ಗುಡಿಬಂಡೆ: ಪಟ್ಟಣದ ಹೊರವಲಯದ ಏಡುಗರ ಅಕ್ಕಮ್ಮ ದೇವತೆಗೆ ಪ್ರತಿ ವರ್ಷದಂತೆ ಈ ವರ್ಷವೂ ಎರಡು ದಿನಗಳ ಕಾಲ ದೀಪೋತ್ಸವ ಮತ್ತು ಕಾಯಿ ಉಟ್ಲು ಪರಿಷೆ ಅದ್ದೂರಿಯಾಗಿ ನಡೆಯಿತು. ಈ ಜಾತ್ರೆಯಲ್ಲಿ ಗುಡಿಬಂಡೆ ಸೇರಿದಂತೆ ವಿವಿಧ ಕಡೆಯಿಂದ ನೂರಾರು ಭಕ್ತರು ಪಾಲ್ಗೊಂಡರು.

ಗುಡಿಬಂಡೆಯ ಏಳು ಗ್ರಾಮ ದೇವತೆಗಳ ಪೈಕಿ ಹಿರಿಯಳಾದ ಏಡುಗರ ಅಕ್ಕಮ್ಮ ದೇವತೆಗೆ ಮಂಗಳವಾರ ಮತ್ತು ಬುಧವಾರ ಎರಡು ದಿನ ಗ್ರಾಮ ದೇವತೆ ಜಾತ್ರೆ ಅಂಗವಾಗಿ ಮಂಗಳವಾರ ನೂರಾರು ಸಂಖ್ಯೆ ಮಹಿಳೆಯರು ತಂಬಿಟ್ಟಿನಿಂದ ಮಾಡಿದ ದೀಪಗಳಿಗೆ ವಿವಿಧ ಹೂವಿನಿಂದ ಅಲಂಕರಿಸಲಾಯಿತು. ಅಲ್ಲದೆ, ಪಟ್ಟಣದ ವಿವಿಧ ಗ್ರಾಮ ದೇವತೆಗಳಿಗೆ ದೀಪ ಬೆಳಗಲಾಯಿತು.

ಏಡುಗರ ಅಕ್ಕಮ್ಮ, ಮುತ್ಯಾಲಮ್ಮ, ಸಪ್ಪಲಮ್ಮ, ಮಾರೆಮ್ಮ, ಕೊಲ್ಲಾಪುರಿ ಮಹಾಲಕ್ಷ್ಮಿ, ಗಂಗಮ್ಮ, ಸತ್ಯಮ್ಮ ಸೇರಿ ಏಳು ದೇವತೆಗಳು ಪಟ್ಟಣದ ಗ್ರಾಮ ದೇವತೆಗಳಾಗಿದ್ದಾರೆ. ಶತಮಾನಗಳ ಹಿಂದೆ ಪ್ಲೇಗೂ ಹಾಗೂ ಇತರೆ ಮಾರಣಾಂತಿಕ ರೋಗಗಳು ಕಂಡು ಬಂದಾಗ ಗ್ರಾಮ ದೇವತೆಗಳಿಗೆ ಹರಿಕೆ ಹೊತ್ತು ವಾಸಿಯಾದ ಬಳಿಕ ವರ್ಷಕ್ಕೊಮ್ಮೆ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ.

ಏಳು ಗ್ರಾಮ ದೇವತೆಗಳ ಪೈಕಿ ಕೊಲ್ಲಾಪುರಿ ಮಹಾಲಕ್ಷ್ಮಿ ದೇವತೆಯನ್ನು ಬಿಟ್ಟು ಉಳಿದ ಎಲ್ಲ ಗ್ರಾಮ ದೇವತೆಗಳಿಗೂ ಮಂಗಳವಾರ ಪ್ರಾಣಿ ಬಲಿ ಕೂಡುವ ಮೂಲಕ ಭಕ್ತರು ಹರಿಕೆ ತೀರಿಸಿಕೊಳ್ಳುತ್ತಾರೆ. ಈ ಹಬ್ಬಕ್ಕೆ ವಿವಿಧ ಗ್ರಾಮಗಳಲ್ಲಿರುವ ಬಂಧು ಬಳಗದವರು ಬಂದು ಎರಡು ದಿನ ಗ್ರಾಮ ದೇವತೆ ಹಬ್ಬದಲ್ಲಿ ಭಾಗವಹಿಸುತ್ತಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.

ಜಾತ್ರೆ ಅಂಗವಾಗಿ ಸೋಮವಾರ ಸಂಜೆ ಸುಮಾರು 60 ಅಡಿ ಎತ್ತರದ ಉಟ್ಲು ಮರ ಪತ್ರಿಷ್ಠಾಪನೆ ಮಾಡಿ ಬುಧವಾರ ಎತ್ತರದ ಕಲ್ಲು ಕಂಬದ ಮೇಲೆ ನಿರ್ಮಿಸಿರುವ ತಿರುಗುವ ತೊಟ್ಟಿಲಲ್ಲಿ ಕುಳಿತು ಉದ್ದವಾದ ಹಗ್ಗಕ್ಕೆ ತೆಂಗಿನ ಕಾಯಿ ಕಟ್ಟಿ ತಿರುಗಿಸಲಾಗುತ್ತದೆ. ಹತ್ತಾರು ಯುವಕರು ಉದ್ದನೆಯ ದೊಣ್ಣೆಗಳನ್ನು ಹಿಡಿದು ಕಾಯಿ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಕಾಯಿ ಒಡೆದವರಿಗೆ ಬಹುಮಾನ ನೀಡಲಾಗುತ್ತದೆ. ಈ ದೃಶ್ಯವು ಪರಿಷೆಯಲ್ಲಿ ನೆರೆದಿದ್ದ ಜನರನ್ನು ರಂಜಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-16-1053711472

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.