ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಸಲಹೆ

Last Updated 6 ಏಪ್ರಿಲ್ 2018, 10:39 IST
ಅಕ್ಷರ ಗಾತ್ರ

ಚನ್ನಪಟ್ಟಣ: ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಅರ್ಹ ಫಲಾನುಭವಿಗಳು ಸದುಪಯೋಗ
ಪಡಿಸಿಕೊಳ್ಳಬೇಕು ಎಂದು ಪಿಡಿಒ ಶ್ರೀನಿವಾಸಯ್ಯ ತಿಳಿಸಿದರು.ತಾಲ್ಲೂಕಿನ ದಶವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ದಶವಾರ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಅರಿವಿನ ಸಿಂಚನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಅಂಗವಿಕಲರಿಗೆ ವಿವಿಧ ಸೌಲಭ್ಯ ನೀಡುತ್ತಿದೆ. ಅಲ್ಲದೆ, ಸರ್ಕಾರದ ಯಾವುದೇ ಯೋಜನೆಯಲ್ಲಿ ಇಂತಿಷ್ಟು ಮೀಸಲಾತಿ ಹಣ ಅಂಗವಿಕಲರ ಕಲ್ಯಾಣಕ್ಕಾಗಿ ಮುಕ್ತ ನಿಧಿಯಾಗಿ ಇರಿಸಿದೆ ಎಂದರು.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇ3ರಷ್ಟು ಹಣ ಮೀಸಲು ಇಡಲಾಗಿದೆ. ಆ ಹಣವನ್ನುಅಗತ್ಯಕ್ಕನುಗುಣವಾಗಿ ಅರ್ಹ ಫಲಾನುಭವಿಗಳ ಸ್ವಾವಲಂಬನೆ ಬದುಕಿಗಾಗಿ ನೀಡಲಾಗುವುದು ಎಂದು ಹೇಳಿದರು.

ಅಂಗವಿಲಕ ಇಲಾಖೆಯ ಅಧಿಕಾರಿ ಸಿದ್ದಮಾದಯ್ಯ ಮಾತನಾಡಿ, ವಿವಿಧ ರೀತಿ ನ್ಯೂನತೆಗಳಿಗೆ ಒಳಗಾಗಿರುವವರಿಗೆ ಮಾಶಾಸನದಿಂದ ಪ್ರಾರಂಭ
ವಾಗಿ ವಿವಿಧ ಸಲಕರಣೆ ಹಾಗೂ ಸ್ವಯಂ ಉದ್ಯೋಗದವರೆಗೂ ಹಲವು ರೀತಿಯ ಯೋಜನೆಗಳು ದೊರೆಯುತ್ತಿವೆ. ಸದುಪಯೋಗಪಡಿಸಿಕೊಳ್ಳ
ಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಎಚ್.ಬ್ಯಾಡರಹಳ್ಳಿ ಸುರೇಶ್, ದಶವಾರ ಬಿ.ಎಂ. ಮಹದೇವ, ಅಬ್ಬೂರು ಕೃಷ್ಣ, ಗೋಪಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT