ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ಒಳಿತಿಗೆ ಶ್ರಮಿಸಿದ ಸಂತ’

Last Updated 4 ಡಿಸೆಂಬರ್ 2020, 8:15 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಸಮಾಜದಲ್ಲಿ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸ್ವಾಸ್ಥ್ಯ ಕಾಣಲು ಜನರಲ್ಲಿ ಜಾಗೃತಿ ಮೂಡಿಸಿದ ಕನಕದಾಸರ ಕೀರ್ತನೆಗಳು ಸರ್ವಕಾಲಕ್ಕೂ ಸಲ್ಲುತ್ತವೆ’ ಎಂದು ಜಿ.ಪಂ. ಸದಸ್ಯ ಕೆ. ಕೆಂಪರಾಜು ತಿಳಿಸಿದರು.

ನಗರದ ಕೆಂಪಾಂಬುದಿ ಕಚೇರಿಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಅವರು ಮಾತನಾಡಿದರು.

ಕನಕದಾಸರ ತತ್ವ, ಸಿದ್ಧಾಂತಗಳನ್ನು ಇಂದಿನ ಯುವಜನತೆಗೆ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು. ಸಮಾಜದ ಒಳಿತಿಗಾಗಿ ದೃಢ ಸಂಕಲ್ಪದಿಂದ ಮುನ್ನುಗ್ಗಿದ್ದರೆ ಯಶಸ್ಸು ಸಿಗುತ್ತದೆ. ಕನಕದಾಸರ ಸಾಹಿತ್ಯ ಇಂದಿಗೂ ಪ್ರಸ್ತುತ ಹಾಗೂ ಸಮಾನತೆಯ ಅರಿವನ್ನು ಮೂಡಿಸುತ್ತದೆ ಎಂದರು.

ಮುಖಂಡ ಸಿ.ಆರ್. ನರಸಿಂಹಮೂರ್ತಿ ಮಾತನಾಡಿ, ಕನಕದಾಸರು ಶತಮಾನಗಳ ಹಿಂದೆಯೇ ಸಮಾಜದ ಒಳಿತಿಗಾಗಿ ಸಂತರಾಗಿ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಮಾನತೆ, ಸೋದರತ್ವ ಹಾಗೂ ಭಕ್ತಿ ಭಾವನೆಯನ್ನು ಜನರಲ್ಲಿ ಬಿತ್ತುವ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದಾರೆ.‌ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಇದೇ ವೇಳೆ ಅಂತರರಾಷ್ಟ್ರೀಯ ಅಂಗವಿಕಲರ ಹಾಗೂ ವಕೀಲರ ದಿನಾಚರಣೆ ಅಂಗವಾಗಿ ಹಿರಿಯ ವಕೀಲರು ಹಾಗೂ ಅಂಗವಿಕಲರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಎಲ್. ವೆಂಕಟೇಶ್, ಗಂಗಾಧರಪ್ಪ, ರಾಮಚಂದ್ರಪ್ಪ, ವೇದಲವೇಣಿ ರಾಮು, ರಾಜಶೇಖರ್, ವೆಂಕಟೇಶ್, ರಂಗನಾಥ್ ಗೌಡ, ಮಂಜುನಾಥ್, ರಮೇಶ್ ನಾಯಕ್, ಭಕ್ತರಹಳ್ಳಿ ಶಿವಕುಮಾರ್, ನರೇಶ್ ರೆಡ್ಡಿ, ಹನುಮಂತನಾಯಕ್, ಜುನೈತ್ ಖಾನ್, ನಾಗರಾಜ್, ಚನ್ನಪ್ಪ, ಮಾರುತಿರೆಡ್ಡಿ, ರವಿ, ಸತೀಶ್, ನಾರಾಯಣಪ್ಪ, ನಂಜುಂಡಪ್ಪ, ಬಾಲಪ್ಪ, ನವೀನ್, ಗಾಯತ್ರಿ, ಹನೀಸ್ ಫಾತಿಮಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT