ಗೌರಿಬಿದನೂರು: ನಗರದ ವಾಲ್ಮೀಕಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ವಿಚಾರ ಸಂಕಿರಣ, ಸರ್ವ ಸದಸ್ಯರ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಶನಿವಾರ ಹಮ್ಮಿಕೊಳ್ಳಲಾಯಿತು.

ದಸಂಸ ಜಿಲ್ಲಾ ಸಂಚಾಲಕ ಬಿ.ವಿ. ಆನಂದ ಮಾತನಾಡಿ, ದಲಿತ ಸಂಘಟನೆಗಳ ಮುಖಂಡರು ದಲಿತರ ಏಳಿಗೆಗಾಗಿ ಶ್ರಮಿಸುವ ಮೂಲಕ ದಲಿತರ ಪಾಲಿಗೆ ಬೆನ್ನೆಲುಬಾಗಿ ಕೆಲಸ ಮಾಡಬೇಕು. ತಾಲ್ಲೂಕಿನ ನಾಗಸಂದ್ರ ಭೂ ಹೋರಾಟ, ಜೀತದಾರರ ವಿಮುಕ್ತಿ, ಶಂಬುಖ ನಗರ ಗ್ರಾಮ ಉದಯದಂತಹ ಹಲವು ಐತಿಹಾಸಿಕ ಹೋರಾಟಗಳು ದಲಿತರ ಬದುಕಿನಲ್ಲಿ ಆಶಾಕಿರಣವಾಗಿವೆ ಎಂದು ಹೇಳಿದರು.

ನ್ಯಾಷನಲ್ ಕಾಲೇಜಿನ ಉಪ ಪ್ರಾಂಶುಪಾಲ ಟಿ. ನಂಜುಂಡಪ್ಪ ಮಾತನಾಡಿ, ಶೂದ್ರರು ಸಮಾಜದ ಬೆನ್ನೆಲುಬು ಆಗಿದ್ದು, ಅವರು ಶ್ರಮ ಜೀವಿಗಳಾಗಿದ್ದಾರೆ. ಆದರೆ, ದಲಿತರ ಕೇರಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಸಂಕಲ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ. ಕಾಂತರಾಜು ಮಾತನಾಡಿ, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಕೇವಲ ಮತಬ್ಯಾಂಕ್ ರಾಜಕೀಯಕ್ಕೆ ಬೆಂಬಲ ನೀಡುವುದನ್ನು ಬಿಟ್ಟು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಆಶಿಸಿದರು.

ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ, ಸಂಘಟನಾ ಸಂಚಾಲಕ ಕೆ. ನರಸಿಂಹಮೂರ್ತಿ, ಕೃಷ್ಣಪ್ಪ, ನಾಗೇಂದ್ರ ಬಾಬು, ಕೃಷ್ಣಪ್ಪ, ಸಂಘಟನಾ ವಿಭಾಗದ ಸದಸ್ಯರಾಗಿ ಹನುಮಂತು, ನರಸಪ್ಪ, ನರಸಿಂಹಮೂರ್ತಿ, ಅಶ್ವತ್ಥಪ್ಪ, ಜಯರಾಂ, ವೆಂಕಟೇಶ್, ನಿರ್ವಾಹಕ ಸಮಿತಿ ಸದಸ್ಯರಾಗಿ ನಾಗೇಶ್, ಮಂಜುನಾಥ, ವಜೀರ್, ಅನಿಲ್, ಅಶ್ವತ್ಥಪ್ಪ, ಸನತ್ ಕುಮಾರ್, ಮಂಜುನಾಥ, ಕೃಷ್ಣಪ್ಪ, ನರಸಿಂಹಮೂರ್ತಿ, ವೆಂಕಟೇಶ್ ಆಯ್ಕೆಯಾಗಿದರು.

ಈ ವೇಳೆ ಗಂಗನಂಜಯ್ಯ, ಶಿವಲಿಂಗಯ್ಯ, ಕೋಟಪ್ಪ, ನರಸಿಂಹಮೂರ್ತಿ, ರಾಮಪ್ಪ. ಜಯಕುಮಾರ್. ನರಸಿಂಹಯ್ಯ. ಮುಕ್ತಿಯಾರ್, ಗಂಗೂಲಪ್ಪ, ನಾರಾಯಣಪ್ಪ, ಕೃಷ್ಣಪ್ಪ, ಅಶ್ವತ್ಥಪ್ಪ, ಚೌಡಪ್ಪ, ಗಂಗಯ್ಯ, ಸನತ್ ಕುಮಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-16-297253349

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.