ಗೌರಿಬಿದನೂರು: ತಾಲ್ಲೂಕಿನಾದ್ಯಂತ ಬಿಸಿಲಿ ತಾಪ ಹೆಚ್ಚಾಗಿದೆ. ಬಿಸಿಲಿನ ಧಗೆಯಿಂದಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಸೂರ್ಯನ ಪ್ರಖರತೆ ಹೆಚ್ಚಾಗಿರುವುದರಿಂದ ಬಿಸಿಲಿನ ಝಳಕ್ಕೆ ಬೆದರಿದ ಜನರು ತಂಪು ಪಾನೀಯಗಳಾದ ಎಳನೀರು, ಮಜ್ಜಿಗೆ, ಕಲ್ಲಂಗಡಿ, ಖರ್ಬೂಜಾ, ಐಸ್ ಕ್ರೀಂ ಮೊರೆ ಹೋಗಿದ್ದಾರೆ.

ಬೆಳಗ್ಗೆ 9 ಗಂಟೆ ವೇಳೆಗೆ ಸುಮಾರು 11 ಗಂಟೆಗೆ ಇರುವಷ್ಟು ಬಿಸಿಲು ಇರುತ್ತದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪವು 39 ಡಿಗ್ರಿಯಷ್ಟು ತಲುಪುತ್ತದೆ. ಇದರಿಂದಾಗಿ ಜನರು ಚರ್ಮದ ಅಲರ್ಜಿ, ಸನ್ಬರ್ನ್, ನಿರ್ಜಲೀಕರಣದಂಥ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ.

ಜನರು ಮನೆಯಿಂದ ಹೊರಗೆ ಬರಲಾರದೆ ಮನೆಯೊಳಗೇ ಕೂರುವಂತಾಗಿದ್ದು, ಮನೆಯಲ್ಲೂ ಬಿಸಿಲಿನ ಧಗೆ ಹೆಚ್ಚಾಗಿದೆ. ಹೀಗಾಗಿ, ಜನಸಾಮಾನ್ಯರು ಏರ್ ಕೂಲರ್, ಫ್ಯಾನ್ಗಳ ಮೊರೆ ಹೋಗಿದ್ದಾರೆ. ಗ್ರಾಮೀಣ ಭಾಗದ ಜನರು ಅರಳಿಮರ, ಹೊಂಗೆ, ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಮನೆಗಳಲ್ಲಿ ವಿಪರೀತ ಸೆಕೆ, ಸುಸ್ತು ಆಗುತ್ತಿದೆ ಎಂದು ಹಿರಿಯ ನಾಗರಿಕರು ಅಲವತ್ತುಕೊಂಡರು. ಇನ್ನು ಮಕ್ಕಳ ವಯೋವೃದ್ಧರ ಪರಿಸ್ಥಿತಿ ಹೇಳತೀರದಾಗಿದೆ.

ತಾಲ್ಲೂಕಿನ ಕೆರೆಗಳು ಬರಿದಾಗುತ್ತಿದ್ದು, ಕುರಿಗಾಹಿಗಳು ತಮ್ಮ ಕುರಿ, ಮೇಕೆ, ದನಕರಗಳಿಗೆ ನೀರು ಕುಡಿಸಲು ಪರದಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ 10 ದಿನಗಳ ಹಿಂದೆ ರಭಸದ ಗುಡುಗು, ಸಿಡಿಲು ಸಹಿತ ಮಳೆ ಬಿದ್ದಿತ್ತು. ಆದರೆ ಮತ್ತೊಮ್ಮೆ ರಭಸದ ಮಳೆ ಬೀಳದ ಹೊರತಾಗಿ ತಂಪು ವಾತಾವರಣ ಸೃಷ್ಟಿಯಾಗದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-16-319734760

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.