ಸೌಲಭ್ಯವಿಲ್ಲದೆ ಮುದುಡಿ ಕುಳಿತ ಹಕ್ಕಿ ಪಿಕ್ಕಿಗಳು

7
ಸಾದಲಿಯಲ್ಲಿ 40 ಕುಟುಂಬಗಳಿಗೆ ಮೂಲಸೌಕರ್ಯವೇ ಇಲ್ಲ

ಸೌಲಭ್ಯವಿಲ್ಲದೆ ಮುದುಡಿ ಕುಳಿತ ಹಕ್ಕಿ ಪಿಕ್ಕಿಗಳು

Published:
Updated:
Deccan Herald

ಸಾದಲಿ: ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ 40 ಹಕ್ಕಿಪಕ್ಕಿ ಕುಟುಂಬಗಳು ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ.

ಮನೆ, ಕುಡಿಯುವ ನೀರಿನ ವ್ಯವಸ್ಥೆ, ರಕ್ಷಣೆ ಹಾಗೂ ಭದ್ರತೆಯೆ ಇಲ್ಲದೆ ಬದುಕು ಸಾಗಿಸುತ್ತಿದ್ದಾರೆ. 300 ಮಹಿಳೆಯರು ಹಾಗೂ 200 ಪುರುಷರು ಈ 40 ಕುಟುಂಬಗಳಲ್ಲಿ ಇದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 10ರವರೆಗೆ 25 ಹಕ್ಕಿಪಿಕ್ಕಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ 8ನೇ ತರಗತಿಗೆ ದಾಖಲಾಗದೆ ಶಾಲೆ ಬಿಟ್ಟು ಪೋಷಕರು ಜತೆ 15 ಮಕ್ಕಳು ಅಲೆಮಾರಿಗಳಾಗಿದ್ದಾರೆ.

ಕುಟುಂಬಗಳಿಗೆ ಕನಿಷ್ಠ ಶೌಚಾಲಯವೂ ಇಲ್ಲ. ಹಲವು ವರ್ಷಗಳ ಹಿಂದೆ 10 ಕುಟುಂಬಗಳಿಗೆ ಸರ್ಕಾರ ಸಣ್ಣ ಪ್ರಮಾಣದಲ್ಲಿ ಭೂಮಿ ನೀಡಿದೆ. ಅದರೇ ಅಲ್ಲಿ ಆ ಕುಟುಂಬಗಳು ಮನೆ ನಿರ್ಮಿಸಿಕೊಳ್ಳಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

ಉಳಿದಂತೆ 30 ಕುಟುಂಬಗಳಿಗೆ ಜಮೀನು ನೀಡುವ ಯೋಜನೆ ಅರ್ಧದಲ್ಲೇ ನಿಂತಿದೆ. ಬೇರೆಬೇರೆ ಕಡೆ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದಿಸುತ್ತಿದ್ದಾರೆ.

ಸಮಸ್ಯೆಗಳನ್ನು ಪರಿಹರಿಸುವಂತೆ ಸ್ಥಳೀಯ ಜನ ಪ್ರತಿನಿಧಿಗಳಿಗೆ ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಅವರು ಗಮನವನ್ನೇ ನೀಡಿಲ್ಲ ಎಂದು ಹಕ್ಕಿ‍ಪಿಕ್ಕಿ ಜನರು ಅಸಮಾಧಾನ ವ್ಯಕ್ತಪಡಿಸುವರು.

‘ಮಳೆಗಾಲದಲ್ಲಿ ಗುಡಿಸಲುಗಳಲ್ಲಿ ಆಹಾರ ತಯಾರಿಸಲು, ಮಲಗಲು ಸಾಧ್ಯವಾಗುತ್ತಿಲ್ಲ. ಪ್ರೌಢಾವಸ್ಥೆಗೆ ಬಂದ ಹೆಣ್ಣ ಮಕ್ಕಳು ಹೊರಗೆ ಶೌಚಕ್ಕೆ ಹೋಗಬೇಕಾಗಿದೆ’ ಎಂದು ಬೇಸರದಿಂದ ನುಡದಿಯುವರು.

ಚುನಾವಣೆ ಸಮಯ ಬಿಟ್ಟರೇ ಬೇರೆ ಯಾವುದೇ ಸಮಯದಲ್ಲಿ ಜನ ಪ್ರತಿನಿಧಿಗಳು ಕಾಲೊನಿ ಬರುವುದಿಲ್ಲ. ಚುನಾವಣೆ ಸಮಯದಲ್ಲಿ ಸೌಕರ್ಯಗಳ ಬಗ್ಗೆ ಕೇಳಿದಾಗ ನೆಪಗಳನ್ನು ಹೇಳುವರು. ಮಳೆಗಾಲದಲ್ಲಿ ಜೀವನ ನಡಸುವುದು ಕಷ್ಟವಾಗಿದೆ ಶಾಲೆಯ ಆವರಣದಲ್ಲಿ ರಾತ್ರಿ ಮಲಗುತ್ತೇವೆ. ಅಲ್ಲಿಯೇ ಆಹಾರ ತಯಾರಿಸುತ್ತೇವೆ ಎಂದು ಮಾಹಿತಿ ನೀಡಿದರು.

ಗುಡಿಸಲುಗಳಿಗೆ ನೀರು

ಮಳೆಗಾಲದಲ್ಲಿ ಇಳಿಜಾರಿನಲ್ಲಿರುವ ಗುಡಿಸಲುಗಳಿಗೆ ನೀರು ನುಗ್ಗುತ್ತಿದೆ. ಶಾಸಕರು ಮನೆಗಳನ್ನು ಮಂಜೂರು ಮಾಡುಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದು ಯಾವ ಕಾಲಕ್ಕೆ ಜಾರಿಯಾಗುತ್ತದೆಯೋ ಕಾದು ನೋಡಬೇಕು ಎನ್ನುವರು ಹಕ್ಕಿಪಿಕ್ಕಿ ಜನರು. 

ನಾವು ಸ್ನಾನ ಮತ್ತು ಶೌಚಲಯಕ್ಕೆ ಬಯಲನ್ನೇ ಆಶ್ರಯಿಸಬೇಕಾಗಿದೆ. ಇದರಿಂದ ಕೆಲವು ವೇಳೆ ಭಯ ಆಗುತ್ತದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ನಮಗೆ ಸೌಲಭ್ಯ ಕಲ್ಪಿಸಬೇಕು.
- ಲಕ್ಷ್ಮೀ, ಹಕ್ಕಿಪಿಕ್ಕಿ ಸಮುದಾಯದ ವಿದ್ಯಾರ್ಥಿನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !