ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಹೃದಯದ ಭಾಷೆಯಾಗಬೇಕು

Last Updated 1 ನವೆಂಬರ್ 2019, 14:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶಗಳನ್ನು ಒಟ್ಟುಗೂಡಿಸಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರ ಶ್ರಮವನ್ನು ಗೌರವಿಸುವ ರೀತಿ ನಾವು ಬಾಳಿದಾಗ ಮಾತ್ರ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಕನ್ನಡ ಕೇವಲ ಭಾಷೆಯಾಗಿ ಉಳಿಯದೆ ಹೃದಯದ ಭಾಷೆಯಾಗಬೇಕು’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕನ್ನಡ ಸೇವಾ ಸಮಿತಿ ಹಾಹೂ ವಿದ್ಯಾಗಣಪತಿ ಸ್ನಹಿತರ ಬಳಗ ವತಿಯಿಂದ ನಗರದ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯವನ್ನು ಚಿಕ್ಕ ಮಕ್ಕಳಿಗೆ ಅಭ್ಯಾಸ ಮಾಡುವಂತೆ ಪೋಷಕರು ಪ್ರೋತ್ಸಾಹ ನೀಡಬೇಕು. ನಮ್ಮ ಕನ್ನಡಿಗರು ವಿಶಾಲ ಹೃದಯದ ಜನ. ಕರ್ನಾಟಕ ರಾಜ್ಯ ಅತಿ ಹೆಚ್ಚು ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ರಾಜ್ಯ ನಿರ್ಮಲವಾದ ಶಾಂತಿಯ ತೋಟವಾಗಬೇಕಾದೆ ನಾವು ಜಾತಿ, ಧರ್ಮವನ್ನು ಮೀರಿ ಬೆಳೆಯಬೇಕು. ಕುವೆಂಪು ಅವರ ಪ್ರಕಾರ ನಾವು ಯಾವತ್ತಿಗೂ ಅಲ್ಪ ಮಾನವರಾಗದೆ ವಿಶ್ವ ಮಾನವರಾಗಬೇಕು’ ಎಂದರು.

ಮುಖಂಡರಾದ ಕೆ.ವಿ ನಾಗರಾಜ್, ಮುಖಂಡರಾದ ಮುನಿಕೃಷ್ಣ, ಶ್ರೀನಿವಾಸ್, ಗೋವಿಂದರೆಡ್ಡಿ, ನಾಗರಾಜ್, ಮುನಿರಾಜ್, ಆನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT