ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ವಿನಾಯ್ತಿ: ಪ್ರಯೋಜನ ಯಾರಿಗೆ ?

ತೋಟದಲ್ಲೇ ಕೊಳೆಯುತ್ತಿರುವ ಹಣ್ಣು, ತಕರಾರಿ, ಹೂವು l ಸರ್ಕಾರದ ನಡೆಗೆ ರೈತರ ಆಕ್ರೋಶ
Last Updated 28 ಮೇ 2021, 2:56 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಯಾವುದೇ ನದಿ, ನಾಲೆಗಳಿಲ್ಲದೆ ಕೊಳವೆ ಬಾವಿಗಳಿಂದ ನೂರಾರು ಅಡಿ ಆಳದಿಂದ ನೀರು ಮೇಲೆತ್ತಿ ಬಯಲು ಸೀಮೆಯಲ್ಲಿ ರೈತರು ಸಮೃದ್ಧವಾಗಿ ತರಕಾರಿ, ಹಣ್ಣು, ಹೂ ಬೆಳೆಯುತ್ತಾರೆ.

ಲಾಕ್ ಡೌನ್ ನಿಂದ ಬೆಳೆ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ತೋಟಗಳಲ್ಲೇ ನಾಶ
ವಾಗುತ್ತಿದೆ. ಸಾಲ ಸೋಲ ಮಾಡಿ ಬೆಳೆದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ರೈತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಮಳೆ ಕೊರತೆ, ಅಂತರ್ಜಲ ಕುಸಿತ, ಕೂಲಿ ಕಾರ್ಮಿಕರ ಸಮಸ್ಯೆ, ವಿದ್ಯುತ್ ಸಮಸ್ಯೆ, ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ಏರಿಕೆ ನಡುವೆಯೂ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತೋಟಗಳಲ್ಲಿ ಕೊಳೆಯುತ್ತಿರುವ ಹಣ್ಣು, ತರಕಾರಿ ಕಂಡು ರೈತರು ಕಣ್ಣೀರು ಸುರಿಸುತ್ತಿದ್ದಾರೆ.

’6 ಎಕರೆ ಜಮೀನಿನಲ್ಲಿ ಬಜ್ಜಿ ಮೆಣಸಿನಕಾಯಿ ಬೆಳೆದಿದ್ದೆ. ಉತ್ತಮವಾಗಿ ಬೆಳೆ ಬಂದು ಫಸಲಿನ ಶ್ಯಾಂಪಲ್ ಆರಂಭವಾಗಿತ್ತು. ಎರಡು ಬಾರಿ ಸ್ಯಾಂಪಲ್ ಕಾಯಿ ಕೊಯ್ಲು ಮಾಡಿ 10-10 ಕ್ವಿಂಟಲ್ ಮಾರುಕಟ್ಟೆಗೆಸಾಗಿಸಿದ್ದೆ. ಕೆ.ಜಿಗೆ ₹34-35 ಮಾರಾಟವಾಯಿತು. ಪೂರ್ಣವಾಗಿ ಫಸಲು ಕೊಯ್ಲಿಗೆ ಬರುವ ಸಮಯಕ್ಕೆ ಲಾಕ್ ಡೌನ್ ಘೋಷಣೆ ಆಯಿತು. 15 ಕ್ವಿಂಟಲ್ ಕಾಯಿ ಕಷ್ಟಪಟ್ಟು ಮಾರುಕಟ್ಟೆಗೆ ಸಾಗಿಸಿದೆ. ಕೆ.ಜಿ.ಗೆ ₹4-5 ಕೇಳುವರಿಲ್ಲ. ಚಿಕ್ಕಬಳ್ಳಾಪುರದ ಮಾರುಕಟ್ಟೆಗೆ ಸಾಗಿಸಿದೆ. ಅಲ್ಲೂ ಮಾರಾಟವಾಗಲಿಲ್ಲ ಎಂದು ನೊಂದು ನುಡಿಯುತ್ತಾರೆ’ ಅನಕಲ್ ರೈತ ತ್ಯಾಗರಾಜ್.

ಗಿಡಗಳಿಂದ ಕಾಯಿ ಕೊಯ್ಲು ಮಾಡುವುದನ್ನು ನಿಲ್ಲಿಸಿದೆ. ಕಾಯಿಗಳು ಗಿಡಗಳಲ್ಲಿ ಕೊಳೆಯುತ್ತಿವೆ. ಸುಮಾರು ₹2.5 ಲಕ್ಷದಿಂದ 3ಲಕ್ಷ ಖರ್ಚು ಮಾಡಿದ್ದೇನೆ. ಆರಂಭದ ಸ್ಯಾಂಪಲ್ ನಿಂದ ₹40ಸಾವಿರ ಮಾತ್ರ ಗಳಿಸಿದ್ದೇನೆ. ಆರಂಭದ ಬೆಲೆ ಇದ್ದರೆ ₹6-7 ಲಕ್ಷ ಸಂಪಾದನೆ ಮಾಡುತ್ತಿದ್ದೆ. ಬಂಡವಾಳಕ್ಕಾಗಿ ಸಾಲ ಮಾಡಿದ್ದೇನೆ. ಸಾಲ ಹೇಗೆ ತೀರಿಸಬೇಕು. ಅದು ಬಡ್ಡಿಗೆ ಬಡ್ಡಿ ಬೆಳೆಯುತ್ತದೆ. ಹೀಗೆ ರೈತ ಸದಾಸಂಕಷ್ಟ ಬೆನ್ನಿಗೆ ಅಂಟಿಸಿಕೊಂಡೇ ಜನಿಸಿರುತ್ತಾನೆ’ ಎಂದು ನೊಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT