ಚಿಂತಾಮಣಿ: ತಾಲ್ಲೂಕಿನ ಕೈವಾರ ಕ್ರಾಸ್ನಲ್ಲಿರುವ ಶನಿಮಹಾತ್ಮ ದೇವಸ್ಥಾನದಲ್ಲಿ ಜೇಷ್ಠ ಮಾಸದ ಅಮಾವಾಸ್ಯೆ ದಿನವಾದ ಶನಿವಾರ ಶನೇಶ್ವರ ಜಯಂತಿ ಆಚರಿಸಲಾಯಿತು.

ದೇವಾಲಯಕ್ಕೆ ತಳಿರು, ತೋರಣ ಕಟ್ಟಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ರಂಗೋಲಿ ಬಿಡಿಸಲಾಗಿತ್ತು. ಶನೇಶ್ವರ ಜಯಂತಿ ಪ್ರಯುಕ್ತ ಬೆಳಗಿನ ಜಾವ ದೇವರ ವಿಗ್ರಹಕ್ಕೆ ವಿಶೇಷ ಫಲಪಂಚಾಮೃತ ಅಭಿಷೇಕ ಮಾಡಲಾಯಿತು.ಹೋಮ ಹವನ ಮಾಡಿ ಪೂರ್ಣಹುತಿ ನೀಡಲಾಯಿತು.

ಶನೇಶ್ವರ ಮತ್ತು ಅಭಯ ಆಂಜನೇಯಗೆ ವಿವಿಧ ಪುಷ್ಪ ಮತ್ತು ತುಳಸಿಹಾರಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸಾಮೂಹಿಕವಾಗಿ ಶ್ರೀರಾಮ ತಾರಕ ಮಂತ್ರ ಜಪ ಮಾಡಿದರು. ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಮಾಡಲಾಯಿತು. ಜೈ ಶ್ರೀ ರಾಮ ಘೋಷಣೆಗಳು ಮೊಳಗಿದವು.

ಕೈವಾರ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-16-1840857213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.