ಗೌರಿಬಿದನೂರು: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಹಲವು ಬೆಳೆಗಳು ಹಾನಿಗೀಡಾಗಿವೆ.

ಬುಧವಾರ ಬೆಳೆ ಹಾನಿಗೀಡಾದ ಜಮೀನುಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಅರವಿಂದ ಕೆ.ಎಂ ಅವರು ಪರಿಶೀಲನೆ ನಡೆಸಿದರು. ಜೊತೆಗೆ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ‘ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಜೊತೆಗೆ ಬೆಳೆನಷ್ಟವಾದ ಕುರಿತು ರೈತರಿಂದಲೂ ಮಾಹಿತಿ ಕ್ರೋಢೀಕರಿಸಿದ್ದೇನೆ. ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ’ ಹೇಳಿದರು.

ತಾಲ್ಲೂಕಿನ ಚೀಕಟಗೆರೆ ಗ್ರಾಮದ ನರಸಿಂಹರೆಡ್ಡಿ, ಅಶ್ವಥ್ ರೆಡ್ಡಿ, ನಾಗಮ್ಮ, ಹುದುವತಿ ಗ್ರಾಮದ ರಾಮಪ್ಪ, ಲಕ್ಷ್ಮಮ್ಮ, ಸತ್ಯನಾರಾಯಣ, ಹಾಲಗಾನಹಳ್ಳಿ ಗ್ರಾಮದ ಶಿವಶಂಕರ, ಜಯಲಕ್ಷ್ಮಮ್ಮ ಮತ್ತು ಕುರುಬರಹಳ್ಳಿ ಗ್ರಾಮದ ವೆಂಕಟ ಶಿವಾರೆಡ್ಡಿ ಎಂಬ ರೈತರ ಬಾಳೆ, ಟೊಮೆಟೊ, ಬೀನ್ಸ್, ಸೋರೆಕಾಯಿ, ಹಿರೇಕಾಯಿ ಸೇರಿದಂತೆ 10.03 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಮಳೆಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ.

ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 46.6 ಮಿ. ಮೀ , ಡಿ ಪಾಳ್ಯದಲ್ಲಿ 35.6 ಮಿ. ಮಿ, ಹೊಸೂರು 50.5ಮಿ. ಮೀ, ಮಂಚೇನಹಳ್ಳಿ 38.3 ಮಿ.ಮೀ, ನಗರಗೆರೆ 26.6 ಮಿ. ಮೀ ಹಾಗೂ ತೊಂಡೇಬಾವಿಯಲ್ಲಿ 41.8 ಮಿ. ಮೀ ಮಳೆ ಸುರಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-16-1761523878

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.