ಗೌರಿಬಿದನೂರು: ತಾಲ್ಲೂಕಿನ ಕುರೂಡಿ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 5 ವರ್ಷಗಳ ಅವಧಿಯ ಸದಸ್ಯತ್ವ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು.

12 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಉಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಲು ಕೆಎಚ್ಪಿ ಬೆಂಬಲಿತರ ಪಾಲಾಗಿವೆ.

ಸಾಲಗಾರರ ಕ್ಷೇತ್ರದ ಸಾಮಾನ್ಯ ಕ್ಷೇತ್ರದಲ್ಲಿ ಕೆ.ವಿ. ಮಂಜುನಾಥ್ 165, ಸಿ.ಆರ್. ಪುಟ್ಟಶಾಮಪ್ಪ 159, ಕೆ.ಟಿ. ವೆಂಕಟಪತಿ 153, ಮಲ್ಲಯ್ಯ 141, ಮಹಿಳಾ ಕ್ಷೇತ್ರದಿಂದ ರಾಧಮ್ಮ213, ಜಯಲಕ್ಷ್ಮಮ್ಮ 150, ಹಿಂದುಳಿದ ವರ್ಗ ‘ಎ’ ಕ್ಷೇತ್ರದಿಂದ ಟಿ.ರಂಗಸ್ವಾಮಿ 151, ಹಿಂದುಳಿದ ವರ್ಗ ‘ಬಿ’ ಕ್ಷೇತ್ರದಿಂದ ಮನೋಹರ್ ಎಸ್.ಆರ್ 150, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕಿಮ್ಲಾನಾಯಕ್ 161, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಅಂಜಿನಪ್ಪ 178, ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಆರ್. ಮಹದೇವಯ್ಯ 62 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಕೆಎಚ್ಪಿ ಬಣದ ಕಾರ್ಯನಿರ್ವಾಹಕ ಶ್ರೀನಿವಾಸ್ ಗೌಡ ಮಾತನಾಡಿ, ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳೇ ಚುನಾವಣೆ ಗೆಲುವಿಗೆ ಕಾರಣ. ಶಾಸಕರು ಹೊಸೂರು ಹೋಬಳಿಗೆ ಹೆಚ್ಚು ಅನುದಾನ ನೀಡಿ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವಿಜಯ ರಾಘವ, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಬೊಮ್ಮಣ್ಣ, ಚುನಾವಣಾ ಅಧಿಕಾರಿ ಲೀಲಾವತಿ, ಕಾರ್ಯದರ್ಶಿ ರಂಗನಾಥ್, ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-16-509231741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.