾರಿಗೆ ನಷ್ಟ ಎನ್ನುವುದನ್ನುಯೋಚಿಸಿ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಎಸ್‌ಜೆಸಿಐಟಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎಸ್‌ಜೆಸಿಐಟಿ ಕಾಲೇಜು ಆಶ್ರಯದಲ್ಲಿ ನಡೆದ ನೂತನ ಶಿಕ್ಷಣ ನೀತಿ ಪಠ್ಯಕ್ರಮ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳು ಕಾಲಕಾಲಕ್ಕೆ ಬದಲಾವಣೆ ಆಗಬೇಕಿದೆ. ಬದಲಾವಣೆಯಿಂದ ಹೊಸ ಹುಮ್ಮಸ್ಸು, ಚೈತನ್ಯ ಪಡೆದು ಕಾಲದ ನಾವೂ ಪ್ರಗತಿ ಸಾಧಿಸಬಹುದು. ಬದಲಾವಣೆ ಸ್ವಾಗತಿಸದಿದ್ದರೆ ಬೆಳವಣಿಗೆ ಅಸಾಧ್ಯ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ಹೊಸ ಶಿಕ್ಷಣ ನೀತಿಯು ಸಮಕಾಲೀನ ಗುಣಾತ್ಮಕ ಹಾಗೂ ಪರಿಪೂರ್ಣ ಶೈಕ್ಷಣಿಕ ಭದ್ರತೆಯ ಆಶಯ ಹೊಂದಿದೆ ಎಂದರು.

ಆಧುನಿಕ ತಂತ್ರಜ್ಞಾನದ ನೆರವನ್ನು ಬೋಧನೆಗೆ ಬಳಸುವುದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಉತ್ತಮ ಶಿಕ್ಷಕರು ಇದ್ದ ಕಡೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಉತ್ತಮ ಫಲಿತಾಂಶ ಪಡೆದರಷ್ಟೇ ಸಾಲದು ಉತ್ತಮ ಸಮಾಜ ನಿರ್ಮಾಣವೂ ನಮ್ಮ ಜವಾಬ್ದಾರಿ ಆಗಬೇಕಿದೆ ಎಂದು ಹೇಳಿದರು.

ಮಂಗಳಾನಂದನಾಥ ಸ್ವಾಮೀಜಿ, ವಿಟಿಯು ಕುಲಸಚಿವ ಆನಂದ ದೇಶಪಾಂಡೆ, ವಿಶೇಷಾಧಿಕಾರಿ ಸಾಗರ್ ಎಸ್. ಹಾಲಭಾವಿ, ಕೆ.ಎಸ್. ಶ್ರೀಧರ, ಎಸ್‌ಜೆಸಿಐಟಿ ಪ್ರಾಂಶುಪಾಲ ಜಿ.ಟಿ. ರಾಜು, ಕುಲಸಚಿವ ಸುರೇಶ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶಿವರಾಮರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT