ಚಿಕ್ಕಬಳ್ಳಾಪುರ: ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಮತ್ತು ವೃಷಭಾವತಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಿತು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು, ಜಲಮಂಡಳಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಯೋಜನೆಯ ಸಂಸ್ಕರಿಸಿದ ನೀರಿನ ಗುಣಮಟ್ಟದ ಕುರಿತು ವಿಸ್ತೃತ ಚರ್ಚೆ ನಡೆಸಿದರು.

ಬೆಂಗಳೂರಿನ ಕೊಳಚೆ ನೀರನ್ನು ಈ ಯೋಜನೆಗಳಡಿ ಎರಡು ಹಂತದಲ್ಲಿ ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಶಾಶ್ವತ ನೀರಾವರಿ ಹೋರಾಟಗಾರರು, ರೈತ ಸಂಘಟನೆಗಳ ಮುಖಂಡರು ಈ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಿ ಹರಿಸಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಇತ್ತೀಚೆಗೆ ಚಿಕ್ಕಬಳ್ಳಾಪುರ ಬಂದ್ ಸಹ ನಡೆಯಿತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವರು ಈ ಮಹತ್ವದ ಸಭೆ ನಡೆಸಿದ್ದಾರೆ.

ವಿಜ್ಞಾನಿಗಳು ಹೇಳಿದ್ದೇನೆ: ಸಭೆಯಲ್ಲಿ ಭಾಗಿಯಾಗಿದ್ದ ಐಐಎಸ್ಸಿ ವಿಜ್ಞಾನಿಗಳು, ‘ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಅಂತರ್ಜಲ ವೃದ್ಧಿಸಿದೆ. 1,800 ಅಡಿಗೂ ನೀರು ಸಿಗುತ್ತಿರಲಿಲ್ಲ. ಆದರೆ ಈಗ 50ರಿಂದ 100 ಅಡಿಗೆ ನೀರು ಸಿಗುತ್ತಿದೆ. ನೀರಿನ ಗುಣಮಟ್ಟ ವೃದ್ಧಿಸಿದೆ. ಅಂತರ್ಜಲ ಐದು ಹಂತದಲ್ಲಿ ಶುದ್ಧೀಕರಣವಾಗುತ್ತಿದೆ. ಈ ನೀರನ್ನು ಬಳಸುತ್ತಿರುವ ಜನ ಜಾನುವಾರುಗಳ ಆರೋಗ್ಯದಲ್ಲಿ ಯಾವ ಸಮಸ್ಯೆಯೂ ಇಲ್ಲ’ ಎಂದು ವಿವರಿಸಿದರು.

ಕೃಷಿ ಬೆಳೆಗಳಲ್ಲೂ ಸಮಸ್ಯೆ ಇಲ್ಲ. ಮಣ್ಣಿನ ಗುಣಮಟ್ಟವೂ ವೃದ್ಧಿಸಿದೆ. ಐಐಎಸ್ಸಿ ಹಲವು ಬಾರಿ ಸಂಶೋಧನೆ ನಡೆಸಿದ್ದು ನೀರಿನಲ್ಲಿ ಹಾಗೂ ಅಂತರ್ಜಲದಲ್ಲಿ ಯಾವುದೇ ಲೋಹದ ಅಂಶಗಳೂ ಪತ್ತೆಯಾಗಿಲ್ಲ ಎಂದು ಪ್ರತಿಪಾದಿಸಿದರು.

ವಾಸನೆ, ಬಣ್ಣ ಇಲ್ಲದೆ ಶುದ್ಧ ನೀರು ಲಭ್ಯವಾಗುತ್ತಿದೆ. ಕೆರೆಗಳ ವ್ಯಾಪ್ತಿಯಲ್ಲಿ ಹಕ್ಕಿಗಳ ಸಂಕುಲವೂ ಹೆಚ್ಚಿದೆ, ಜಲಚರಗಳು ಆರೋಗ್ಯವಾಗಿವೆ. ಈ ಯೋಜನೆ ಇಡೀ ದೇಶ ಅನುಸರಿಸಬೇಕು ಎಂದು ಹಲವು ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಬಾವಿಗಳೂ ತುಂಬುತ್ತಿವೆ. ಕೋಲಾರದಲ್ಲಿ ನೀರು ಹರಿಯದ ಪ್ರದೇಶದ ಮಣ್ಣಿಗೂ ನೀರು ಹರಿಯುತ್ತಿರುವ ಮಣ್ಣಿನ ಗುಣಮಟ್ಟಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ವಿವರಿಸಿದರು.

ವಿಜ್ಞಾನಿಗಳಿಂದ ಸಮಗ್ರ ಮಾಹಿತಿ ಪಡೆದ ಸಚಿವ ಎನ್.ಎಸ್ ಬೋಸರಾಜು ಮಾತನಾಡಿ, ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ಸಂಸ್ಕರಿಸಿದ ನೀರು ಅತ್ಯುತ್ತಮ ಗುಣಮಟ್ಟದ್ದಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸುದೀರ್ಘ ಸಂಶೋಧನೆಗಳಿಂದ ಇದು ದೃಢಪಟ್ಟಿದೆ. ಈ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಕೆಲವು ಕಡೆ ಒಳ್ಳೆಯ ಕೆರೆ ನೀರಿಗೆ ಊರಿನ ಕೊಳಚೆ ನೀರನ್ನು ಹರಿಸಿ ಮಲಿನಗೊಳಿಸಲಾಗುತ್ತಿದೆ ಎಂದರು.

ಸಂಶೋಧನೆ ಮುಂದುವರಿಕೆಗೆ ಪ್ರಸ್ತಾಪ: ಯೋಜನೆ ವ್ಯಾಪ್ತಿಯ ಕೆರೆಗಳಲ್ಲಿನ ಮೀನಿನ ಆರೋಗ್ಯವನ್ನು ಹಾಗೂ ಮಾಂಸದ ಗುಣಮಟ್ಟವನ್ನು ಆರು ತಿಂಗಳಿಗೊಮ್ಮೆ ಪರಿಶೀಲಿಸಲು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಐದರಿಂದ ಹತ್ತು ವರ್ಷಗಳವರೆಗೆ ಐಐಎಸ್ಸಿಯು ಈ ಯೋಜನೆ ಬಗ್ಗೆ ಸಂಶೋಧನೆ ಮುಂದುವರೆಸಬೇಕು ಎಂದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿ, ಬೆಂಗಳೂರು ನಗರದಲ್ಲಿರುವ 33 ಎಸ್ಟಿಪಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 13 ಎಸ್ಟಿಪಿಗಳಲ್ಲಿ ಈಗಾಗಲೇ ಡಿಸ್ಕ್ ಫಿಲ್ಟರೇಷನ್ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.

ಹೊಸದಾಗಿ 600 ಎಂಎಲ್ಡಿ ಕೊಳಚೆ ನೀರು ಶುದ್ಧೀಕರಣಕ್ಕೂ ಸರ್ಕಾರ ಅನುಮೋದನೆ ನೀಡಿದೆ. ಜೂನ್ ಅಂತ್ಯಕ್ಕೆ ಕೆ.ಸಿ ವ್ಯಾಲಿಗೆ 100 ಎಂಎಲ್ಡಿ ಹೆಚ್ಚುವರಿ ನೀರು ನೀಡಲಾಗುವುದು ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-18-885318282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.