ಕೈವಾರ(ಚಿಂತಾಮಣಿ): ತಾಲ್ಲೂಕಿನ ಕೈವಾರದಲ್ಲಿ ಯೋಗಿನಾರೇಯಣ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಮೇ 31ರಂದು ರಾಮಭವತಾರ ಮಂತ್ರಿ ಕೋಟಿ ಜಪಯತ್ನವು 24 ಗಂಟೆಗಳ ಕಾಲ ಸಾಮೂಹಿಕವಾಗಿ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಈ ಪ್ರಕಾರ ಭಾನುವಾರ ಬೆಳಗ್ಗೆ 6 ಗಂಟೆಗೆ ಗವಿ ಯೋಗನರಸಿಂಹ ದೇಗುಲದ ಯಾಗಶಾಲೆ ವೈಕುಂಠದಲ್ಲಿ ಆರಂಭವಾಗಲಿರುವ ಜಪಯಜ್ಞವು ಸೋಮವಾರ ಬೆಳಗ್ಗೆ 6 ಗಂಟೆವರೆಗೆ ನಡೆಯಲಿದೆ. ಭಾನುವಾರ ಹುಣ್ಣಿಮೆ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಸದ್ಗುರು ತಾತಯ್ಯನವರಿಗೆ ಅಭಿಷೇಕ, 11 ಗಂಟೆಗೆ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಅವರಿಂದ ವಿಶೇಷ ಪ್ರವಚನ, ಮಧ್ಯಾಹ್ನ 12ಕ್ಕೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ರಥೋತ್ಸವ, ಸಂಜೆ 4 ಗಂಟೆಗೆ ಆಲಂಬಗಿರಿಯಲ್ಲಿ ಗಿರಿ ಪ್ರದಕ್ಷಿಣೆ ಹಾಗೂ ಹುಣ್ಣಿಮೆ ದೀಪೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-16-64370218

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.