ಬುಧವಾರ, ಏಪ್ರಿಲ್ 21, 2021
23 °C

ಸಾಲದ ಎಟಿಎಂ ಕಾರ್ಡ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಡಿಸಿಸಿ‌ ಬ್ಯಾಂಕ್ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಮೂಲಕ ಸಾಲದ ಸೌಲಭ್ಯ ನೀಡುತ್ತಿದ್ದು, ಅದರ ಸಮರ್ಪಕ‌ ಸದ್ಬಳಕೆಯಾಗಬೇಕಾಗಿದೆ’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ತಾಲ್ಲೂಕಿನ ಕಲ್ಲೂಡಿಯಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಸಾಲದ ಎಟಿಎಂ ಕಾರ್ಡ್‌ಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿನ ಮಹಿಳೆಯರು ನಿತ್ಯದ ಕಾರ್ಯಗಳೊಂದಿಗೆ ಮನೆಯಲ್ಲಿಯೇ ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಆರಂಭಿಸಿ ಅದರ ಮೂಲಕ ಕಾರ್ಯಚಟುವಟಿಕೆಗಳನ್ನು ಬಲಪಡಿಸುವ ಜತೆಗೆ ಆರ್ಥಿಕವಾಗಿ ಸಬಲರಾಗಬೇಕಿದೆ. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ವ್ಯವಸಾಯ ಸೇವಾ ಉತ್ಪನ್ನ ಮಾರುಕಟ್ಟೆ ಮೂಲಕ ಸ್ಥಳೀಯ ‌ಸ್ತ್ರೀಶಕ್ತಿ‌ ಸ್ವಸಹಾಯ ಸಂಘಗಳನ್ನು ಗುರುತಿಸಿ ಅದರಲ್ಲಿನ ಫಲಾನುಭವಿಗಳಿಗೆ ಸಾಲದ ಸೌಲಭ್ಯಗಳನ್ನು ನೋಡಲಾಗುತ್ತಿದೆ. ಪಡೆದ ಹಣವನ್ನು ಉದ್ದೇಶಿತ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಬದುಕನ್ನು ‌ಹಸನಾಗಿಸಿಕೊಳ್ಳಬೇಕಾಗಿದೆ’ ಎಂದು‌ ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮಂತರೆಡ್ಡಿ ಮಾತನಾಡಿ, ‘ತಾಲ್ಲೂಕಿನಲ್ಲಿ ಇದುವರೆಗೂ ಪ್ರತಿ ಸ್ತ್ರೀ ಶಕ್ತಿ‌ ಕುಟುಂಬಕ್ಕೂ ಡಿಸಿಸಿ ‌ಬ್ಯಾಂಕ್ ವತಿಯಿಂದ ಸಾಲದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗೆ ಕಷ್ಟವಾದ ಸಂದರ್ಭದಲ್ಲೂ‌ ಕೂಡ ಬ್ಯಾಂಕ್ ಅವರಿಗೆ ಆಸರೆಯಾಗಿ ನಿಂತಿದೆ. ತಾಲ್ಲೂಕಿನಲ್ಲಿ ‌ಕೋಟ್ಯಂತರ ರೂಗಳ ಸಾಲವನ್ನು ಸಂಘಗಳ‌ ಮೂಲಕ ನೀಡಿ ಸಾವಿರಾರು ಬಡ ಕುಟುಂಬಗಳಿಗೆ ಬ್ಯಾಂಕ್ ಆಸರೆಯಾಗಿದೆ. ಪಡೆದ ಸಾಲವನ್ನು ಉಪಯುಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ‌ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನೊಂದಿಗೆ ಫಲಾನುಭವಿಗಳು‌ ಉತ್ತಮ‌ ಬಾಂಧವ್ಯ ಬೆಳೆಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 44 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಒಟ್ಟು ₹1.90 ಕೋಟಿ ಸಾಲವನ್ನು ಬ್ಯಾಂಕ್ ‌ವತಿಯಿಂದ ನೀಡಲಾಯಿತು.

ನಗರಸಭೆ ಅಧ್ಯಕ್ಷೆ ಕೆ.ಎಂ‌.ಗಾಯತ್ರಿ ಬಸವರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಮಹಮದ್ ಅಸ್ಲಾಂ, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಕೆ.ವಿ.ನಂಜುಂಡಗೌಡ, ನಾಗರಾಜ್, ಎಂ.ಜಿ.ಅಶ್ವತ್ಥನಾರಾಯಣಪ್ಪ, ಆಡಳಿತ ಮಂಡಳಿಯ ‌ನಿರ್ದೇಶಕರಾದ ನರಸಿಂಹಮೂರ್ತಿ, ವೆಂಕಟಾಚಲಪತಿ, ಎಂ.ಜಿ.ಕೃಷ್ಣಪ್ಪ, ಗಂಗಪ್ಪ, ಕೆ.ಎನ್.ವೆಂಕಟಪ್ಪ, ಅಶ್ವತ್ಥನಾರಾಯಣಗೌಡ, ಸರಸ್ವತಮ್ಮ, ಆನಂದ, ಮುದ್ದರಂಗಪ್ಪ, ಪ್ರಮೀಳಮ್ಮ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು