ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಸರ್ಕಾರ ತಕ್ಷಣವೇ ರೈತರ ಸಭೆ ಕರೆದು ಪ್ರತಿ ಎಕರೆಗೆ ₹ 3 ಕೋಟಿ ಪರಿಹಾರ ನಿಗದಿಗೊಳಿಸಬೇಕು. ಭೂಮಿ ನೀಡಿದ ಪ್ರತಿ ರೈತರ ಮನೆಯ ಒಬ್ಬರಿಗೆ ಉದ್ಯೋಗ ನೀಡಬೇಕು. ಇದಕ್ಕೆ ಒಪ್ಪದ ರೈತರಿಗೆ ಪರ್ಯಾಯ ಜಮೀನು ನೀಡಬೇಕು ಎಂದು ಆಗ್ರಹಿಸಿ ಮಾರ್ಚ್ 23ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತರ ಪರ ಹೋರಾಟ ಸಮಿತಿ ತಿಳಿಸಿದೆ.

ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಶ್, ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ 2,823 ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಫಲವತ್ತಾದ, ಕೃಷಿ ಯೋಗ್ಯ ನೀರಾವರಿ ಜಮೀನು ಕೈ ಬಿಡುವಂತೆ ರೈತ ಸಂಘ ಪ್ರತಿಭಟಿಸಿತ್ತು. ಆ ಫಲವಾಗಿ 491 ಎಕರೆಯನ್ನು ಸರ್ಕಾರ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿದೆ ಎಂದರು.

ಉಳಿದ 2,332 ಎಕರೆ ಜಮೀನು ಸ್ವಾಧೀನಕ್ಕೆ ಪಡೆಯಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ವಿಚಾರವಾಗಿ ತಕ್ಷಣ ರೈತರ ಸಭೆ ಕರೆದು ಭೂ ಪರಿಹಾರ ನಿಗದಿಗೊಳಿಸಬೇಕು ಎಂದರು.

ತಾಲ್ಲೂಕಿನ ಕುಡವತಿ ಗ್ರಾಮದಲ್ಲಿ ಬಲಾಢ್ಯರು ದಾರಿಯನ್ನೇ ಮುಚ್ಚಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ರೈತರು ತಹಶೀಲ್ದಾರ್ ಮತ್ತು ಕಂದಾಯ ಸಚಿವರಿಗೆ ದೂರು ನೀಡಿದ್ದಾರೆ. ಸರ್ಕಾರ ತಕ್ಷಣವೇ ಅಲ್ಲಿ ರಸ್ತೆ ಮಾಡಿಸಲು ಕ್ರಮವಹಿಸಬೇಕು ಎಂದು ಕೋರಿದರು.

ಅಮರಾವತಿ ಗ್ರಾಮದಲ್ಲಿ ಉತ್ತರ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ ರೈತರಲ್ಲಿ ಶಕ್ತಿವಂತರಿಗೆ ಕೃಷಿ ಯೋಗ್ಯ ಜಮೀನು ನೀಲಾಗಿದೆ. ಬಲಹೀನ ದಲಿತರಿಗೆ ಕೃಷಿ ಯೋಗ್ಯವಲ್ಲದ ಜಮೀನುಗಳನ್ನು ತೋರಿಸಲಾಗುತ್ತಿದೆ. ಈ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

ರಾಮಾಂಜಿನಪ್ಪ, ಎನ್.ಮೂರ್ತಿ, ಸುರೇಶ್, ಸುಬ್ರಹ್ಮಣ್ಯ, ಚಂದ್ರೇಗೌಡ, ನವೀನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.