ಕೈವಾರ (ಚಿಂತಾಮಣಿ): ತಾಲ್ಲೂಕಿನ ಕೈವಾರದ ಗವಿ ಬಳಿ ಪ್ರಕೃತಿ ಮಡಿಲಲ್ಲಿ ನೆಲೆಸಿದ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಕೈವಾರ ತಾತಯ್ಯ ಅವರ 300ನೇ ಜಯಂತಿ ಅಂಗವಾಗಿ 10ನೇ ತಿಂಗಳ ರಾಮಭವತಾರಕ ಮಂತ್ರದ ರಾಮಕೋಟಿ ಜಪಯಜ್ಞವನ್ನು ಭಾನುವಾರ ಆಯೋಜಿಸಲಾಯಿತು.

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಂ ಮಾತನಾಡಿ, ‘ಮಾನವ ಆಸೆಯೆಂಬ ಪಾಶದಲ್ಲಿ ಬಂಧಿತರಾಗಿರುವುದಕ್ಕೆ ಮನಸ್ಸೇ ಕಾರಣ. ಜ್ಞಾನದ ಉದಯ ಮನಸ್ಸಿನಿಂದ ಆರಂಭವಾಗುತ್ತದೆ’ ಎಂದು ಹೇಳಿದರು.

ತನ್ನನ್ನು ತಾನು ಅರಿಯಬೇಕು ಎಂದು ಎಲ್ಲ ಸಂತರು ಉಪದೇಶ ಮಾಡಿದ್ದಾರೆ. ತನ್ನನ್ನು ತಾನು ಅರಿಯುವುದೇ ಮೋಕ್ಷ. ದುರ್ಗುಣಗಳನ್ನು ಒಳಗೊಂಡ ಮನಸ್ಸು ಈ ಸಾಧನೆ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಯೋಗಿನಾರೇಯಣ ಮಠದಲ್ಲಿ ಅರಂಭದಲ್ಲಿ ಘಂಟಾನಾದ, ಸುಪ್ರಭಾತ, ಗೋಪೂಜೆ ನೆರವೇರಿಸಲಾಯಿತು.

ಉಪನ್ಯಾಸಕ ವೆಂಕಟರಮಣಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.

ವಿದುಷಿ ಉಷಮ್ಮ, ಸರೋಜಮ್ಮ, ದಾಕ್ಷಾಯಿಣಿ, ಯೋಗಿನಾರೇಯಣ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಆರ್.ಪಿ.ಎಂ.ಸತ್ಯನಾರಾಯಣ್, ವಾನರಾಶಿ ಬಾಲಕೃಷ್ಣ ಭಾಗವತರ್, ಸದಸ್ಯರಾದ ಕೆ.ನರಸಿಂಹಪ್ಪ, ಕೆ.ವಿ.ಸುರೇಶ್, ಬಿ.ಎನ್. ಕೃಷ್ಣಯ್ಯ, ಉಷಮ್ಮ, ಸರೋಜಮ್ಮ, ದಾಕ್ಷಾಯಿಣಿ ಹಾಗೂ ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-16-1379769390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.