ಚಿಂತಾಮಣಿ: ನಗರದ ಹೊರವಲಯದ ಮಾಡಿಕೆರೆ ಪುರಾಣ ಪ್ರಸಿದ್ಧ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ರಥೋತ್ಸವ ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರು ದರ್ಶನ ಪಡೆದರು. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಹೋಮ, ಹವನ, ಅಭಿಷೇಕ, ಕಳಶ ಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಉತ್ಸವ ಮೂರ್ತಿಯನ್ನು ಮಂಗಳವಾದ್ಯ ಮತ್ತು ವೇದಘೋಷಗಳೊಂದಿಗೆ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಧರ್ಮದರ್ಶಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸಾವಿರಾರು ಭಕ್ತರು ರಥವನ್ನು ಎಳೆದು ಪುನೀತರಾದರು. ದೇವಾಲಯ ಸುತ್ತ ಮತ್ತು ಗ್ರಾಮದ ಜೋಡಿ ವೃತ್ತದಲ್ಲಿ ರಥ ಸಂಚರಿಸಿತು.

ಮೆರವಣಿಗೆಯಲ್ಲಿ ಮಂಗಳವಾದ್ಯ, ತಮಟೆವಾದ್ಯ, ಕೋಲಾಟ, ಫಂಡರಿ ಭಜನೆ, ಜಾನಪದ ಮತ್ತು ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ರಾತ್ರಿ ‘ಶ್ರೀ ಕೃಷ್ಣ ಪಾಂಡವ ವಿಜಯಂ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಮತ್ತು ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಮೊದಲ ದಿನ ಅಂಕುರಾರ್ಪಣೆ ಮತ್ತು ಧ್ವಜಾರೋಹಣ, ಎರಡನೇ ದಿನ ಕಲಶ ಸ್ಥಾಪನೆ ಮತ್ತು ಕಲ್ಯಾಣೋತ್ಸವ ಹಾಗೂ ಭಾನುವಾರ ರಥೋತ್ಸವ ನೆರವೇರಿತು.

ಚಿಂತಾಮಣಿ: ನಗರದ ಹೊರವಲಯದ ಚಿಂತಾಮಣಿ–ಶ್ರೀನಿವಾಸಪುರ ರಸ್ತೆಯ ಮಾಡಿಕೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದೇವಾಲಯದ ಒಳಗೆ ಹಾಗೂ ಹೊರಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ದೂರದ ಸ್ಥಳಗಳಿಂದ ಬೆಳಿಗ್ಗೆಯೆ ಭಕ್ತರು ದೇವಾಲಯಕ್ಕೆ ಆಗಮಿಸಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಾವಿರಾರು ಜನ ಭಕ್ತರು ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಹೋಮ, ಹವನ ಹೂವಿನ ಅಲಂಕಾರ, ಅಭಿಷೇಕ, ಪ್ರಧಾನಪೂಜೆ, ಕಳಶ ಸ್ಥಾಪನೆ, ನವಗ್ರಹಗಳ ಪೂಜೆ, ನಾಗದೇವರ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.
ಲಕ್ಷ್ಮೀನರಸಿಂಹಸ್ವಾಮಿ ಉತ್ಸವಮೂರ್ತಿಯನ್ನು ಮಂಗಳವಾದ್ಯ ಮತ್ತು ವೇಧಘೋಷಣೆಯಲ್ಲಿ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದಲ್ಲಿ ಸ್ವಾಮಿಯ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಭಕ್ತರ ನಾಮ ಸ್ಮರಣೆ ಮುಗಿಲುಮುಟ್ಟಿತು. ಅರ್ಚಕವೃಂದ ಮತ್ತೊಮ್ಮೆ ರಥದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ನೆರವೇರಿಸಿದರು. ದೇವಾಲಯದ ಧರ್ಮದರ್ಶಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.

ಸಾವಿರಾರು ಭಕ್ತರು ಅವರೊಂದಿಗೆ ಕೈಜೋಡಿಸಿ ರಥವನ್ನು ಎಳೆದು ಪುನೀತರಾದರು. ತೇರಿಗೆ ಬಾಳೆಹಣ್ಣು, ಧವನವನ್ನು ಸಮರ್ಪಿಸಿದರು. ನಂತರ ದೇವಾಯದ ಸುತ್ತಲೂ ಹಾಗೂ ಗ್ರಾಮದ ಜೋಡಿ ವೃತ್ತದಲ್ಲಿ ರಥ ಸಂಚರಿಸಿತು. ಸಾವಿರಾರು ಜನ ಭಕ್ತರು ರಥವನ್ನು ಎಳೆದು ನಾಮಸ್ಮರಣೆ ಮಾಡಿದರು.
ರಥೋತ್ಸವದ ಮೆರವಣಿಗೆಯಲ್ಲಿ ಮಂಗಳವಾದ್ಯ, ತಮಟೆವಾದ್ಯ, ಕೋಲಾಟ, ಫಂಡರಿ ಭಜನೆ, ಜಾನಪದ ತಂಡಗಳು ಸೇರಿದಂತೆ ಹಲವಾರು ಜನಪದ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು. ರಾತ್ರಿ ಶ್ರೀ ಕೃಷ್ಣ ಪಾಂಡವ ವಿಜಯಂ ಪೌರಾಣಿಕ ನಾಟಕದ ಪ್ರದರ್ಶನ ಭಕ್ತರ ಮನತಣಿಸಿತು.
ಚಿಂತಾಮಣಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾವಿರಾರು ಮಂದಿಗೆ ಮಜ್ಜಿಗೆ, ಪಾನಕ, ಕೋಸುಂಬರಿಯನ್ನು ವಿತರಣೆ ಮಾಡಲಾಯಿತು. ಆಗಮಿಸಿದ್ದ ಭಕ್ತರಿಗೆ ದೇವಾಲಯದಿಂದ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.

ರಥೋತ್ಸದ ಅಂಗವಾಗಿ ಮೊದಲ ದಿನ ಅಂಕುರಾರ್ಪಣೆ, ಧ್ವಜಾರೋಹಣ, ಎರಡನೇ ದಿನ ಕಲಶ ಪ್ರತಿಷ್ಠಾಪನೆ, ನಿತ್ಯ ಹೋಮ, ಶ್ರೀದೇವಿ–ಭೂದೇವಿ ಸಮೇತ ಕಲ್ಯಾಣೋತ್ಸವ ಮೂರನೇ ದಿನ ಭಾನುವಾರ ಬ್ರಹ್ಮರಥೋತ್ಸವ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.