ಶುಕ್ರವಾರ, ಆಗಸ್ಟ್ 19, 2022
27 °C

‘ಸ್ವಚ್ಛತೆಯಿಂದ ಆರೋಗ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ‘ಸಾರ್ವಜನಿಕರು ತಮ್ಮ ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಬೇಕು’ ಎಂದು ತಾಲ್ಲೂಕು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಪಿ. ಪ್ರಕಾಶರೆಡ್ಡಿ ಸಲಹೆ ನೀಡಿದರು.

ನಗರದ ಕನಂಪಲ್ಲಿ ವಾರ್ಡ್‌ನಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ, ನಗರಸಭೆ ಮಾಡಲಿ ಎಂದು ಕೈಕಟ್ಟಿ ಕೂರುವುದು ಸರಿಯಲ್ಲ. ಪೂರ್ವಿಕರ ಕಾಲದಲ್ಲಿ ವಾರಕ್ಕೆ ಒಂದು ದಿನ ವಾರದ ಕೆಲಸ ಎಂದು ಮಾಡುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಈ ಪದ್ಧತಿಗೆ ತಿಲಾಂಜಲಿ ನೀಡಲಾಗಿದೆ ಎಂದು ತಿಳಿಸಿದರು.

ಮಂಡಳಿಯ ನಿರ್ದೇಶಕರಾದ ಕೃಷ್ಣಾರೆಡ್ಡಿ, ಗಂಗುಲಪ್ಪ, ಶಂಕರರೆಡ್ಡಿ, ರಾಮಕೃಷ್ಣಪ್ಪ, ವೆಂಕಟಾಚಲಪತಿ, ಚಕ್ರಪಾಣಿ, ವಿಜಯಕುಮಾರಿ, ಈಶ್ವರರೆಡ್ಡಿ, ಕೆ.ಎಂ. ಜಯರಾಮರೆಡ್ಡಿ, ಲಕ್ಷ್ಮೀನಾರಾಯಣ್, ಶಿಕ್ಷಕರ ಸಂಘದ ಮುಖಂಡರಾದ ಆರ್. ಅಶೋಕ್ ಕುಮಾರ್, ಕೆ.ವಿ. ಚೌಡಪ್ಪ, ಎಂ.ಎ. ಪ್ರಕಾಶ್, ಶ್ರೀನಿವಾಸರೆಡ್ಡಿ, ಚೌಡಪ್ಪ, ದಶರಥ್, ಶಿವಣ್ಣ, ಶ್ರೀರಾಮಪ್ಪ, ರಾಜಗೋಪಾಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.