ಶನಿವಾರ, ಜನವರಿ 29, 2022
19 °C
ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಆಕ್ರೋಶ

ಮೋದಿ ಭೇಟಿಗೆ ಸಿದ್ದರಾಮಯ್ಯನ ಅನುಮತಿ ಬೇಕಾ?–ಎಚ್‌.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರೇಳು ಬಾರಿ ಭೇಟಿ ಮಾಡಿದ್ದೇನೆ. ಭೇಟಿ ಮಾಡಲು ಸಿದ್ದರಾಮಯ್ಯನ ಅನುಮತಿ ಪಡೆಯಬೇಕಾ?’ ಎಂದು ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. 

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ಯಾರದೇ ಬಿ ಟೀಂ ಅಲ್ಲ. ಕೋಲಾರ, ಚಿಕ್ಕಬಳ್ಳಾಪುರ ವಿಧಾನsi ಪರಿಷತ್ ಕ್ಷೇತ್ರದಲ್ಲಿ ಮೂರು ಪಕ್ಷಗಳು ಹೋರಾಡುತ್ತಿವೆ. ಕಾಂಗ್ರೆಸ್‌ನಿಂದ ದೂರವಿದ್ದು ಪಕ್ಷವನ್ನು ಸಂಘಟಿಸುತ್ತೇವೆ. ಈ ಹಿಂದೆ ಪ್ರಧಾನಿ ಆಗಿದ್ದ ಮನನೋಹನ್ ಸಿಂಗ್ ಹಾಗೂ ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದೇನೆ. ಎಲ್ಲರೂ ನನ್ನನ್ನು ಗೌರವದಿಂದ ಕಂಡಿದ್ದರು’ ಎಂದು ಹೇಳಿದರು.

‘ಈ ಹಿಂದೆ ನನ್ನ ಜಿಲ್ಲೆ ಹಾಸನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ರಾಹುಲ್ ಗಾಂಧಿ, ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದು ಕರೆದಿದ್ದರು. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಚೋರ್ ಪಕ್ಷ ಎಂದಿದ್ದಾರೆ ’ ಎಂದು ಅವರು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು