ಬಾಗೇಪಲ್ಲಿ: ಕಿತ್ತುಹೋದ ಡಾಂಬರು, ರಸ್ತೆಯೆಲ್ಲ ಕಲ್ಲು, ಜಲ್ಲಿ, ಮೊಣಕಾಲುದ್ದ ಗುಂಡಿ, ಚರಂಡಿ ಇಲ್ಲದೇ ಕಲುಷಿತ ನೀರು ಸಂಗ್ರಹ, ವಾಹನಗಳ ಸವಾರರ ಪರದಾಟ... ಹೀಗೆ ಪಟ್ಟಣದಿಂದ ಸಾರಿಗೆ ಬಸ್ ಡಿಪೊಗೆ ಸಂಚರಿಸುವ ರಸ್ತೆ ಡಾಂಬರು ಆಗದೇ ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ.

ಪಟ್ಟಣದ ಮುಖ್ಯರಸ್ತೆಯಿಂದ ಪ್ರವಾಸಿ ಮಂದಿರದ ಪಕ್ಕ ಸಾರಿಗೆ ಡಿಪೊ ಘಟಕಕ್ಕೆ ಸಂಚರಿಸುವ ರಸ್ತೆ ಇದೆ. ಇದೇ ರಸ್ತೆ ಮೂಲಕ ಹೊಸಹುಡ್ಯ ಗ್ರಾಮಕ್ಕೆ ಸಂಪರ್ಕ ರಸ್ತೆ ಇದೆ. ಪ್ರತಿದಿನ ಗ್ರಾಮದ ಜನರು ಸಂಚರಿಸುತ್ತಾರೆ.

ಪಟ್ಟಣದ ಮುಖ್ಯರಸ್ತೆಯಿಂದ ರಾಜ್ಯ ರಸ್ತೆ ಸಾರಿಗೆ ಘಟಕದ ತಿರುವಿನವರೆಗೆ ರಸ್ತೆಗೆ ಡಾಂಬರು ಮಾಡಿಲ್ಲ. ಬಸ್, ಲಾರಿ ಸಂಚಾರದಿಂದ ಮೊಣಕಾಲುದ್ದ ಗುಂಡಿ ಬಿದ್ದಿವೆ.

ಇದೇ ರಸ್ತೆಯಲ್ಲಿ ಕಾರು, ಆಟೊ, ದ್ವಿಚಕ್ರ ವಾಹನ ರಿಪೇರಿ ಅಂಗಡಿ ಇವೆ. ಪ್ರತಿದಿನ ನೂರಾರು ಜನರು ವಾಹನಗಳಲ್ಲಿ ಸಂಚರಿಸುತ್ತಾರೆ. ನೀರಿನ ಗುಂಡಿ ಕಾಣದೇ, ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯವಾಗಿರುವ ಘಟನೆಗಳು ವರದಿಯಾಗಿವೆ.

ಹೊಸಹುಡ್ಯ ಗ್ರಾಮದಿಂದ ಡಿಪೊ ತಿರುವಿನವರೆಗೆ ರಸ್ತೆ ಉತ್ತಮವಾಗಿದೆ. ಆದರೆ ಡಿಪೊ ತಿರುವಿನಿಂದ ಮುಖ್ಯರಸ್ತೆಯವರೆಗೆ ತೊಂದರೆ ಆಗಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಮಕ್ಕಳನ್ನು, ರೋಗಿಗಳನ್ನು ಬೈಕ್, ಆಟೊಗಳಲ್ಲಿ ಕರೆದುಕೊಂಡು ಹೋಗಬೇಕಾಗಿದೆ ಎಂದು ಗ್ರಾಮದ ಮುಖಂಡ ಹೊಸಹುಡ್ಯ ಶ್ರೀನಿವಾಸರೆಡ್ಡಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-16-1481102059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.