ಗೂಳೂರು (ಬಾಗೇಪಲ್ಲಿ): ತಾಲ್ಲೂಕಿನ ಗೂಳೂರು ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ಬುಧವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಜನಸ್ಪಂದನ ಕಾರ್ಯಕ್ರಮ ನಡೆಯಿತು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಸರ್ಕಾರದ ಕಂದಾಯ, ಪಂಚಾಯಿತಿ ಸೇರಿದಂತೆ ಇಲಾಖೆಗಳ ಯೋಜನೆಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ, ಕಟ್ಟಕಡೆಯ ಪ್ರಜೆಗಳಿಗೆ ತಲುಪಿಸಲು ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಪಂಚಾಯಿತಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮನೆಗೆ ಭೇಟಿ ಮಾಡಿ, ಜನರಿಗೆ ಸರ್ಕಾರದ ಯೋಜನೆ ತಲುಪಿಸಲು ಅಗತ್ಯ ದಾಖಲೆ ಪಡೆದು, ಜನಸ್ಪಂದನ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ. ಪೋಡಿ, ದುರಸ್ಥಿಯಂತಹ ಕೆಲಸಗಳಿಗೆ ಅಗತ್ಯ ದಾಖಲೆ ನೀಡಿದರೆ 20 ದಿನಗಳ ಒಳಗೆ ಸಿಬ್ಬಂದಿ ಮನೆ ಬಾಗಿಲಿಗೆ ತಲುಪಿಸುತ್ತಾರೆ’ ಎಂದು ತಿಳಿಸಿದರು.

‘ಹಾದಿಬೀದಿಯಲ್ಲಿ ಮಾತನಾಡುವವರು ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎಂದು ಮಾತನಾಡಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ, ಕ್ಷೇತ್ರದಲ್ಲಿ ಅತಿ ಹೆಚ್ಚು ಹಕ್ಕುಪತ್ರ ನೀಡಲಾಗಿದೆ. ಅಗತ್ಯ ದಾಖಲೆಗಳನ್ನು ವಿರೋಧಪಕ್ಷಗಳಿಗೆ ವಿತರಿಸುವೆ. ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಟೀಕಿಸಿದ ಬಿಜೆಪಿಯವರು, ಮಿತ್ರಪಕ್ಷದವರು ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ. ನಮ್ಮದು ರಾಜ್ಯ ಸರ್ಕಾರ, ಬಿಜೆಪಿಯವರದು ಕೇಂದ್ರ ಸರ್ಕಾರ. ಜನರಿಗೆ ಅಗತ್ಯ ವಸ್ತುಗಳ ಬೆಲೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲಿ. ರೈತರ ಸಾಲ ಮನ್ನಾ ಮಾಡಲಿ’ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ತಹಶೀಲ್ದಾರ್ ಮನೀಷಾ ಎನ್.ಪತ್ರಿ ಮಾತನಾಡಿ, ‘ಜನಸ್ಪಂದನದಲ್ಲಿ ಅಧಿಕಾರಿಗಳು, ಸಿಬ್ಬಂದಿ ಜನರ ಮುಂದೆ ಬರುತ್ತಾರೆ. ನೇರವಾಗಿ ಸರ್ಕಾರದ ಯೋಜನೆ ಪಡೆಯಬಹುದು. ದಲ್ಲಾಳಿಗಳ ಕಾಟ ತಪ್ಪಿಸಲು ಗ್ರಾಮ ಪಂಚಾಯಿತಿ, ಕಂದಾಯ ವೃತ್ತಗಳಲ್ಲಿ ಜನಸ್ಪಂದನಾ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸರ್ಕಾರಿ ಕೆಲಸ ಇದ್ದರೆ ನೇರವಾಗಿ ಕಚೇರಿಯಲ್ಲಿ ಭೇಟಿ ಮಾಡಬಹುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 10 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್, 183 ಮಂದಿ ಆಶ್ರಯ ಯೋಜನೆ, 10 ಅಂಗವಿಕಲರಿಗೆ ವಾಕರ್, ಶ್ರವಣಯಂತ್ರ, ಕೈಕೋಲುಗಳನ್ನು ಶಾಲಾ, ಕಾಲೇಜುಗಳ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪುಸ್ತಕ, ಬ್ಯಾಗ್, ಸಮವಸ್ತ್ರ, ಶಾಲೆಗೆ ಡ್ರಮ್ ಸೆಟ್, ಎಲ್ಇಡಿ ಟಿವಿಯನ್ನು ವಿತರಿಸಲಾಯಿತು.

ತೋಟಗಾರಿಕೆಯಿಂದ 10 ಫಲಾನುಭವಿಗಳಿಗೆ ಯಂತ್ರ, ಪಶುವೈದ್ಯಕೀಯ ಇಲಾಖೆಯಿಂದ 10 ಹಾಲು ಪರೀಕ್ಷಿಸುವ ಕಿಟ್, ದೇವರಾಜು ಅರಸು ನಿಗಮದಿಂದ 120 ಮಂದಿಗೆ ಮಂಜೂರಾತಿ ಪತ್ರ, ಕೃಷಿ ಇಲಾಖೆಯಿಂದ 10 ಮಂದಿಗೆ ಯಂತ್ರ, ಕಂದಾಯ ಇಲಾಖೆಯಿಂದ ಕಂದಾಯ ಗ್ರಾಮ ತಿಳುವಳಿಕೆ ಪತ್ರ, ಪಿಂಚಣಿ, ಪೌತಿಖಾತೆ, ದರಖಾಸ್ತು ಪೋಡಿ ಹಕ್ಕುಪತ್ರಗಳು ಸೇರಿದಂತೆ 1200ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪತ್ರ ವಿತರಿಸಲಾಯಿತು.

ಪೌಷ್ಟಿಕ ಆಹಾರ ಪ್ರದರ್ಶನ: ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ನೌಕರರು, ಸಿಬ್ಬಂದಿ ಮನೆಗಳಲ್ಲಿ ವಿವಿಧ ಬಗೆಯ ಚಕ್ಕುಲಿ, ರೊಟ್ಟಿ, ರವೆಉಂಡೆ, ಕಾಳು, ಸೊಪ್ಪುಗಳ ಪಲ್ಯಗಳನ್ನು ಸಿದ್ಧಪಡಿಸಿ ತಂದಿದ್ದರು. ಮೊಟ್ಟೆ, ಸೊಪ್ಪು, ತರಕಾರಿ, ಕಾಳು ಸೇರಿದಂತೆ ವಿವಿಧ ತಿಂಡಿತಿನಿಸುಗಳ ಪ್ರದರ್ಶನ ಮಾಡಿದರು.

ಗ್ರಾಮಗಳ ಜನರಿಗೆ ಪೌಷ್ಟಿಕ ಆಹಾರದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಜಾಗೃತಿ ಮೂಡಿಸಿದರು. ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಎನ್ ಪತ್ರಿ, ಇಒ ರಮೇಶ್, ಸಿಐ ಅಜಯ್ ಸಾರಥಿ ತಿಂಡಿ ಸೇವಿಸುವ ಮೂಲಕ ಆಹಾರ ಪ್ರದರ್ಶನ ಉದ್ಘಾಟಿಸಿದರು.

ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಶುಶ್ರೂಷಕಿಯರು ಆರೋಗ್ಯ ಅರಿವು ಮೂಡಿಸಿದರು. ರಕ್ತದೊತ್ತಡ, ಸಕ್ಕರೆ ರೋಗ, ಕಾಲು, ಕೈನೋವುಗಳ ತಪಾಸಣೆ ಮಾಡಲಾಯಿತು. ಕೃಷಿ ಇಲಾಖೆಯಿಂದ ಔಷಧಿ, ಬಿತ್ತನೆಬೀಜ, ಕೃಷಿ ಬಳಕೆ ಯಂತ್ರಗಳನ್ನು ಪ್ರದರ್ಶಿಸಲಾಯಿತು. ಪಂಚಾಯಿತಿಯಿಂದ ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಗಳ ಭಿತ್ತಿಪತ್ರ ಪ್ರದರ್ಶಿಸಲಾಯಿತು.

ಅಜಯ್ಸಾರಥಿ, ಎನ್.ವೆಂಕಟೇಶಪ್ಪ, ಎಸ್.ಎಸ್.ರಮೇಶಬಾಬು, ಶಿವಪ್ಪ, ಶ್ರೀನಿವಾಸ್, ಡಾ.ಕೃಷ್ಣಮೂರ್ತಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-16-216188862

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.