ಗೌರಿಬಿದನೂರು: ಇಲ್ಲಿಯ ವಿನಾಯಕನಗರ ನಿವಾಸಿ ಶಿವಶಂಕರ್ ಆರಾಧ್ಯ ಎಂಬುವರಿಗೆ ಕಾರು ಕೊಡಿಸುವುದಾಗಿ ಕರೆದೊಯ್ದು ₹7.50 ಲಕ್ಷ ದೋಚಿ ಪರಾರಿಯಾಗಿದ್ದ ಬೆಂಗಳೂರಿನ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಗೌರಿಬಿದನೂರು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಗೌರಿಬಿದನೂರು ವಿನಾಯಕ ನಗರದ ನಿವಾಸಿ ಯಶವಂತ್ (25), ಬೆಂಗಳೂರಿನ ರಾಜಾಜಿನಗರದ ಭರತ್ (23) ಮತ್ತು ದರ್ಶನ್ (23) ಹಾಗೂ ಬಿಡದಿಯ ವಿಷಕಂಠ (40) ಬಂಧಿತ ಆರೋಪಿಗಳು.

ಟ್ರಾವೆಲ್ಸ್ನಲ್ಲಿ ಉತ್ತಮ ಆದಾಯ ಇದೆ. ಇದಕ್ಕಾಗಿ ಕಾರು ಸ್ವಂತವಾಗಿ ಖರೀದಿಸುವಂತೆ ಯಶವಂತ್ ಹೇಳಿದ್ದ. ಅದಕ್ಕಾಗಿ ₹14 ಲಕ್ಷ ಹೊಂದಿಸಿಕೊಂಡು ಒಂದು ಬ್ಯಾಗ್ನಲ್ಲಿ ₹6.50 ಲಕ್ಷ, ಮತ್ತೊಂದು ಬ್ಯಾಗ್ನಲ್ಲಿ ₹7.50 ಲಕ್ಷ ತೆಗೆದುಕೊಂಡು ಹೋಗಿದ್ದೆ. ನಾನು, ಯಶವಂತ್ ಕಾರಿನ ಬಳಿ ತೆರಳುತ್ತಿದ್ದಂತೆಯೇ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಣ್ಣಿಗೆ ಖಾರದಪುಡಿ ಎರಚಿ ₹7.50 ಲಕ್ಷವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಶಿವಶಂಕರ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಯಶವಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಹಣ ದೋಚಲು ಸಂಚು ರೂಪಿಸಿದ ಭರತ್ ಸೇರಿದಂತೆ ಇತರ ಮಾಹಿತಿ ನೀಡಿದ್ದ. ಬೆಂಗಳೂರಿನಲ್ಲಿ ಅವಿತುಕೊಂಡಿದ್ದ ಭರತ್, ದರ್ಶನ್ ಮತ್ತು ವಿಷಕಂಠನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿ ಕರೆ ತಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-18-191026877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.