ಗೌರಿಬಿದನೂರು: ಸರ್ಕಾರ ಖಾಸಗಿ ಪರವಾನಗಿ ಭೂ ಮಾಪಕರ ಸಮಸ್ಯೆಗೆ ಪರಿಹಾರ ಕಲ್ಪಿಸಿ ಮುಷ್ಕರ ಅಂತ್ಯಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ತಾಲ್ಲೂಕು ಆಡಳಿತ ಕಚೇರಿ ಮುಂದೆ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಖಾಸಗಿ ಪರವಾನಗಿ ಭೂ-ಮಾಪಕರ ಮುಷ್ಕರದ ಪರಿಣಾಮ ಮೂರು ತಿಂಗಳಿನಿಂದ ಜಮೀನು ಅಳತೆ, ದಾಖಲೆ ತಿದ್ದುಪಡಿ ಮತ್ತು ಖಾತೆ ವರ್ಗಾವಣೆ, ಹದ್ದುಬಸ್ತು, 11-ಇ ನಕ್ಷೆ ಹಾಗೂ ತತ್ಕಾಲ್ ಪೋಡಿ ಅರ್ಜಿಗಳ ವಿಲೇವಾರಿ ಸ್ಥಗಿತಗೊಂಡಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲ್ಲೂಕಿನಲ್ಲಿ 2,876 ಅರ್ಜಿಗಳು ಮತ್ತು ಜಿಲ್ಲೆಯಲ್ಲಿ 16,071 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮುಷ್ಕರ ಅಂತ್ಯಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ರೈತ ಮುದ್ದರಂಗಪ್ಪ ಮಾತನಾಡಿ, ಮುಂಗಾರು ಪೂರ್ವ ಮಳೆ ಆರಂಭವಾಗಿರುವ ಹಿನ್ನೆಲೆ ರೈತರು ಜಮೀನಿನಲ್ಲಿ ಉಳುಮೆ ಮತ್ತು ಬಿತ್ತನೆ ಸಿದ್ಧತ ಕೆಲಸ ಕೈಗೊಂಡಿದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಸರ್ವೆ ಕಾರ್ಯ ನಡೆಯದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಜಮೀನು ಖರೀದಿ ಮತ್ತು ಮಾರಾಟ ಮಾಡಲು ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಪರವಾನಗಿ ಭೂ-ಮಾಪಕರ ಬೇಡಿಕೆಗಳನ್ನು ಈಡೇರಿಸಿ, ಸರ್ವೆಯನ್ನು ತಕ್ಷಣ ಪುನರಾರಂಭಿಸುವಂತೆ ಒತ್ತಾಯಿಸಿದರು.

ಪರವಾನಗಿ ಭೂ ಮಾಪಕರ ತಾಲ್ಲೂಕು ಅಧ್ಯಕ್ಷ ವೇಮಾರೆಡ್ಡಿ ಮಾತನಾಡಿ, ‘ನಾವು 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳಿಲ್ಲ, ಕನಿಷ್ಠ ವೇತನ ನೀಡಿಲ್ಲ. ಹಲವು ಬಾರಿ ಮುಷ್ಕರ ಮಾಡಿ ಸರ್ಕಾರದ ಗಮನಕ್ಕೆ ತಂದಿದ್ದರೂ ಸಹ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪರವಾನಗಿ ಭೂ ಮಾಪಕರ ಉದ್ಯೋಗವನ್ನು ಖಾಯಂಗೊಳಿಸಿ ಕನಿಷ್ಠ ವೇತನ ಕೊಡಬೇಕು. ಇಲ್ಲವಾದಲ್ಲಿ ಮುಷ್ಕರವನ್ನು ಕೈಬಿಡದೆ, ಮುಂದುವರೆಸಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಅರವಿಂದ್ ಕೆ.ಎಂ ಅವರಿಗೆ ಮನವಿ ಸಲ್ಲಿಸಲಾಯಿತು. ಮುನಿವೆಂಕಟಪ್ಪ, ಶ್ರೀನಿವಾಸ್, ಗೋಪಿ, ನಂದನ್, ಪ್ರಸನ್ನ ಕುಮಾರ್, ಆದಿನಾರಾಯಣಪ್ಪ, ಮಲ್ಲಿಕಾರ್ಜುನ ಸ್ವಾಮಿ, ನರಸಾರೆಡ್ಡಿ, ವೆಂಕಟೇಶ್, ಅವುಲಾರೆಡ್ಡಿ, ಸನತ್ ಕುಮಾರ್, ರಾಮಚಂದ್ರ ರೆಡ್ಡಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-16-90351445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.