ಗುಡಿಬಂಡೆ: ತಾಲ್ಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಆಗ್ರಹಿಸಿ ಹೋರಾಟ ನಡಸಲು ರೂಪುರೇಷೆ ಸಿದ್ಧಪಡಿಸಲು ಹಾಗೂ ಸಾರ್ವಜನಿಕರ ಸಲಹೆ, ಸೂಚನೆ ಆಲಿಸಲು ಏಪ್ರಿಲ್ 19 ರಂದು ಬೆಳ್ಳಗ್ಗೆ 10ಕ್ಕೆ ಪಟ್ಟಣದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಗುಂಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಸದಸ್ಯ ಬಿ.ಅಮೀರ್ ಜಾನ್ ತಿಳಿಸಿದ್ದಾರೆ.

ಕ್ರಿ.ಶ 1645ರಿಂದ ಹಾವಳಿ ಬೈರೇಗೌಡ ಗುಡಿಬಂಡೆ ಮತ್ತು ಸುತ್ತಮುತ್ತಲ ಪ್ರದೇಶವನ್ನು ಆಳಿದರೆಂಬ ಮಾಹಿತಿ ಇದೆ. ಇವರ ಆಳ್ವಿಕೆಯಲ್ಲಿ ಅಮಾನಿಬೈರಸಾಗರ ಕೆರೆ, ಸುರಸದ್ಮಗಿರಿ ಬೆಟ್ಟ, ಹಾಗೂ ಸುತ್ತಮುತ್ತಲಿನ ಸ್ಕಂಧಗಿರಿ, ವಿದ್ಯಾಗಿರಿ, ಧೇನುಗಿರಿ, ವರಹಗಿರಿ ಬೆಟ್ಟಗಳ ಸುತ್ತಮುತ್ತಲ ಪ್ರದೇಶವನ್ನು ಅಕ್ರಮಿಸಿ ಆಳ್ವಿಕೆ ನಡೆಸಿದ್ದರು. ಇಂತಹ ಪುರಾತನ ಇತಿಹಾಸವುಳ್ಳ ಗುಡಿಬಂಡೆಯು ಸ್ವಾತಂತ್ರ್ಯದ ನಂತರ 1962ರಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದ ಚುನಾವಣೆಯಿಂದ ಇಂದಿನ ವರೆಗೂ ಬಾಗೇಪಲ್ಲಿ ವಿಧಾನಸಭೆ ಸೇರಿಸಲಾಗಿದೆ ಎಂದು ತಿಳಿಸಿದರು.

ಗುಡಿಬಂಡೆ ತಾಲ್ಲೂಕಿನಲ್ಲಿ ಮಜರಾ ಗ್ರಾಮ ಸೇರಿ 145 ಹಳ್ಳಿ, ಎಂಟು ಗ್ರಾಮ ಪಂಚಾಯಿತಿ ಕೇಂದ್ರಗಳು, ಎರಡು ಹೋಬಳಿ ಕೇಂದ್ರ ಹೊಂದಿದೆ. ತಾಲ್ಲೂಕು ಕೇಂದ್ರಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯ ಗ್ರಾಮಗಳು ಸುಮಾರು 3 ರಿಂದ 14 ಕಿ.ಮೀ ದೂರದಲ್ಲಿದೆ. ಮಂಡಿಕಲ್ಲು ಹೋಬಳಿ ಹಾಗೂ ನಗರಗೆರೆ ಹೋಬಳಿಯ ಗ್ರಾಮಗಳು ಹತ್ತಿರದ ತಾಲೂಕಿನ ನ್ಯಾಯಾಲಯವಾದ ಗುಡಿಬಂಡೆ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಬರುತ್ತಾರೆ. ಮಂಡಿಕಲ್ಲು ವ್ಯಾಪ್ತಿಯ ಗ್ರಾಮಗಳು ಗುಡಿಬಂಡೆ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲೇ ಇದೆ. ಹೀಗಾಗಿ ಒಂದು ಕ್ಷೇತ್ರವಾಗುವ ಎಲ್ಲ ಅರ್ಹತೆ ಇದೆ ಎಂದು ತಿಳಿಸಿದರು.

ಈಗ ಮುಂಬರುವ ದಿನಗಳಲ್ಲಿ ಗುಡಿಬಂಡೆ ವಿಧಾನ ಕ್ಷೇತ್ರವಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಈ ಸಂಬಂಧವಾಗಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸುವ ಸಭೆ ಕರೆಯಲಾಗಿದೆ. ಸಭೆಗೆ ಪ್ರತಿಯೊಬ್ಬರು ಪಕ್ಷ ಭೇಧ, ಜಾತಿ ಬೇಧಗಳನ್ನು ಮರೆತು ಹಾಜರಾಗಲು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-16-991155410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.