ಗೌರಿಬಿದನೂರು: ‘ತಾಲ್ಲೂಕಿನ ಜನರಿಗೆ ಮೂಲಸೌಕರ್ಯ ನೀಡಲು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದರೆ, ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿ ತಾಲ್ಲೂಕಿನ ಜನರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ’ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಆರೋಪಿಸಿದರು.

ಶಾಸಕರ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಮಾಜಿ ಶಾಸಕ ಶಿವಶಂಕರ ರೆಡ್ಡಿ ತಮ್ಮ 25 ವರ್ಷಗಳ ರಾಜಕೀಯ ಅನುಭವವನ್ನು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲು, ನನ್ನ ಮತ್ತು ಕೆಎಚ್ಪಿ ಕಾರ್ಯಕರ್ತರ ತೇಜೋವಧೆ ಮಾಡಿ ಸದಾ ಸುದ್ದಿಯಲ್ಲಿರಲು ಬಳಸುತ್ತಿದ್ದಾರೆ. ನಮ್ಮ ಅಭಿವೃದ್ಧಿ ಬಗ್ಗೆ ಅಪಪ್ರಚಾರ ಮಾಡುವುದೇ ಇವರ ಮನೆ ದೇವರಾಗಿದೆ’ ಎಂದರು.

‘ತಾಲ್ಲೂಕಿನ ಬಡ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು 173 ಎಕರೆ ಜಾಗ ಗುರುತಿಸಲಾಗಿದೆ. 4000ಕ್ಕೂ ಹೆಚ್ಚು ನಿವೇಶನ ಮಾಡಲು ಕಳೆದ 6 ತಿಂಗಳಿನಿಂದ ಕೆಲಸ ಮಾಡಿ, ತಹಶೀಲ್ದಾರ್, ಇಒ ಮೂಲಕ ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆದು ನಿವೇಶನ ರಹಿತರಿಗೆ ಜಾತಿ, ಧರ್ಮ, ರಾಜಕೀಯ ರಹಿತವಾಗಿ ನಿವೇಶನ ಹಂಚಿಕೆ ಮಾಡುವುದು ಮತ್ತು ಈ ಬಗ್ಗೆ ಗ್ರಾಮ ಸಭೆಗಳಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವುದು ಶಾಸಕನಾಗಿ ನನ್ನ ಕರ್ತವ್ಯ’ ಎಂದರು.

‘ಮಾಜಿ ಶಾಸಕರು ಗ್ರಾಮ ಸಭೆಗಳಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಿ ಎಂದು ಪರೋಕ್ಷವಾಗಿ ಗಲಾಟೆ ಮಾಡಲು ಪ್ರೇರೇಪಿಸುತ್ತಿದ್ದಾರೆ. ಇವರ ಸಂಕುಚಿತ ಮನೋಭಾವದಿಂದ ಮಾಡುತ್ತಿರುವ ಪುಂಡಾಟಿಕೆ ಕೆಲಸಗಳನ್ನು ಗಣನೆಗೆ ತೆಗೆದುಕೊಳ್ಳದೆ, ಗ್ರಾಮಸಭೆಗಳು ನಡೆಸಲು ಜಿಲ್ಲಾಧಿಕಾರಿ ಮತ್ತು ಸಿಇಒಗೆ ಮನವರಿಕೆ ಮಾಡುತ್ತೇನೆ’ ಎಂದರು.

‘ಹತಾಶೆ ಮನೋಭಾವದಿಂದ ನನ್ನ ಶಾಸಕ ಸ್ಥಾನ ಕಳೆಯಲು ಹೈ ಕೋರ್ಟ್ನಲ್ಲಿ ದೂರು ನೀಡಿದ್ದರು. ನಾನು ಮೂರು ವರ್ಷ ನ್ಯಾಯಾಲಯಕ್ಕೆ ಅಲೆದೆ. ನ್ಯಾಯಾಲಯ ಸುಳ್ಳು ಆರೋಪ ಎಂದು ವಜಾ ಮಾಡಿತು. ಈಗ ಇವರ ಹಿಂಬಾಲಕರಿಂದ ರಾತ್ರೋ ರಾತ್ರಿ ರಸ್ತೆ ಕಿತ್ತು ಹಾಕಿಸಿ ವಿಡಿಯೋ ಮಾಡಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದೆ, ನಾನು ಕಾಂಗ್ರೆಸ್ ಹಿರಿಯ ನಾಯಕ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಇವರ ಕಸುಬಾಗಿದೆ’ ಎಂದರು.

‘ಮಾಜಿ ಶಾಸಕ ನನ್ನ ಜೊತೆ ರೌಡಿ ಶೀಟರ್ಗಳಿದ್ದಾರೆ ಎಂದು ಆರೋಪಿಸುತ್ತಾರೆ. ಇವರ ಜೊತೆ ಬೇಕಾದಷ್ಟು ರೌಡಿ ಶೀಟರ್ಗಳಿದ್ದಾರೆ. ಇವರ ಅವಧಿಯಲ್ಲಿ 169 ಜನರನ್ನು ರೌಡಿ ಶೀಟರ್ ಮಾಡಿ ಎಲ್ಲರನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರು. 70 ಅಮಾಯಕರು ಇಂದು ಖುಲಾಸೆಯಾಗಿದ್ದಾರೆ. ರೌಡಿ ಶೀಟರ್ಗಳಿಗೆ ಬುದ್ದಿವಾದ ಹೇಳಿ, ಎಚ್ಚರಿಕೆ ನೀಡಿ ಅವರನ್ನು ಬದಲಾಯಿಸಿ ಕಾನೂನು ಸುವ್ಯವಸ್ಥೆ ಸರಿಪಡಿಸಿದ್ದೇನೆ’ ಎಂದರು.

‘ತಾಲ್ಲೂಕಿನ ಆಸ್ಪತ್ರೆ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ ಸರಿಯಿಲ್ಲ ಎಂದು ಆರೋಪಿಸಿ ಗಧಾಪ್ರಹಾರ ಮಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಣೆ ಸಮಿತಿ ಮಾಡಲು ಬಿಟ್ಟಿಲ್ಲ. ಕಾಂಗ್ರೆಸ್ ಹಿರಿಯ ನಾಯಕ ಎಂದು ಹೇಳಿಕೊಂಡು ಎಲ್ಲದಕ್ಕೂ ಅಡ್ಡಿ ಪಡಿಸುತ್ತಿದ್ದಾರೆ’ ಎಂದರು.

‘ಎತ್ತಿನಹೊಳೆ ನೀರು ತರದೇ ವಾಟದಹೊಸಹಳ್ಳಿ ಕೆರೆಯಿಂದ ನಗರಕ್ಕೆ ನೀರು ಹರಿಸುವುದಿಲ್ಲ. ಬೇರೆಯವರು ಹರಿಸಲು ಬಿಡುವುದಿಲ್ಲ. ಈ ಯೋಜನೆಗಾಗಿ ಮತ್ತೆ ₹10 ಕೋಟಿ ಮಂಜೂರು ಮಾಡಿಸಿದ್ದೇನೆ. ರೈತರು ಮನವಿ ನೀಡಿದರೆ ಅವರೊಂದಿಗೆ ಚರ್ಚಿಸಲು ಸಿದ್ಧ’ ಎಂದರು.

ಚಿಮುಲ್ ನಿರ್ದೇಶಕ ಕಾಂತರಾಜ್ ಮಾತನಾಡಿ, ‘ಮಾಜಿ ಶಾಸಕರು ಅವರ ಹಿಂಬಾಲಕರಿಗೆ ಜಮೀನು ಮಾಡಿ ಕೊಟ್ಟಿದ್ದಾರೆ. ಹಳ್ಳಿ ಹಳ್ಳಿಗೂ ಹೋಗಿ ಸಭೆ ನಡೆಸಿ ಹಕ್ಕು ಪತ್ರಗಳನ್ನು ನೀಡಿದ್ದಾರೆ. ಇದರಲ್ಲಿ ಜನರಿಗೆ ಮೋಸವಾಗಿದೆ’ ಎಂದು ಆರೋಪಿಸಿದರು.

ವೆಂಕಟರಾಮ ರೆಡ್ಡಿ, ವಿಜಯ ರಾಘವ, ಅನಂತರಾಜು, ರಂಗರಾಜನ್, ಅಬ್ದುಲ್ಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.