ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮೂರ ತಿಂಡಿ | ಬಾಗೇಪಲ್ಲಿ: ಭಾಷಾ ಭಾಯಿ ಬ್ರೆಡ್ ಬೋಂಡಾ

Published : 29 ಸೆಪ್ಟೆಂಬರ್ 2024, 7:17 IST
Last Updated : 29 ಸೆಪ್ಟೆಂಬರ್ 2024, 7:17 IST
ಫಾಲೋ ಮಾಡಿ
Comments

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ಸರ್ದಾರ್ ಭಾಷಾ ಮಾರಾಟ ಮಾಡುವ ಬ್ರೆಡ್ ಬೋಂಡಾ ಹಾಗೀ ಬೋಂಡಾ, ಬಜ್ಜಿ, ವಡೆ, ಹೀರೇಕಾಯಿ ಬಜ್ಜಿಗೆ ಭಾರಿ ಬೇಡಿಕೆ ಇದೆ.

ಪಟ್ಟಣದ 10ನೇ ವಾರ್ಡ್‍ನ ನೂರಾನಿ ಮಸೀದಿಯ ಬಳಿ ಸರ್ದಾರ್ ಭಾಷಾ ವಾಸವಿದ್ದಾರೆ. ಎಸ್‍ಎಸ್‍ಎಲ್‌ಸಿ ಪಾಸಾಗಿದ್ದಾರೆ. ನಂತರ ಕಾಲೇಜಿಗೆ ಹೋಗಿಲ್ಲ. ಸಣ್ಣವರಿದ್ದಾಗ ಮನೆಯಲ್ಲಿ ಅಮ್ಮ ಮಾಡುವ ಬಜ್ಜಿ, ಬೋಂಡಾ, ವಡೆ ಮಾಡುವುದನ್ನು ನೋಡಿ ಕಲಿತಿದ್ದಾರೆ.

10 ವರ್ಷಗಳ ಹಿಂದೆ ವಿವಿಧ ಗ್ಯಾರೇಜ್‌ನಲ್ಲಿ ಕೆಲಸ ಮಾಡಿದ್ದಾರೆ. ಬಾಡಿಗೆ ಆಟೊ ಚಾಲನೆ ಮಾಡುತ್ತಿದ್ದರು. ನಂತರ ಪಟ್ಟಣದ ಮುಖ್ಯರಸ್ತೆಯ ಪಶು ಆಸ್ಪತ್ರೆ ಮುಂದೆ ಆಟೊದಲ್ಲಿ ತಮ್ಮ ಪತ್ನಿ ಜೊತೆಗೆ ಬಜ್ಜಿ, ಬೋಂಡಾ, ವಡೆ, ಬ್ರೆಡ್ ಬೋಂಡಾ ವ್ಯಾಪಾರ ಮಾಡುತ್ತಿದ್ದಾರೆ.

ಒಂದು ಬ್ರೆಡ್ ಬೋಂಡಾಕ್ಕೆ ₹20 ರಂತೆ ಮಾರಾಟವಾಗುತ್ತಿದೆ. ಇದರ ಜೊತೆಗೆ ಕಡಲೆ ಹಿಟ್ಟಿನ ಜಬ್ಬಿ, ಬೋಂಡಾ, ವಡೆ, ಮೊಸರುಬೋಂಡಾ, ಹೀರೇಕಾಯಿ ಬಜ್ಜಿಯೂ ಹೆಚ್ಚು ಮಾರಾಟವಾಗುತ್ತದೆ.

‘ಬೇರೆಲ್ಲೂ ಸಿಗದೇ ಇರುವ ಹಾಗೂ ವಿಶೇಷವಾಗಿ ತಯಾರಿಸುವ ಬ್ರೆಡ್ ಬೋಂಡಾ ಅಂದರೆ ನಮಗೆ ಭಾರಿ ಇಷ್ಟು. ಬ್ರೆಡ್ ಮಧ್ಯ ಪಲ್ಯ ಸೇರಿಸಿ ಕಡಲೆಹಿಟ್ಟಿನಲ್ಲಿ ಮಿಶ್ರಣ ಹಾಕುವ ಬಿಸಿ ಬಿಸಿ ಬೋಂಡಾ ಅಚ್ಚುಮೆಚ್ಚು. ಮನೆಮಂದಿಗೆ ಬೋಂಡಾಗಳನ್ನು ಖರೀದಿ ಮಾಡುತ್ತೇವೆ. ತಿನ್ನಲು ರುಚಿ ಇದೆ’ ಎಂದು ಪಟ್ಟಣದ ಕೇಬಲ್ ಅಪರೇಟರ್ ಶ್ರೀನಿವಾಸ್ ತಿಳಿಸಿದರು.

‘ಎಣ್ಣೆ, ಕಡಲೆಹಿಟ್ಟು ದರ ಹೆಚ್ಚಾಗಿದೆ. ತಿಂಡಿ, ತಿನಿಸುಗಳಿಗೆ 8 ಕೆ.ಜಿ ಎಣ್ಣೆ, 3 ಕೆ.ಜಿ ಕಡಲೆ ಹಿಟ್ಟು, ಅಡುಗೆ ಅನಿಲ ಸೇರಿದರೆ ₹3 ಸಾವಿರ ಖರ್ಚು ಆಗುತ್ತಿದೆ. ಪ್ರತಿ 4 ಸಾವಿರ ವ್ಯಾಪಾರ ಆಗಿ, ₹1 ಸಾವಿರ ಲಾಭ ಬರುತ್ತದೆ’ ಎಂದು ಬೋಂಡಾ ವ್ಯಾಪಾರಿ ಸರ್ದಾರ್ ಭಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT