ಗುಡಿಬಂಡೆ: ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಗುಡಿಬಂಡೆ ತಾಲ್ಲೂಕಿನ 2ನೇ ಸಮ್ಮೇಳನ ಸೋಮೇನಹಳ್ಳಿಯಲ್ಲಿ ಶುಕ್ರವಾರ ನಡೆಯಿತು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ‘ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಜೀವನ ತುಂಬಾ ಕಷ್ಟಕರವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ’ ಎಂದರು.

ಮನರೇಗಾ ಯೋಜನೆಯು ಗ್ರಾಮೀಣ ಬಡವರಿಗೆ ಆಸರೆಯಾಗಿತ್ತು. ಇದು ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಕಲ್ಪಿಸುವ ಯೋಜನೆಯಾಗಿತ್ತು. ಆದರೆ, ಜಿ–ರಾಮ್ ಜಿ ಯೋಜನೆಯಿಂದ ಗ್ರಾಮೀಣ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದರು.

ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಯರಾಮ ರೆಡ್ಡಿ, ಚನ್ನರಾಯಪ್ಪ, ಮಸಣ ಕಾರ್ಮಿಕರ ಸಂಘದ ಕೆ. ಮುನಿಯಪ್ಪ, ಸೋಮೇನಹಳ್ಳಿ ಲಕ್ಷ್ಮಿನಾರಾಯಣ, ಆಂಧ್ರ ಸೀನಪ್ಪ, ಮಂಜುನಾಥ ಉಪಸ್ಥಿತರಿದ್ದರು.

ನೂತನ ಸಮಿತಿ ಆಯ್ಕೆ: ನೂತನ ಸಮಿತಿಗೆ 17 ಜನರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಆಗಿ ಕೊಂಡವಲಪಲ್ಲಿ ಕೃಷ್ಣಪ್ಪ, ಕಾರ್ಯದರ್ಶಿಯಾಗಿ ಸೋಮನಹಳ್ಳಿ ಗಂಗರಾಜು ಆಯ್ಕೆಯಾದರು.

ಉಪಾಧ್ಯಕ್ಷರರಾಗಿ ಸೋಮೇನಹಳ್ಳಿ ರಾಮಕೃಷ್ಣ, ಬೆಣ್ಣೀಪರ್ತಿ ಶ್ರೀರಾಮಪ್ಪ, ವೆಂಕಟೇಶ ಸೋಮೇನಹಳ್ಳಿ, ಸಹ ಕಾರ್ಯದರ್ಶಿಗಳಾಗಿ ನರಸಪ್ಪ ಚಂಡೂರು, ಶ್ರೀನಿವಾಸ ತಿರುಮಣಿ, ಚೌಡಪ್ಪ ಸೋಮೇನಹಳ್ಳಿ, ಆದಿ ನಾರಾಯಣಪ್ಪ ನಲ್ಲಗೊಂಡಯ್ಯಗಾರಿ ಪಲ್ಲಿ ಆದಿನಾರಾಯಣಪ್ಪ ಪಸುಪುಲೋಡು ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.