ಸೋಮವಾರ, ನವೆಂಬರ್ 29, 2021
20 °C

ಗುಡಿಬಂಡೆ ತಾಲ್ಲೂಕಿನಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಸತತ ಮೂರು ಗಂಟೆ ಕಾಲ ಉತ್ತಮ ಮಳೆ ಸುರಿಯಿತು.

4ನೇ ವಾರ್ಡ್‌ನ ಆರ್.ಕೆ. ಚಿತ್ರಮಂದಿರದ ಬಳಿಯ ಕಾಲುವೆಯಲ್ಲಿ ತ್ಯಾಜ್ಯ ತುಂಬಿ ರಸ್ತೆ ಪಕ್ಕದ ಮನೆಗಳಿಗೆ ನುಗ್ಗಿತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಜನರು ಮಳೆ ಲೆಕ್ಕಿಸದೇ ಕಾಲುವೆಗೆ ಅಡ್ಡಲಾಗಿದ್ದ ಕಸ ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ಪಟ್ಟಣದಲ್ಲಿನ ಖಾಜಿಪೇಟೆಯ ಮೆಹರುನ್ನಿಸಾ ಅವರ ಮನೆಯ ಗೋಡೆ ಕುಸಿದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಳೆದ 15 ದಿನಗಳಿಂದಲೂ ಗುಡಿಬಂಡೆ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಚಿತ್ರಾವತಿ ನದಿ ಹರಿಯುತ್ತಿದೆ. ಇದರಿಂದ ಯಾದಾರ್ಲಹಳ್ಳಿ ಕೆರೆ ಹಾಗೂ ಅಮಾನಿಬೈರಸಾಗರ ಕೆರೆ ಕೋಡಿ ಹರಿದಿದೆ. ಅಮಾನಿಬೈರಸಾಗರ ಕೆರೆಯಿಂದ ನೀರು ವಾಟದಹೊಸಹಳ್ಳಿ ಕೆರೆಗೆ ಹರಿಯುತ್ತದೆ. ಆ ಕೆರೆಯೂ ಕೋಡಿ ಹರಿದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು