ಗೌರಿಬಿದನೂರು: ತಾಲ್ಲೂಕಿನ ಉಚ್ಚೋದನಹಳ್ಳಿ ಗ್ರಾಮದ ಜೀರ್ಣೋದ್ಧಾರಗೊಂಡ ಸಲ್ಲಾಪುರದಮ್ಮ ದೇವಸ್ಥಾನವನ್ನು ಪರಿಶಿಷ್ಟ ಜಾತಿಯವರು ಭಾನುವಾರ ಪ್ರವೇಶಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದೆ.

ಗ್ರಾಮದಲ್ಲಿ 1,500 ಜನಸಂಖ್ಯೆ ಇದ್ದು, ಎಲ್ಲರಿಂದಲೂ ದೇಣಿಗೆ ಸಂಗ್ರಹಿಸಿ ಹಳೆ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗಿತ್ತು. ಭಾನುವಾರ ದೇಗುಲ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೇಗುಲದ ಬಳಿ ಬಂದ ಪರಿಶಿಷ್ಟ ಜಾತಿಯ ಜನರನ್ನು ಒಳಗೆ ಪ್ರವೇಶಿಸದಂತೆ ಅರ್ಚಕರು ಹಾಗೂ ಗ್ರಾಮದ ಇತರ ಸಮುದಾಯದವರು ತಡೆದಿದ್ದಾರೆ. ಸಂಜೆ ಪರಿಶಿಷ್ಟ ಜಾತಿಯವರು ಪೊಲೀಸರನ್ನು ಕರೆ ತಂದಿದ್ದಾರೆ. ಪೊಲೀಸರ ಜೊತೆ ದೇಗುಲದ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಇತರ ಸಮುದಾಯದವರು ಮತ್ತಷ್ಟು ಕೆರಳಿದ್ದಾರೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಡಿವೈಎಸ್ಪಿ ಪ್ರಕಾಶ್, ಸಿಪಿಐ ಅಂಜನ್ ಕುಮಾರ್, ತಹಶೀಲ್ದಾರ್ ಅರವಿಂದ್ ಕೆ.ಎಂ ಹಾಗೂ ಅಧಿಕಾರಿಗಳು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು.

ಸಭೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶಿಷ್ಟ ಜಾತಿ ಹಾಗೂ ಗ್ರಾಮದ ಇತರ ಸಮುದಾಯದವರ ನಡುವೆ ತೀವ್ರ ವಾಗ್ವಾದ ನಡೆಯಿತು. ‘ಈ ಹಿಂದಿನಿಂದಲೂ ಇದೇ ಪದ್ಧತಿ ನಡೆದುಕೊಂಡು ಬಂದಿದೆ’ ಎಂದು ಕೆಲವರು ಪ್ರತಿಪಾದಿಸಿದರು. ಆಗ ಪರಿಶಿಷ್ಟ ಜಾತಿ ಮುಖಂಡರು, ‘ಯಾವ ಕಾಲದಲ್ಲಿ ಇದ್ದೀರಿ. ಸಂವಿಧಾನ ಎಲ್ಲರಿಗೂ ಒಂದೇ ಅವಕಾಶ ನೀಡಿದೆ’ ಎಂದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತು.

‘ತಾಂತ್ರಿಕವಾಗಿ ಮುಂದುವರಿಯುತ್ತಿದ್ದೇವೆ. ಆದರೆ ನಮ್ಮ ಮನಸ್ಸುಗಳು ಮುಂದುವರಿದಿಲ್ಲ. ನಾವು ಮಾಡಿಕೊಂಡಿರುವ ಕಟ್ಟುಪಾಡುಗಳು ನಮಗೆ ಇತಿ ಮಿತಿ ಹೇರಿವೆ. ಸಂಪ್ರದಾಯದ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಸಲ್ಲದು’ ಎಂದು ಡಿವೈಎಸ್ಪಿ ಪ್ರಕಾಶ್ ಕಿವಿಮಾತು ಹೇಳಿದರು.

ಆಗ ಗ್ರಾಮದ ಇತರ ಸಮುದಾಯದವರು, ‘ನಾವು ಯಾವುದಕ್ಕೂ ಅಡ್ಡಿ ಮಾಡುವುದಿಲ್ಲ. 40 ದಿನಗಳ ಪೂಜೆಯ ನಂತರ ಅವರು (ಪರಿಶಿಷ್ಟ ಜಾತಿ) ದೇಗುಲ ಪ್ರವೇಶಿಸಲಿ ಎಂದುಕೊಂಡಿದ್ದೆವು. ಆದರೆ ಗರ್ಭಗುಡಿ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಲ್ಲರಿಂದಲೂ ದೇಣಿಗೆ ಸಂಗ್ರಹಿಸಿದ್ದಾರೆ. ಪೂಜೆ ಮಾಡಲು ಅವಕಾಶ ಕೇಳಿದಾಗ 40 ದಿನದ ನಂತರ ಪೂಜೆ ಮಾಡಿ ಎನ್ನುತ್ತಿದ್ದಾರೆ. ಗ್ರಾಮದ ದೇವರಿಗೆ ಪೂಜೆ ಮಾಡಲು ಯಾರ ಅಪ್ಪಣೆ ಬೇಕು. ಸಂವಿಧಾನ ಎಲ್ಲರಿಗೂ ಒಂದೇ’ ಎಂದು ಪರಿಶಿಷ್ಟ ಜಾತಿಯ ನಾರಾಯಣ ಸ್ವಾಮಿ ತಿಳಿಸಿದರು.

ಗ್ರಾಮಸ್ಥರ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಪರಿಶಿಷ್ಟ ಜಾತಿಯ ಜನರು ದೇಗುಲ ಪ್ರವೇಶಿಸಿದರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.