ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ನೀರನ್ನು ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಲಾಗುತ್ತಿದೆ. ಈ ಮೂಲಕ ಚಿಕ್ಕಬಳ್ಳಾಪುರದ ಜನರು, ಜಾನುವಾರು ಮತ್ತು ಭೂಮಿಗೆ ವಿಷ ಉಣಿಸಲಾಗುತ್ತಿದೆ. ಬಜೆಟ್ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಹಣ ಮೀಸಲಿಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರನೇ ಹಂತದ ಶುದ್ಧೀಕರಣದ ವಿಚಾರದಲ್ಲಿ ರಾಜಕೀಯ ನಾಯಕರು ಜಾಣ ಕುರುಡರಾಗಿದ್ದಾರೆ. ಈ ಕಲುಷಿತ ನೀರಿನ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.

ಮೂರು ಹಂತದಲ್ಲಿ ನೀರು ಶುದ್ಧೀಕರಣ ಆಗಬೇಕು ಎಂದು ಪ್ರದೀಪ್ ಈಶ್ವರ್ ಈ ಹಿಂದೆ ವೀರಾವೇಶ ತೋರುತ್ತಿದ್ದರು. ಆದರೆ ಈಗ ಮೌನವಾಗಿದ್ದಾರೆ. ಜಾಣತನದ ಉತ್ತರ ನೀಡುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ನಾಯಕರಿಗೆ ಬದ್ಧತೆ ಇರಬೇಕು ಎಂದರು.

ಪ್ರದೀಪ್ ಈಶ್ವರ್ ಅವರೇ ಈ ಹಿಂದೆ ನಮ್ಮೆಲ್ಲರ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದೀರಿ. ಆದರೆ ಇಂದು ಜನರಿಗೆ ಮೋಸ ಆಗುತ್ತಿದ್ದರೂ ಸುಮ್ಮನಿರುವಿರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿನ ವಾಸ್ತವ ಸ್ಥಿತಿ ತಿಳಿಸಿ ಮೂರು ಹಂತದ ಶುದ್ಧೀಕರಣಕ್ಕೆ ಹಣ ಕೊಡಿಸಿದರೆ ನಾವೇ ನಿಮ್ಮನ್ನು ಸನ್ಮಾನಿಸುತ್ತೇವೆ. ಮೂರು ಹಂತದ ಶುದ್ಧೀಕರಣದ ವಿಚಾರವಾಗಿ ನಮಗೆ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು.

ಇಲ್ಲಿ ಬೆಳೆಯುವ ತರಕಾರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆ ಆಗುತ್ತಿವೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ. ಹೂ, ಹಣ್ಣು ಬಾಳಿಕೆ ಬರುತ್ತಿಲ್ಲ. ಭವಿಷ್ಯದಲ್ಲಿ ನಮ್ಮ ತರಕಾರಿ, ಹಣ್ಣುಗಳ ಮೇಲೆ ಪರಿಣಾಮ ಬೀರಿದರೆ ರೈತರ ಆರ್ಥಿಕ ಶಕ್ತಿಯೇ ಕುಗ್ಗುತ್ತದೆ ಎಂದರು.

ಎಚ್.ಎನ್.ವ್ಯಾಲಿ ನೀರು ಅಂತರ್ಜಲ ಸೇರುತ್ತಿದೆ. ಆ ನೀರಿನಿಂದ ಬೆಳೆದ ತರಕಾರಿ, ಹಣ್ಣುಗಳ ಸೇವನೆ ಪರಿಣಾಮ ಅನಾರೋಗ್ಯವೂ ಹೆಚ್ಚುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ತಿಂಗಳಿಗೆ 800ರಿಂದ 900, ಜೈನ್ ಆಸ್ಪತ್ರೆಯಲ್ಲಿ 600 ಮತ್ತು ಅಭಯ ಆಸ್ಪತ್ರೆಯಲ್ಲಿ 300 ರೋಗಿಗಳು ಡಯಾಲಿಸಿಸ್ಗೆ ಒಳಪಡುತ್ತಿದ್ದಾರೆ. ವಯೋಸಹಜವಾದ ಕಾರಣಗಳನ್ನು ಹೊರತುಪಡಿಸಿ ಬಹಳಷ್ಟು ಮಂದಿ ಕಿಡ್ನಿ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೆರೆಯ ದೊಡ್ಡಬಳ್ಳಾಪುರ ಮತ್ತು ನೆಲಮಂಗಲದ ಶಾಸಕರು ಯಾವುದೇ ಕಾರಣಕ್ಕೂ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ನಮ್ಮ ಕೆರೆಗಳಿಗೆ ತುಂಬಿಸಬೇಡಿ ಎಂದು ಸರ್ಕಾರಕ್ಕೆ ಖಡಾಖಂಡಿತವಾಗಿ ಹೇಳಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳ ಮೇಲೆ ಯಾವ ಒತ್ತಡವಿದೆಯೊ ಗೊತ್ತಿಲ್ಲ ಎಂದರು.

ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು, ನೀರಾವರಿ ತಜ್ಞರು, ವಿಜ್ಞಾನಿಗಳು ಮೂರು ಹಂತದಲ್ಲಿ ಸಂಸ್ಕರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹೀಗಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಮೌನವಾಗಿದ್ದಾರೆ ಎಂದು ಹೇಳಿದರು.

ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್ನಲ್ಲಿದ್ದಾಗ ಈ ನೀರು ತಂದರು. ಅಂದೂ ಸಹ ನಾವು ಮೂರು ಹಂತದಲ್ಲಿ ಶುದ್ಧೀಕರಣ ಆಗಬೇಕು ಎಂದಿದ್ದೆವು. ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಮೂರು ಹಂತದ ಶುದ್ಧೀಕರಣದ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದರು. ಇದರಲ್ಲಿ ಡಾ.ಕೆ.ಸುಧಾಕರ್ ಅವರ ಪಾತ್ರ ಪ್ರಮುಖವಾಗಿತ್ತು. ಸರ್ಕಾರ ಬದಲಾದ ನಂತರ ಮೂರು ಹಂತದ ಶುದ್ಧೀಕರಣ ನನೆಗುದಿಗೆ ಬಿದ್ದಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ರಿಯಾಜ್, ರಮೇಶ್, ಶಿವು, ಶಾರದ, ವೆಂಕಟ ರೆಡ್ಡಿ, ಶಿವಶಂಕರ್, ಮಹೇಶ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

‘ವಾರ್ಡ್ಗಳಿಗೆ ಅಶುದ್ಧ ನೀರು’

ಎಚ್.ಎನ್.ವ್ಯಾಲಿ ನೀರು ತುಂಬಿಸಿರುವ ಕಂದವಾರ ಕೆರೆಯಲ್ಲಿ 10 ರಿಂದ 12 ಕೊಳವೆಬಾವಿಗಳು ವಿಫಲವಾಗಿವೆ. 7ರಲ್ಲಿ ನೀರು ದೊರೆಯುತ್ತಿದೆ. ಈ ನೀರನ್ನು ನಗರದ 15 1112 13 ಮತ್ತು 17ನೇ ವಾರ್ಡ್ಗಳಿಗೆ ಪೂರೈಸಲಾಗುತ್ತಿದೆ. ಇದೇ ನೀರನ್ನು ನಾಗರಿಕರು ಕುಡಿಯುತ್ತಿದ್ದಾರೆ ಎಂದರು. ಬೇರೆ ವಾರ್ಡ್ಗಳಲ್ಲಿ ನೀರು ಕಡಿಮೆ ಆದರೆ ಆ ವಾರ್ಡ್ಗಳಿಗೂ ಕೆರೆ ಅಂಗಳದಲ್ಲಿರುವ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಸರ್ಕಾರವೇ ಜನರಿಗೆ ವಿಷದ ನೀರು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಮುತ್ತಿಗೆ ಎಚ್ಚರಿಕೆ

ಎಚ್.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಲು ಬಜೆಟ್ನಲ್ಲಿ ಹಣ ಮೀಸಲಿಡದಿದ್ದರೆ ಚಿಕ್ಕಬಳ್ಳಾಪುರ ಬಂದ್ ನಡೆಸಲಾಗುವುದು. ಬೆಂಗಳೂರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂದೀಪ್ ರೆಡ್ಡಿ ತಿಳಿಸಿದರು. ಈ ಹಿಂದೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಗಳೂರಿಗೆ ಮುತ್ತಿಗೆ ಹಾಕಿತ್ತು. ಅಂದಿನ ಹೋರಾಟಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಮತ್ತಿಗೆ ಹಾಕುತ್ತೇವೆ. ಬೆಂಗಳೂರಿಗೆ ರೈತರ ಟ್ರಾಕ್ಟರ್ಗಳು ಎತ್ತಿನಗಾಡಿಗಳನ್ನು ನುಗ್ಗಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.