ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಹೂ ಬೇಸಾಯ

ಹೂವಿಗೆ ಮನಸೋತ ಚಿಕ್ಕಬಳ್ಳಾಪುರ ತಾಲ್ಲೂಕಿನ ರೈತರು
Last Updated 22 ಸೆಪ್ಟೆಂಬರ್ 2022, 4:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಹೂ ಬೇಸಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೂ ಬೆಳೆಯುವ ವಿಸ್ತೀರ್ಣ ಹೆಚ್ಚಿದಂತೆ ಉತ್ಪಾದನೆಯೂಏರಿಕೆಯಾಗಿದೆ.

ತಾಲ್ಲೂಕಿನ ಗ್ರಾಮೀಣ ಭಾಗವನ್ನು ಒಮ್ಮೆ ಸುತ್ತಿದರೆ ಹೊಲಗಳಲ್ಲಿ ಚೆಂಡು, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಗ್ಲಾಡಿಯೊಲಸ್, ಗುಲಾಬಿ ಮತ್ತಿತರ ಹೂಗಳ ಘಮ ಮೂಗಿಗೆ ಅಡರುತ್ತದೆ. ಕಣ್ಣುಗಳಿಗೆ ಹೂವಿನ ಅಂದ ಚೆಂದಗಳು ಹಿತವನ್ನು ನೀಡುತ್ತದೆ. ಸೇವಂತಿಗೆಯಲ್ಲಿಯೇ ನಾನಾ ನಮೂನೆಯ ಹೂಗಳನ್ನು ಬೆಳೆಯಲಾಗುತ್ತದೆ.

ಹೂ ಬೇಸಾಯ ತಾಲ್ಲೂಕಿನ ರೈತರ ಬದುಕಿಗೆ ಆಸರೆಯಾಗಿದೆ. ಕನಿಷ್ಠ ನಾಲ್ಕೈದು ಗುಂಟೆ ಜಮೀನಿನಿಂದ ಹಿಡಿದು ಎಕರೆಗಳ ಲೆಕ್ಕದಲ್ಲಿ
ತಾಲ್ಲೂಕಿನ ರೈತರು ಹೂ ಬೇಸಾಯದಲ್ಲಿ ತೊಡಗಿದ್ದಾರೆ.ಸಣ್ಣ, ಮಧ್ಯಮ ಮತ್ತು ದೊಡ್ಡ ಹಿಡುವಳಿದಾರರು ಎನ್ನದೆ ಎಲ್ಲ ರೀತಿಯ ರೈತರು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಹೂ ಬೇಸಾಯ ಮಾಡುತ್ತಿದ್ದಾರೆ.ತಾಲ್ಲೂಕಿನಲ್ಲಿ ಬೆಳೆಯುವ ಹೂ ರಾಜ್ಯದ ವಿವಿಧ ಭಾಗಗಳಿಗೆ ರವಾನೆ ಆಗುತ್ತದೆ. ಆಂಧ್ರಪ್ರದೇಶ,
ತಮಿಳುನಾಡು, ಮಹಾರಾಷ್ಟ್ರ, ಕೇರಳ, ನವದೆಹಲಿಗೆ ‍ಪೂರೈಕೆಆಗುತ್ತದೆ.

ಚಿಕ್ಕಬಳ್ಳಾಪುರದ ಕೆ.ವಿ.ಕ್ಯಾಂಪಸ್ ಬಳಿಯ ತಾತ್ಕಾಲಿಕ ಹೂ ಮಾರುಕಟ್ಟೆಗೆ ಒಮ್ಮೆ ಭೇಟಿ ನೀಡಿದರೆ ಹೂ ಬೇಸಾಯದ ಮೇಲೆ ತಾಲ್ಲೂಕಿನ ರೈತರು ಎಷ್ಟರ ಮಟ್ಟಿಗೆ ಅವಲಂಬಿತರಾಗಿದ್ದಾರೆ ಎನ್ನುವುದು ತಿಳಿಯುತ್ತದೆ.

ತಾಲ್ಲೂಕು ತೋಟಗಾರಿಕಾ ಇಲಾಖೆಯ ಅಂಕಿ ಅಂಶಗಳುಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಹೂ ಬೇಸಾಯದ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚುತ್ತಿರುವುದನ್ನು ಸಾರುತ್ತವೆ.

2008–09ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ 782 ಹೆಕ್ಟೇರ್‌ಗಳಲ್ಲಿ ಹೂ ಬೇಸಾಯ ನಡೆಯುತ್ತಿತ್ತು. ಎಲ್ಲವೂ ಸೇರಿ 5,060 ಟನ್ ಹೂ ಉತ್ಪಾದನೆ ಆಗುತ್ತಿತ್ತು. ಈ 14 ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಿದೆ.2021–22ನೇ ಸಾಲಿನಲ್ಲಿ 2,515 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೇಸಾಯ ನಡೆಯುತ್ತಿದೆ. 19,325 ಟನ್ ಹೂ ಉತ್ಪಾದನೆ ಆಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡುತ್ತದೆ. ಪ್ರಸಕ್ತ ವರ್ಷದ ಅವಧಿ ಪೂರ್ಣವಾಗಿಲ್ಲದ ಕಾರಣ ಈ ಉತ್ಪಾದನೆಯ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದೆ.

ಪ್ರಸಕ್ತ ವಿವರ:2021–22ರಲ್ಲಿ ಚಿಕ್ಕಬಳ್ಳಾಪುರತಾಲ್ಲೂಕಿನಲ್ಲಿ 481 ಹೆಕ್ಟೇರ್‌ನಲ್ಲಿ ಚೆಂಡು ಹೂ ಬೆಳೆಯಲಾಗಿದ್ದು 5,772 ಟನ್ ಉತ್ಪಾದನೆಯಾಗಿದೆ. ಸೇವಂತಿಗೆಯನ್ನು 651 ಹೆಕ್ಟೇರ್‌ನಲ್ಲಿ ಬೆಳೆದಿದ್ದು 9,765 ಹೆಕ್ಟೇರ್ ಉತ್ಪಾದನೆ ಆಗಿದೆ. ಗ್ಲಾಡಿಯೊಲಸ್ 194 ಹೆಕ್ಟೇರ್‌ನಲ್ಲಿ ಬೇಸಾಯ ಮಾಡಿದ್ದು 291 ಟನ್ ಉತ್ಪಾದನೆ ಆಗಿದೆ. 1,189 ಹೆಕ್ಟೇರ್‌ನಲ್ಲಿ ಹೆಕ್ಟೇರ್‌ನಲ್ಲಿ ಗುಲಾಬಿ ಬೇಸಾಯವನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ರೈತರು ಕೈಗೊಂಡಿದ್ದು 3,567 ಟನ್ ಉತ್ಪಾದನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT