ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ರಾಜ್ಯ ಮಟ್ಟದ ತಮಟೆ ಹಬ್ಬ

ಜೀವಿಕಾ ಸಂಘಟನೆಯಿಂದ ಕಾರ್ಯಕ್ರಮ
Last Updated 26 ಜನವರಿ 2023, 4:55 IST
ಅಕ್ಷರ ಗಾತ್ರ

ಗುಡಿಬಂಡೆ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜೀವಿಕಾ ಸಂಘಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಮಟ್ಟದ ದಲಿತ ಸಂಗೀತ ಕಲೆ ಉತ್ಸವ ತಮಟೆ ಹಬ್ಬದ ಕಾರ್ಯಕ್ರಮ ನಡೆಯಿತು.

ಹೈಕೋರ್ಟ್ ವಕೀಲ ಹರಿರಾಮ್ ಮಾತನಾಡಿ, ‘ಮಾನವ ಸಮಾಜ ಕಾಲಕ್ಕೆ ತಕ್ಕಂತೆ ಬದಲಾವಣೆ ಅಗಬೇಕು. ಪರಿಸ್ಥಿತಿಗೆ ಅನುಗುಣವಾಗಿ ಜನರಲ್ಲಿ ಬದಲಾವಣೆಯಾದರೆ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಶೋಷಿತ ಸಮುದಾಯಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಜೀತ ಪದ್ಧತಿ ಇನ್ನೂ ಜೀವಂತವಾಗಿದೆ. ಇದಕ್ಕೆ ಸರ್ಕಾರಗಳೇ ಕಾರಣ ಎಂದು ಆರೋಪಿಸಿದರು.

ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, 22 ವರ್ಷಗಳಿಂದ ಸಮಾಜದ ಪರಿವರ್ತನೆಗಾಗಿ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಈ ವರ್ಷದ ಸಾಮೂಹಿಕ ವಿವಾಹದಲ್ಲಿ ನನ್ನ ಮಗಳ ಮದುವೆಯೂ ನಡೆಯಲಿದೆ. ಜೀವಿಕ ಸಂಘಟನೆ ಯಾವುದೇ ಪ್ರತಿಫಲ ಬಯಸದೆ ಜೀತದಾಳುಗಳ ಪರಿವರ್ತನೆಗೆ ಕೆಲಸ ಮಾಡುತ್ತಿದೆ ಎಂದರು.

ಜೀವಿಕ ಸಂಸ್ಥಾಪಕರು, ರಾಜ್ಯ ಸಂಚಾಲಕ ಡಾ. ಕಿರಣ ಕಮಲ ಪ್ರಸಾದ ಮಾತನಾಡಿದರು.

ಸಾಮಾಜಿಕ ಹೋರಾಟಗಾರರು ಹಾಗೂ ಚಿತ್ರ ನಟ ಚೇತನ್ ಅಹಿಂಸಾ ಮಾತನಾಡಿ, ‘ತಮಟೆ ನಮ್ಮ ದೇಶದ ಮೂಲ ನಿವಾಸಿಗಳ ದೊಡ್ಡ ಸಂಸ್ಕೃತಿ. ತಮಟೆ ಶಬ್ದದಿಂದ ಸಮಾಜದಲ್ಲಿ ಪರಿವರ್ತನೆಯಾಗಲಿದೆ ಎಂದರು.

ತಮಟೆ ಹಬ್ಬಕ್ಕೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಆಗಮಿಸಿದ್ದ ತಮಟೆ ಕಲಾವಿದರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.

ವೇದಿಕೆಯಲ್ಲಿ ವಿವಿಧ ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರಾದ ಪೂರ್ಣಿಮ ಮಧು ಕುಮಾರ್,ಮಹದೇವ, ಭಾಗ್ಯಮ್ಮ ನಾರಾಯಣಸ್ವಾಮಿ, ಎಚ್.ಪಿ. ರಾಮನಾಥರೆಡ್ಡಿ, ಬಿ.ವಿ. ವೆಂಕಟರಮಣ, ವಕೀಲ ನಾರಾಯಣಸ್ವಾಮಿ, ಜಿ.ವಿ. ಗಂಗಪ್ಪ, ಅರ್. ಕದಿರಪ್ಪ, ಮದ್ದಪ್ಪ, ವೆಂಕಟನರಸಪ್ಪ, ತಹಶೀಲ್ದಾರ್ ಸಿಗಬತ್ ಉಲ್ಲಾ, ಇಒ ಡಾ. ಬಿಂದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT