ಗೌರಿಬಿದನೂರು: ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

ಕೃಷಿ ಸಹಾಯಕ ನಿರ್ದೇಶಕಿ ರಾಜೇಶ್ವರಿ ಮಾತನಾಡಿ, ಮುಂಗಾರು ಹಂಗಾಮು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಸೇರಿದಂತೆ ಕೃಷಿ ಪರಿಕರಗಳನ್ನು ರೈತರಿಗೆ ನಿಗದಿತ ಬೆಲೆಯಲ್ಲಿ ವಿತರಣೆ ಮಾಡಿ, ರಶೀದಿ ನೀಡಬೇಕು ಎಂದು ಹೇಳಿದರು.

ಮಾರಾಟ ಮಳಿಗೆಗಳಲ್ಲಿ ಅಧಿಕೃತ ಪರವಾನಗಿ, ರಸಗೊಬ್ಬರ ದಾಸ್ತಾನು ಮತ್ತು ದರಪಟ್ಟಿಯನ್ನು ಸಾರ್ವಜನಿಕವಾಗಿ ಕಾಣುವಂತೆ ಕಡ್ಡಾಯವಾಗಿ ಪ್ರತಿನಿತ್ಯವೂ ಹಾಕಬೇಕು ಎಂದು ಸೂಚಿಸಿದರು.

ಸಹಾಯಕ ಕೃಷಿ ನಿರ್ದೇಶಕ (ಜಾರಿದಳ ) ಎಂ.ಎಸ್. ಮೋಹನ್ ಮಾತನಾಡಿ, ಸಗಟು ಮಾರಾಟಗಾರರು ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಬಾರದು. ಪರವಾನಗಿ ಪಡೆಯದೆ ಅಕ್ರಮವಾಗಿ ಕೃಷಿ ಪರಿಕರ, ರಸಗೊಬ್ಬರ ದಾಸ್ತಾನು ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವುದು, ಕಳಪೆ ಬಿತ್ತನೆ ಬೀಜಪೂರೈಕೆ ಅಥವಾ ಸರ್ಕಾರದಿಂದ ಅಮಾನ್ಯ ಮಾಡಿರುವ ಬಿತ್ತನೆ ಬೀಜ ಮಾರಾಟ ಮಾಡುವ ಬಗ್ಗೆ ದೂರುಗಳು ಬಂದಲ್ಲಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವು ಎಂದು ಎಚ್ಚರಿಕೆ ನೀಡಿದರು.

ಪ್ರಸಕ್ತ ವರ್ಷ ಯೂರಿಯಾ ವಿತರಿಸಲು ರೈತರ ಎಫ್ಐಡಿ ಕಡ್ಡಾಯವಾಗಿದ್ದು, ಮಾರಾಟಗಾರರು ತಪ್ಪದೆ ರೈತರ ಎಫ್ಐಡಿ ಪಡೆದು ಕೆ-ಕಿಸಾನ್ ತಂತ್ರಾಂಶದ ಮುಖಾಂತರ ಪಾಯಿಂಟ್ ಆಫ್ ಸೇಲ್ ಮೂಲಕವೇ ರಸಗೊಬ್ಬರ ವಿತರಿಸಬೇಕು ಎಂದರು.

ಈ ವೇಳೆ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ನಂಜರೆಡ್ಡಿ, ಕೃಷಿ ಅಧಿಕಾರಿ ರಾಕೇಶ್.ಬಿ. ವೀರಕುಮಾರ್, ತಿಮ್ಮರಾಯಸ್ವಾಮಿ ಹಾಗೂ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-16-1235192905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.