ಬಾಯಿ ಆರೋಗ್ಯವು ಜೀವನದ ಗುಣಮಟ್ಟ ಹಾಗೂ ದೇಹದ ಸೌಂದರ್ಯದ ಪ್ರಮುಖ ಅಂಶ. ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಹಲ್ಲುಗಳ ಆರೋಗ್ಯವೇ ದೇಹದ ಭಾಗ್ಯ ಎಂದು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ದಂತ ವಿಜ್ಞಾನದ ಡೀನ್ ಡಾ. ಕವಿತಾ ಪ್ರಸಾದ್ ತಿಳಿಸಿದರು.

ತಾಲ್ಲೂಕಿನ ಕೈವಾರದಲ್ಲಿ ಸೋಮವಾರ ನವೀಕರಿಸಿದ ಎಂ.ಎಸ್. ರಾಮಯ್ಯ ಗ್ರಾಮೀಣ ದಂತ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಹಲ್ಲುಗಳ ಮಹತ್ವದ ಕುರಿತು ಮಾತನಾಡಿದರು.

ಹಲ್ಲುಗಳ ಆರೋಗ್ಯದ ಬಗ್ಗೆ ಬಹುತೇಕ ಮಂದಿ ಕಡೆಗಣಿಸುತ್ತಾರೆ. ಹಲ್ಲಿನ ಹುಳುಕು, ವಸಡಿನ ರೋಗ, ಬಾಯಿ ಕ್ಯಾನ್ಸರ್ ಮುಂತಾದ ಸಾಮಾನ್ಯ ಬಾಯಿಯ ಕಾಯಿಲೆಗಳು, ಅವುಗಳ ಕಾರಣ, ಪ್ರಾರಂಭಿಕ ಲಕ್ಷಣ ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ಅರಿವು ಇದ್ದರೆ ಈ ಕಾಯಿಲೆಗಳನ್ನು ಬಹುಪಾಲು ತಡೆಗಟ್ಟಬಹುದು ಎಂದು ಹೇಳಿದರು.

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಮಾತನಾಡಿ, ಸಂಸ್ಥೆಗಳು ಸಮಾಜಮುಖಿಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೈವಾರ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ರಾಮಯ್ಯ ಸಂಸ್ಥೆ ವತಿಯಿಂದ ಹಲವಾರು ಆರೋಗ್ಯದ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರಾಮಯ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ.ಕೆ.ಪುಷ್ಪಾಂಜಲಿ, ಇತ್ತೀಚಿಗೆ ತಂಬಾಕು ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಕೈವಾರದ ದಂತ ಘಟಕದಲ್ಲಿ ತಂಬಾಕು ನಿಯಂತ್ರಣ ಕೇಂದ್ರ ತೆರೆಯಲಾಗಿದೆ ಎಂದರು.

ದಂತ ಸುರಕ್ಷಾ ಮೊಬೈಲ್ ಅಪ್ಲಿಕೇಶನ್ ಮತ್ತು ಆರೋಗ್ಯ ಶಿಕ್ಷಣ ಕೈಪಿಡಿ ಬಿಡುಗಡೆ ಮಾಡಲಾಯಿತು.

ರಾಮಯ್ಯ ಅನ್ವಯಿಕ ವಿಶ್ವವಿದ್ಯಾಲಯದ ಡಾ.ವೆಂಕಟೇಶ್, ರಿಜಿಸ್ಟ್ರಾರ್ ಅಶೋಕ್ ರಾವ್, ಡಾ. ತನುಜಾ, ಡಾ. ಕಾರ್ತಿಕ್, ಡಾ. ಶ್ವೇತಾ, ಡಾ. ಅನಿತಾ, ಡಾ. ವೀರಣ್ಣ, ಡಾ. ಶಿವಕುಮಾರ್, ಕೈವಾರ ಮಠದ ಖಜಾಂಚಿ ಆರ್.ಪಿ.ಎಂ. ಸತ್ಯನಾರಾಯಣ, ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-16-1035232939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.