ಗೌರಿಬಿದನೂರು: ಗಡಿ ಭಾಗದಲ್ಲಿ ಕನ್ನಡ ಪಸರಿಸಲು ನಗರದ ಹೃದಯ ಭಾಗದಲ್ಲಿ ಕನ್ನಡ ಸಾಹಿತ್ಯ ಸದನ ನಿರ್ಮಿಸಲಾಗಿದೆ. ಆದರೆ, ಕನ್ನಡದ ಭಾಷಾ ಶ್ರೀಮಂತಿಕೆಯನ್ನು ಗಡಿ ಭಾಗದಲ್ಲಿ ಪಸರಿಸಲು ಬಳಕೆಯಾಗಬೇಕಾದ ಕನ್ನಡ ಸಾಹಿತ್ಯ ಸದನವು ಅನ್ಯ ಕಾರ್ಯ ಮತ್ತು ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದು ಕನ್ನಡ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಕನ್ನಡ ಸಾಹಿತ್ಯ ಪರಿಷತ್ ನಾಡಿನ ಸಾಹಿತ್ಯ ಚರಿತ್ರೆಗೆ ಮಹತ್ವದ ಕೊಡುಗೆ ನೀಡಿದೆ. ಕನ್ನಡ ಭಾಷೆಯ ಕೀರ್ತಿಯನ್ನು ವಿಶ್ವ ಮಟ್ಟಕ್ಕೇರಿಸಿದ ಕೀರ್ತಿ ಕನ್ನಡ ಸಾಹಿತ್ಯ ಪರಿಷತ್ಗೆ ಇದೆ.

ಕನ್ನಡ ಭಾಷೆಯ ಸಾಹಿತ್ಯವನ್ನು ನಾಡಿನೆಲ್ಲೆಡೆ ಹರಡಲು ಶ್ರಮಿಸುವ ಮೂಲಕ ನಾಡು, ನುಡಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ ಮೇಲಿದೆ. ಆದರೆ, ಸಕ್ರಿಯ ಸದಸ್ಯರ ಕೊರತೆ, ಸಾಹಿತ್ಯ ಚಟುವಟಿಕೆಗಳ ಆಯೋಜನೆಯಲ್ಲಿನ ನಿರ್ಲಕ್ಷ್ಯ ಮತ್ತು ಕೆಲವೊಮ್ಮೆ ಆಂತರಿಕ ವಿವಾದಗಳು ಕನ್ನಡ ಸಾಹಿತ್ಯ ಪರಿಷತ್ನ ನಿಷ್ಕ್ರಿಯತೆಗೆ ಕಾರಣವಾಗುತ್ತಿವೆ.

ಜೊತೆಗೆ ಆಗಾಗ ಪ್ರಚಾರಕ್ಕಾಗಿ ಮಾತ್ರ ನಡೆಯುವ ಸಣ್ಣಪುಟ್ಟ ಕಾರ್ಯಕ್ರಮಗಳಿಗೂ ಸಹ ಕಸಾಪ ಸದಸ್ಯರಿಗೆ ಆಮಂತ್ರಣ ನೀಡದಿರುವುದು. ಇದರ ಪರಿಣಾಮ ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕೆ ತೊಂದರೆಯಾಗುತ್ತಿದೆ ಎಂದು ಆಜೀವ ಸದಸ್ಯರ ಆರೋಪ.

ಗಡಿ ಭಾಗದಲ್ಲಿ ಪ್ರತಿದಿನವೂ ಕನ್ನಡ ಚಟುವಟಿಕೆಗಳನ್ನು ನಡೆಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಅವರು ಸರ್ಕಾರದಿಂದ ಹಣ ಮಂಜೂರು ಮಾಡಿಸಿ, ಕನ್ನಡ ಸದನವನ್ನು ನಿರ್ಮಾಣ ಮಾಡಿಸಿದ್ದಾರೆ. ಆದರೆ, ಕಸಾಪ ಕನ್ನಡಪರ ಕೆಲಸ ಮಾಡುವುದಾಗಲಿ ಅಥವಾ ಹೊಸ ಪ್ರತಿಭೆಗಳನ್ನು ಹೊರತರುವ ಕೆಲಸವನ್ನಾಗಿ ಮಾಡುತ್ತಿಲ್ಲ.

ಇದರಿಂದಾಗಿ ಕನ್ನಡ ಸದನದ ಆವರಣವು ಬಟ್ಟೆ ಒಣಗಿಸುವ, ಮೆಣಸಿನಕಾಯಿ, ದನಿಯಾ ಬೀಜ ಒಣಗಿಸುವ ಮತ್ತು ಸಂಜೆ ಹೊತ್ತು ಪುಂಡ ಪೋಕರಿಗಳ ಅಡ್ಡೆಯಾಗಿ ದುರುಪಯೋಗವಾಗುತ್ತಿದೆ. ಕನ್ನಡ ಸದನದ ಆವರಣದಲ್ಲಿ ಇಷ್ಟೆಲ್ಲಾ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ, ಕಾಂಪೌಂಡ್ ಗೇಟಿಗೆ ಬೀಗ ಹಾಕುವ ಗೋಜಿಗೆ ಹೋಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ನೂರಾರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿದ್ದರೂ, ಆಡಳಿತ ಮಂಡಳಿಯ ಬೇಜವಾಬ್ದಾರಿ ಮತ್ತು ನಿರ್ವಹಣೆ ಕೊರತೆ ಬಗ್ಗೆ ಪ್ರಶ್ನೆ ಮಾಡದೆ ಇರುವುದೇ ಕನ್ನಡ ಸಾಹಿತ್ಯ ಸದನದ ಈ ಪರಿಸ್ಥಿತಿಗೆ ಕಾರಣ ಎಂದು ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಕಾರ್ಯಕ್ರಮ ನಡೆಯಲಿ

ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಸಂಸ್ಕೃತಿಯನ್ನು ನಿರಂತರವಾಗಿ ಪಸರಿಸಲು ಶಾಸಕರ ಮೇಲೆ ನಿರಂತರ ಒತ್ತಾಯ ತಂದು ಕನ್ನಡ ಸಾಹಿತ್ಯ ಸದನವನ್ನು ನಿರ್ಮಿಸಲಾಯಿತು. ಆದರೆ, ಯೋಗ ಮಂದಿರದವರು ಯೋಗ ಮಾಡಲು ಕನ್ನಡ ಸಾಹಿತ್ಯ ಸದನವನ್ನು ಬಳಸಿಕೊಳ್ಳುತ್ತಿದ್ದಾರೆ.

ಸದನದಲ್ಲಿ ಕನ್ನಡದ ಗ್ರಂಥಾಲಯವಾಗಲೀ, ಕನ್ನಡದ ದಿನ ಪತ್ರಿಕೆಗಳನ್ನು ತರಿಸಿ ಓದುವ ಅಥವಾ ಕನ್ನಡಪರ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇನ್ನು ಮುಂದಾದರೂ ಕನ್ನಡ ಸದನದಲ್ಲಿ ಕನ್ನಡ ಕಾರ್ಯಕ್ರಮಗಳು ನಡೆಯುವಂತಾಗಲಿ. ನಂಜುಂಡಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕನ್ನಡ ಸಾಹಿತ್ಯ ಸದನ ನಿರ್ಮಿಸಲಾಗಿದೆ. ಆದರೆ, ಇಲ್ಲಿ ಯಾವುದೇ ಕನ್ನಡಪರ ಕಾರ್ಯಗಳು ನಡೆಯುತ್ತಿಲ್ಲ. ಯಾವ ಕನ್ನಡ ಪ್ರತಿಭೆಗಳನ್ನೂ ಹೊರತರುವ ಕೆಲಸ ಮಾಡುತ್ತಿಲ್ಲ.
–ಅಶೋಕ್, ಕಸಾಪ ಅಜೀವ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.