ಗೌರಿಬಿದನೂರು: ‘ತಾಲ್ಲೂಕು ಅಭಿವೃದ್ಧಿ ಎಂದರೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಮಾತ್ರ ಅಲ್ಲ’ ಎಂದು ಮಾಜಿ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿ, ಶಾಸಕ ಪುಟ್ಟಸ್ವಾಮಿ ಗೌಡರಿಗೆ ಪರೋಕ್ಷವಾಗಿ ಕುಟುಕಿದರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಶಾಸಕರು ಸಭೆಗಳಲ್ಲಿ ನನ್ನ ಅಭಿವೃದ್ಧಿ ಸಹಿಸದೆ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ರಸ್ತೆ ಮತ್ತು ಚರಂಡಿ ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ. ತಾಲ್ಲೂಕಿನ ಆಡಳಿತ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಬಡವರಿಗೆ ಮತ್ತು ನೊಂದವರಿಗೆ ಯಾವ ರೀತಿ ಪರಿಹಾರ ಸಿಗುತ್ತಿದೆ ಎಂದು ಶಾಸಕರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತಾಲ್ಲೂಕು ಈ ಬಾರಿಯೂ ಜಿಲ್ಲೆಗೆ ಕೊನೆಯ ಸ್ಥಾನಕ್ಕೆ ಬಂದಿದೆ. ಶಾಸಕರು ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವುದನ್ನು ನಾನು ನೋಡಿಲ್ಲ. ಶಾಲೆಗಳಲ್ಲಿ, ವಿದ್ಯಾರ್ಥಿನಿಲಯಗಳಲ್ಲಿ ಯಾವ ರೀತಿಯ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ಕಳೆದ ಬಾರಿ ಆದರ್ಶ ಶಾಲೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂತಹ ಸಮಸ್ಯೆಗಳ ಬಗ್ಗೆ ಕೆಡಿಪಿ ಸಭೆಗಳಲ್ಲಿ ಚರ್ಚೆ ಮಾಡುತ್ತಿಲ್ಲ’ ಎಂದರು.

‘ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವೈದ್ಯರು ಸಿಜೇರಿಯನ್ ಮಾಡಲು ಹತ್ತು ಸಾವಿರ ಲಂಚ ಕೇಳುತ್ತಿದ್ದಾರೆ ಎಂಬ ದೂರು ಬರುತ್ತಿವೆ. ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಸರಿಯಾದ ಸ್ಪಂದನೆ ಇಲ್ಲ. ಅಧಿಕಾರಿಗಳಿಗೆ ಪಿಡಿಒಗಳ ಮೇಲೆ ಹಿಡಿತವಿಲ್ಲ’ ಎಂದು ದೂರಿದರು.

‘ತಾಲ್ಲೂಕಿನ ನಿವೇಶನ ರಹಿತರಿಗೆ 175 ಎಕರೆ ಸರ್ಕಾರಿ ಜಮೀನಿನಲ್ಲಿ 4026 ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ ನಿವೇಶನ ರಹಿತರನ್ನು ಆಯ್ಕೆ ಮಾಡುವ ಗ್ರಾಮ ಸಭೆಗಳಿಗೂ ನಾನೇ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಆಯ್ಕೆ ಸ್ಥಳದಲ್ಲಿ ಶಾಸಕರು ಉಪಸ್ಥಿತರಿದ್ದರೆ ಅಲ್ಲಿ ಪಾರದರ್ಶಕವಾಗಿ ಆಯ್ಕೆ ನಡೆಯದೆ ರಾಜಕೀಯ ನಡೆದು, ಅಧಿಕಾರ ದುರುಪಯೋಗವಾಗುತ್ತದೆ. ಇದರ ಬಗ್ಗೆ ಜಿಲ್ಲಾಧಿಕಾರಿ, ಸಿಇಒ ಅವರೊಂದಿಗೆ ಮಾತನಾಡಿದ್ದೇನೆ. ಕಾನೂನು ಉಲ್ಲಂಘನೆಯಾದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾರೆ ಎಂದು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಅರ್ಹ ನಿವೇಶನ ರಹಿತ ಬಡವರಿಗೆ ನಿವೇಶನ ಕೊಡಿಸುವ ಕೆಲಸ ಮಾಡಬೇಕಾಗಿದೆ’ ಎಂದರು.

‘ಶಾಸಕರು ಎತ್ತಿನಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಹರಿಸಿದ ನಂತರ ನಗರಕ್ಕೆ ತೆಗೆದುಕೊಂಡು ಹೋಗುತ್ತೇನೆ ಎನ್ನುತ್ತಿದ್ದಾರೆ. ಎತ್ತಿನಹೊಳೆ ನೀರು ಬರಲು ಇನ್ನು ಎರಡು ವರ್ಷ ಬೇಕಾಗಬಹುದು. ಈಗಲೇ ಪೈಪ್ಲೈನ್ ಅಳವಡಿಸುತ್ತಿರುವುದು ಸರಿಯಲ್ಲ. ಇದು ವಾಟದಹೊಸಹಳ್ಳಿ ಕೆರೆ ಭಾಗದ ರೈತರ ಬದುಕಿನ ಪ್ರಶ್ನೆಯಾಗಿದೆ. ರೈತರಿಗೆ ಅನ್ಯಾಯವಾದರೆ ರೈತರೊಂದಿಗೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ತಾಲ್ಲೂಕಿನಲ್ಲಿ ರೌಡಿ ಶೀಟರ್ ಮತ್ತು ಸಮಾಜ ಘಾತುಕ ಶಕ್ತಿಗಳೇ ಪೊಲೀಸ್ ಠಾಣೆಗಳಲ್ಲಿ ದರ್ಬಾರ್ ನಡೆಸುತ್ತಿದ್ದಾರೆ. ಕಾಫಿ ಲೋಟ ತಂದುಕೊಡುತ್ತಿದ್ದವರು ಇಂದು ಬೀದಿಗಳಲ್ಲಿ ಮುಖಂಡರು ಎಂದು ಓಡಾಡುತ್ತಿದ್ದಾರೆ. ಪೊಲೀಸರು ಯಾರನ್ನು ಸುಖಾಸುಮ್ಮನೆ ರೌಡಿ ಶೀಟರ್ ಮಾಡುವುದಿಲ್ಲ. ಅವರ ಹಿನ್ನೆಲೆ ಗಮನಿಸಿ ರೌಡಿ ಶೀಟರ್ ಮಾಡಿರುತ್ತಾರೆ. ಇಂತವರಿಗೆಲ್ಲಾ ಪೊಲೀಸ್ ಠಾಣೆ ಮತ್ತು ಬೇರೆ ಕಡೆ ಮಾನ್ಯತೆ ನೀಡಿದರೆ ಜನರಿಗೆ ನ್ಯಾಯ ಎಲ್ಲಿ ಸಿಗುತ್ತದೆ?. ಇಸ್ಪೀಟ್ ಆಡುವವರಿಗೆ, ದಂದೆ ಮಾಡುವವರಿಗೆ ಮತ್ತು ರೌಡಿಸಂ ಮಾಡುವವರಿಗೆ ನಾನು ಶಾಸಕನಾಗಿದ್ದಾಗ ಕಡಿವಾಣ ಹಾಕುತ್ತಿದ್ದೆ’ ಎಂದರು.

‘ನಗರದ ತುಮಕೂರು ರಸ್ತೆ ಅಗಲೀಕರಣ ವಿಷಯದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಕಾಮಗಾರಿ ಅರೆಬರೆಯಾಗಿ ನಡೆದು ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು ಎಲ್ಲರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದರೆ, ಸ್ಥಳೀಯರಿಗೆ ಅನುಕೂಲವಾಗುತ್ತದೆ. ಆದರೆ ಶಾಸಕರು ಮಾಡುತ್ತಿಲ್ಲ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ, ವೇಣು, ಗಂಗಾಧರಪ್ಪ ತಾರಾನಾಥ್, ಮಿಲ್ ಬಾಬು, ಖಾದರ್ ಸುಭಾನ್ ಖಾನ್, ವೆಂಕಟರಮಣ, ವಲೀ, ಕಲ್ಪನಾ, ರಮೇಶ್, ಕಂಬಕ್ಕ ವೆಂಕಟೇಶ್, ಕಮಲಾಕರ್, ಅರುಣ್, ಅಮರನಾಥರೆಡ್ಡಿ, ನಾರಾಯಣಸ್ವಾಮಿ, ನವೀನ, ನಾಗರಾಜ್, ರಮೇಶ್, ಕೆಂಕರೆ ಲಕ್ಷ್ಮಿನಾರಾಯಣ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-16-461904507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.