ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆಬಳಸದಿದ್ದರೆ ಉಳಿಗಾಲವಿಲ್ಲ: ಎ.ಎಂ. ತ್ಯಾಗರಾಜ್

Last Updated 29 ನವೆಂಬರ್ 2020, 2:01 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಕನ್ನಡ ಅನ್ನದ ಭಾಷೆ, ನಮ್ಮ ಶ್ರಮದ ಭಾಷೆ. ಅದನ್ನು ನಾವು ಬಳಸಿ ಬೆಳೆಸದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ’ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ. ತ್ಯಾಗರಾಜ್ ತಿಳಿಸಿದರು.

ನಗರದ ಸಿ.ಆರ್. ಲೇಔಟ್‌ನ ರಾಜ್ಯ ಸರ್‌ ಎಂ.ವಿ. ಕಾರ್ಮಿಕರ ಸೇವಾ ಸಂಘದ ತಾಲ್ಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಗುರುತಿನಚೀಟಿ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್‌ ಎಂ.ವಿ. ಕಾರ್ಮಿಕರ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕಾರ್ಮಿಕರ ಹಕ್ಕುಗಳು, ಕಾರ್ಮಿಕ ಸಂಘಗಳ ಉದ್ದೇಶ ಕುರಿತು ವಿವರಿಸಿದರು. ಜಿಲ್ಲಾ ಅಧ್ಯಕ್ಷ ಜಿ.ವಿ. ಮೂರ್ತಿ ಕನ್ನಡದ ಕಾರ್ಮಿಕರ ನೋವುಗಳ ಕುರಿತು ಮಾತನಾಡಿದರು.

ತಾಲ್ಲೂಕು ಅಧ್ಯಕ್ಷ ಡಿ.ಆರ್. ನಾರಾಯಣ ಸ್ವಾಮಿ ಗಾರ್ಮೆಂಟ್ಸ್ ನೌಕರರ ಕಷ್ಟ ಸಂಕೋಲೆ ಕುರಿತು ಮಾತನಾಡಿದರು. ಕಲಾವಿದ ಕೆ. ರವಿಕುಮಾರ್ ಅಸಂಘಟಿತ ಕಾರ್ಮಿಕರಿಗೆ ಸಂಬಂಧಿಸಿದ ನೋವುಗಳ ಬಗ್ಗೆ ವಿವರಿಸಿದರು. ತಾಲ್ಲೂಕು ಉಪಾಧ್ಯಕ್ಷ ಕೆ.ಎಂ. ಮುನಿಕೃಷ್ಣ ರೇಷ್ಮೆ ನೌಕರರ ಸಮಸ್ಯೆ ಪರಿಹರಿಸಲು ಇರುವ ಮಾರ್ಗಗಳ ಬಗ್ಗೆ ಬೆಳಕು ಚೆಲ್ಲಿದರು.

ಸರ್‌ ಎಂ.ವಿ. ಕಾರ್ಮಿಕರ ಸೇವಾ ಸಂಘದ ತಾಲ್ಲೂಕು ಖಜಾಂಚಿ ಹರೀಶ್, ಕಾರ್ಯದರ್ಶಿ ಕೃಷ್ಣಪ್ಪ, ಸಹ ಸಂಚಾಲಕ ಸದಾಶಿವ, ನರಸಿಂಹ, ಕದೀರ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT