ಬಾಗೇಪಲ್ಲಿ: ಪಟ್ಟಣದ 5, 6 ಮತ್ತು 7ನೇ ವಾರ್ಡ್ಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಶನಿವಾರ ಭೇಟಿ ನೀಡಿದರು. ವಾರ್ಡ್ಗಳಲ್ಲಿನ ಚರಂಡಿ, ರಸ್ತೆ ಮತ್ತು ಕುಡಿಯುವ ನೀರಿನ ಬಗ್ಗೆ ಸ್ಥಳೀಯರು ಅಹವಾಲು ಸಲ್ಲಿಸಿದರು.

ಪಟ್ಟಣದ ನ್ಯಾಷನಲ್ ಕಾಲೇಜಿನ ಪಕ್ಕದ ರಸ್ತೆಯ 5ನೇ ವಾರ್ಡ್ನಲ್ಲಿ ಅನೇಕ ಮನೆ ಇದೆ. ಇಲ್ಲಿ ಮಕ್ಕಳು, ಹಿರಿಯರು ಓಡಾಡಲು ಕಷ್ಟವಾಗಿದೆ. ರಾತ್ರಿ ಬೀದಿದೀಪ ಬೆಳಕು ನೀಡುತ್ತಿಲ್ಲ. ಚರಂಡಿ ನಿರ್ಮಿಸಬೇಕು ಎಂದು ಮಹಿಳೆಯರು ಮನವಿ ಸಲ್ಲಿಸಿದರು. ಚರಂಡಿ ಇಲ್ಲದೇ ರಸ್ತೆಗಳ ಮೇಲೆ ಕಲುಷಿತ ನೀರು ಹರಿಯುತ್ತಿದೆ ಎಂದು ಮಹಿಳೆಯರು ತಿಳಿಸಿದರು.

ಪಟ್ಟಣದ ಕೊತ್ತಪಲ್ಲಿ ರಸ್ತೆಯ ಮದೀನಾ ಮಸೀದಿ ಮುಂದೆ ರಸ್ತೆಯಲ್ಲಿ ಕಲುಷಿತ ನೀರು ಸಂಗ್ರಹ ಆಗಿದೆ. ಕೂಡಲೇ ಸ್ವಚ್ಛತೆ ಮಾಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ಗೆ ಶಾಸಕ ಸೂಚನೆ ನೀಡಿದರು.

ರಸ್ತೆ, ಚರಂಡಿಗಳ ಅವ್ಯವಸ್ಥೆ, ಬೀದಿದೀಪ ಇಲ್ಲ ಎಂದು ನಿವಾಸಿಗಳು ಅಹವಾಲು ಸಲ್ಲಿಸಿದ್ದಾರೆ. ಪುರಸಭೆ ವಿಶೇಷ ಅನುದಾನಗಳಿಂದ ರಸ್ತೆ, ಚರಂಡಿ ಮತ್ತು ಬೀದಿದೀಪ ಹಾಕಿಸಲು ಪುರಸಭೆ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಎಂ.ಶ್ರೀನಿವಾಸ್, ಕಂದಾಯ ಅಧಿಕಾರಿ ಅಥಾವುಲ್ಲಾ, ಅಧಿಕಾರಿ ಕೃಷ್ಣಪ್ಪ, ಎ.ನಂಜುಂಡಪ್ಪ, ಎ.ಶ್ರೀನಿವಾಸ್, ನಯಾಜ್, ರೇಷ್ಮಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-16-1054845810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.