ಸೋಮವಾರ, ಸೆಪ್ಟೆಂಬರ್ 16, 2019
27 °C

ಪರಿಸರ ರಕ್ಷಣೆ ಇಂದಿನ ಅಗತ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಹರ್ಷಿ ಟ್ರಸ್ಟ್ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಮತ್ತು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳು, ಜಮಖಾನೆಗಳ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಟ್ರಸ್ಟ್‌ ನಿರ್ದೇಶಕ ಬಿ.ಎಂ.ರಾಮಕೃಷ್ಣಪ್ಪ ಮಾತನಾಡಿ, ‘ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬರೂ ಗಿಡಮರಗಳ ರಕ್ಷಣೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಗಿಡಗಳನ್ನು ಪೋಷಿಸುವ ಜತೆಗೆ ಮನೆಯಲ್ಲಿ, ನೆರೆಹೊರೆಯವರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಟ್ರಸ್ಟ್‌ ನಿರ್ದೇಶಕ ಎಂ.ನರಸಿಂಹಮೂರ್ತಿ ಮಾತನಾಡಿ, ‘ವಿದ್ಯಾರ್ಥಿಗಳು ಗಿಡಗಳನ್ನು ಚೆನ್ನಾಗಿ ಬೆಳೆಸಿದರೆ ಮುಂದೆ ದೊಡ್ಡ ಮರಗಳಾಗಿ ಹಣ್ಣುಗಳು ಬಿಟ್ಟು ನೆರಳನ್ನು ನೀಡುತ್ತದೆ. ಮುಂದೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಪಕ್ಷಿಗಳಿಗೆ ಸಹ ಉಪಯೋಗವಾಗುತ್ತದೆ. ಹೀಗಾಗಿ, ಮಕ್ಕಳು ಗಿಡಗಳ ರಕ್ಷಣೆಗೆ ಮುಂದಾಗಬೇಕು’ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಆರ್.ಕೃಷ್ಣಪ್ಪ, ಕಾರ್ಯದರ್ಶಿ ವಿ.ಎಂ.ರಮೇಶ್, ಎ.ಎಂ.ವೀಣಾ, ಸಿ.ಎಲ್.ಮಂಜುಳಾ, ಸಿ.ಎಲ್.ಕಿಶೋರ್, ಆರ್.ಮಂಜುಳಾ ಹಾಗೂ ಶಾಲೆಯ ಸಹ ಶಿಕ್ಷಕಿ ಪ್ರಭಾವತಿ, ಚಂದ್ರಕಲಾದೇವಿ, ಕೆ.ಸುಷ್ಮಾ, ಶೈಲಜಾ, ಮಮತಾ, ಮುಖ್ಯ ಶಿಕ್ಷಕ ಶ್ರೀನಿವಾಸ್, ಸಹ ಶಿಕ್ಷಕರಾದ ಸಿದ್ದೇಶಪ್ಪ, ಎಸ್.ಆರ್.ನಾರಾಯಣಮೂರ್ತಿ, ಅನಸೂಯ, ಪಿ.ಶ್ರೀನಾಥ್‌ ಉಪಸ್ಥಿತರಿದ್ದರು.

Post Comments (+)