ಗೌರಿಬಿದನೂರು: ನಗರದ ಮಧುಗಿರಿ ರಸ್ತೆಯಿಂದ ಕೋರ್ಟ್ಗೆ ಹೋಗುವ ರಸ್ತೆಗೆ ಸ್ಕೈವಾಕ್ ಅಥವಾ ಅಂಡರ್ಪಾಸ್ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದ ಡಾ.ಕೆ. ಸುಧಾಕರ್ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷೆ ರೂಪ ಅನಂತರಾಜು ಸೋಮವಾರ ಮನವಿ ಸಲ್ಲಿಸಿದರು.

ಈ ಸ್ಕೈವಾಕ್ ನಿರ್ಮಾಣದಿಂದ ಈ ಭಾಗದಲ್ಲಿರುವ ರೇಷ್ಮೆ ಇಲಾಖೆ, ಕೃಷಿ ಇಲಾಖೆ, ಬಿ.ಸಿ.ಎಂ ವಿದ್ಯಾರ್ಥಿ ನಿಲಯ, ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳು, ಸರ್ಕಾರಿ ಪಿಯು ಕಾಲೇಜು, ಗುರುಭವನಕ್ಕೆ ತೆರಳಲು 2 ಕಿ.ಮೀ ಸುತ್ತುವುದು ತಪ್ಪಲಿದೆ ಎಂದು ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಗರದ ರೈಲ್ವೆ ಕೆಳಸೇತುವೆ ಬಳಿ ಹಾಕಿರುವ ರಸ್ತೆ ಒಂದೇ ವರ್ಷಕ್ಕೆ ಕಿತ್ತು ಹೋಗಿದ್ದು, ದುರಸ್ತಿಪಡಿಸಬೇಕು. ರೈಲ್ವೆ ಮೇಲ್ಸೇತುವೆ ಮೇಲೆ ಅಳವಡಿಸಿರುವ ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ತೆಗೆದು ಉತ್ತಮ ಗುಣಮಟ್ಟದ ಬೀದಿ ದೀಪ ಅಳವಡಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-16-1601594013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.