ಸ್ವಾತಂತ್ರ್ಯ ದಿನ: ತುರುಸಿನ ತಾಲೀಮು

7

ಸ್ವಾತಂತ್ರ್ಯ ದಿನ: ತುರುಸಿನ ತಾಲೀಮು

Published:
Updated:
Deccan Herald

ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸರು, ವಿವಿಧ ಶಾಲಾ ವಿದ್ಯಾರ್ಥಿಗಳು ಪೂರ್ವಭಾವಿಯಾಗಿ ಪಥಸಂಚಲನದ ತಾಲೀಮು ನಡೆಸಿದರು.

ಪರೇಡ್‌ ಕಮಾಂಡರ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್‌ ಎನ್‌.ಎಲ್‌.ನಾಗೇಂದ್ರಪ್ರಸಾದ್‌ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪಥಸಂಚಲನದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್‌ ಪಡೆ, ಜಿಲ್ಲಾ ಗೃಹ ರಕ್ಷಕ ದಳ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು, ನ್ಯೂ ಹೊರೈಜನ್ ಪ್ರೌಢಶಾಲೆ, ಪೂರ್ಣಪ್ರಜ್ಞಾ ಪ್ರೌಢಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ, ಸರ್.ಎಂ.ವಿ ಪ್ರೌಢಶಾಲೆ, ಗುಡ್‌ ಶೆಫರ್ಡ್‌ ಪ್ರೌಢಶಾಲೆ, ಪ್ರಕೃತಿ ಪ್ರೌಢಶಾಲೆ, ಪ್ರಶಾಂತಿ ಬಾಲ ಮಂದಿರ ಪ್ರೌಢಶಾಲೆ, ಇಂಡಿಯನ್‌ ಪಬ್ಲಿಕ್ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ವಿದ್ಯಾರ್ಥಿಗಳ ಆಕರ್ಷಕ ಕವಾಯತು ನೋಡುಗರ ಮನಸೆಳೆಯಿತು.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಪುತ್ರಪ್ಪ ಎಸ್.ಭೂತಲ ಅವರು ತೆರೆದ ವಾಹನದಲ್ಲಿ ಸಾಗುತ್ತ, ಪಥ ಸಂಚಲನದ ತಂಡಗಳನ್ನು ವೀಕ್ಷಿಸಿದರು. ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಪೊಲೀಸ್ ಪಡೆ ಬ್ಯಾಂಡ್‌ ತಂಡ ರಾಷ್ಟ್ರಗೀತೆ ನುಡಿಸಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಇದೇ ಮೊದಲ ಬಾರಿಗೆ ನಗರಸಭೆ ವತಿಯಿಂದ 20ಪೌರ ಕಾರ್ಮಿಕರ ತಂಡ ಸ್ವಾತಂತ್ರ್ಯ ದಿನಾಚರಣೆಯ ಪಥ ಸಂಚಲನದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !