ಗೌರಿಬಿದನೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ಸದುದ್ದೇಶದಿಂದ ಸರ್ಕಾರವು ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದೆ.

ಆದರೆ, ನಗರದ ಹಿರೇಬಿದನೂರು ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ವಾಸವಿರುವ ಪ್ರಥಮ ಪಿಯು, ಡಿಪ್ಲೊಮಾ ಸೇರಿದಂತೆ ಪದವಿ ವಿದ್ಯಾರ್ಥಿಗಳು ನಿಲಯ ಪಾಲಕರ ನಿರ್ಲಕ್ಷ್ಯದಿಂದ ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಸರ್ಕಾರವು ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕೆ ಸುಮಾರು ₹2 ಕೋಟಿ ಖರ್ಚು ಮಾಡಿ ಅತ್ಯಾಧುನಿಕ ಮತ್ತು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿದೆ. 19 ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೇವೆಯನ್ನು ಸಹ ಒದಗಿಸಲಾಗಿದೆ. ಆದರೆ ವಸತಿ ನಿಲಯದಲ್ಲಿನ ನಿಲಯಪಾಲಕರ ನಿರ್ಲಕ್ಷ್ಯದಿಂದ ಲ್ಯಾಬ್ ಸಂಪೂರ್ಣವಾಗಿ ಗೆದ್ದಲು ಹುಳುಗಳ ಪಾಲಾಗಿದೆ, ಇದನ್ನು ಸರಿಪಡಿಸುವುದಾಗಲಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಳಸಿಕೊಳ್ಳುವುದಾಗಲಿ ಮಾಡದೆ ಕಚೇರಿಗೆ ಬೀಗ ಹಾಕಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ವಸತಿ ಶಾಲೆಯಲ್ಲಿ 42 ಕೊಠಡಿಗಳಿದ್ದು, 2022–23ರಲ್ಲಿ 250 ವಿದ್ಯಾರ್ಥಿಗಳಿದ್ದರು. ಆದರೆ, ಇಲ್ಲಿನ ಅವ್ಯವಸ್ಥೆಯಿಂದ ಈಗ ಬರೀ 80 ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ಸರ್ಕಾರ ನೀಡಿರುವ ಉತ್ತಮ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಿ, ಆದರ್ಶವಾಗಬೇಕಿದ್ದ ವಸತಿ ನಿಲಯದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

ವಸತಿ ನಿಲಯದಲ್ಲಿ ನಿಲಯಪಾಲಕ ಉಳಿದುಕೊಳ್ಳದೆ ಇರುವುದು. ಅಲ್ಲಿನ ಕೆಲವು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ರಾತ್ರಿ ವೇಳೆ ಸಿಗರೇಟ್ ತುಂಡುಗಳು ಅಲ್ಲಲ್ಲಿ ಬಿದ್ದಿರುತ್ತವೆ. ಇತರೆ ವಸ್ತುಗಳು ವಸತಿ ನಿಲಯದಲ್ಲಿ ಶಿಕ್ಷಣಕ್ಕಿಂತ ಬೇರೆ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎಂಬಂತಿದೆ.

ವಿದ್ಯಾರ್ಥಿಗಳಿಲ್ಲದೆ ಇರುವುದರಿಂದ ಬಹುತೇಕ ಹಾಸಿಗೆಗಳು ಹಾಳಾಗಿವೆ. ಕೊಠಡಿಗಳ ಗಾಜು ಒಡೆದು ಹಾಳಾಗಿದೆ. ಡಿಸೇಲ್ ಜನರೇಟರ್ ಬಳಸದೆ ಕೆಟ್ಟು ನಿಂತಿದೆ. ಇಂತಹ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ವಸತಿ ಶಾಲೆ ಅವ್ಯವಸ್ಥೆ ಬಗ್ಗೆ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂಬುದು ಪೋಷಕರು ಹಾಗೂ ಸ್ಥಳೀಯರ ಆಗ್ರಹ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-16-1718927663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.