ಸೋಮವಾರ, ಅಕ್ಟೋಬರ್ 21, 2019
23 °C
ಮೂರನೇ ದಿನವು ಮುಂದುವರಿದ ಐಟಿ ದಾಳಿ

ಜಾಲಪ್ಪ ಸೋದರ ಅಳಿಯ ಜಿ.ಎಚ್.ನಾಗರಾಜ್ ಮನೆಯಲ್ಲಿ ಬೀಡುಬಿಟ್ಟ ಐಟಿ ಅಧಿಕಾರಿಗಳು

Published:
Updated:
ಜಾಲಪ್ಪ ಅವರ ಸೋದರ ಅಳಿಯ ಜಿ.ಎಚ್.ನಾಗರಾಜ್ ಅವರ ಮನೆ

ಚಿಕ್ಕಬಳ್ಳಾಪುರ: ನಗರದ ಪ್ರಶಾಂತ್ ನಗರದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಸೋದರ ಅಳಿಯ ಜಿ.ಎಚ್.ನಾಗರಾಜ್ ಅವರ ಮನೆ ಮೇಲೆ ನಡೆದಿರುವ ಐಟಿ ಅಧಿಕಾರಿಗಳ ದಾಳಿ ಮೂರನೇ ದಿನವು ಮುಂದುವರಿದಿದಿದೆ.

ಗುರುವಾರ ಬೆಳಿಗ್ಗೆಯಿಂದ ನಾಗರಾಜ್ ಅವರ ಮನೆಯಲ್ಲಿ ಆರಂಭಗೊಂಡ ತಪಾಸಣೆ ಕಾರ್ಯ ಈವರೆಗೂ ಮುಂದುವರಿದಿದೆ.

ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಕಾರ್ಯದರ್ಶಿಯೂ ಆಗಿರುವ ನಾಗರಾಜ್ ಅವರನ್ನು ಅಧಿಕಾರಿಗಳು ಶುಕ್ರವಾರ ಸಂಜೆ ಹೆಚ್ಚಿ‌ನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಕೋಲಾರಕ್ಕೆ ಕರೆದುಕೊಂಡು ಹೋಗಿ, ತಡರಾತ್ರಿ ವಾಪಾಸಾಗಿದ್ದಾರೆ.

Post Comments (+)