ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಸಾಕಾಣಿಕೆ: ಬಹಿರಂಗ ಹರಾಜು

Last Updated 19 ಜುಲೈ 2021, 4:06 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆ-ಕುಂಟೆಗಳಲ್ಲಿ ಮೀನು ಮರಿ ಸಾಕಾಣಿಕೆ ಮಾಡಲು ಜುಲೈ 19ರಂದು ಸೋಮವಾರ ಬೆಳಿಗ್ಗೆ 11.30ಗಂಟೆಗೆ ಪಂಚಾಯಿತಿ ಕಾರ್ಯಾಲಯದಲ್ಲಿ ಅಧ್ಯಕ್ಷೆ ಎನ್. ವೆಂಕಟಲಕ್ಷ್ಮಮ್ಮ ಅವರ ಅಧ್ಯಕ್ಷತೆಯಲ್ಲಿ ಬಹಿರಂಗ ಹರಾಜು ಕರೆಯಲಾಗಿದೆ.

ಆಸಕ್ತಿಯುಳ್ಳ ಸವಾಲ್ದಾರರು ಅಂದು ಬೆಳಿಗ್ಗೆ 9 ಗಂಟೆಗೆ ₹ 2,000 ಠೇವಣಿ (ಮಂಗಡ) ಕಟ್ಟಿ ಸವಾಲು ಕೂಗುಬಹುದಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ. ಮಹೇಶ್ ತಿಳಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ 30 ಕೆರೆ, ಕುಂಟೆಗಳನ್ನು ಗುರುತಿಸಿ ಮೀನು ಸಾಕಾಣಿಕೆ ಮಾಡಲು ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಯಾವುದೇ ಕಾರಣಕ್ಕೂ ನಿಷೇಧಿತ ಮೀನುಗಳನ್ನು ಸಾಕಾಣಿಕೆ ಮಾಡಲು ಅವಕಾಶವಿಲ್ಲ. ಹರಾಜಿನ ಅವಧಿ ಆಗಸ್ಟ್ 1ರಿಂದ 2023ರಜುಲೈ 31ರವರೆಗೆ ಆಗಿರುತ್ತದೆ.

ಹರಾಜು ಅಖೈರಾದವರು ಮೀನುಗಾರಿಕೆ ಇಲಾಖೆಯ ನಿಯಮಾವಳಿ ಅನುಸಾರ ನಡೆದುಕೊಳ್ಳಬೇಕು. ಪಂಚಾಯಿತಿಯಿಂದ ವಿಧಿಸಿರುವ ನಿಯಮ ಉಲಂಘಿಸಿದರೆ ಹರಾಜು ರದ್ದುಗೊಳಿಸಿ ಮರುಹರಾಜು ಹಾಕಲಾಗುವುದು. ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT